Loading video

ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ; ವಿಡಿಯೋ ವೈರಲ್

|

Updated on: Nov 28, 2024 | 12:49 PM

ತಮಿಳುನಾಡಿನ ಪೊಲ್ಲಾಚಿಯ ತೆಂಗಿನಕಾಯಿ ವ್ಯಾಪಾರಿಯ ಮದುವೆಯ ಊಟದ ವ್ಯವಸ್ಥೆಯೊಂದರ ವಿಡಿಯೋ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.ತೆಂಗಿನಕಾಯಿ ಥೀಮ್ ಅನ್ನು ಬಳಸಿ ಅಲಂಕರಿಸಲಾದ ಮದುವೆ ಮನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಒಡೆದ ತೆಂಗಿನಕಾಯಿಯ ಆಕಾರದಲ್ಲಿರುವ ಸೀಟುಗಳು ಮತ್ತು ತೆಂಗಿನಕಾಯಿ ಹೋಳಿನಂತಹ ಟೇಬಲ್‌ಗಳು ಈ ವಿಶೇಷ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸಿವೆ.

ತಮಿಳುನಾಡು: ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮಿಡಿಯಾಗಳಲ್ಲಿ ವೈರಲ್​ ಆಗುತ್ತಿರುತ್ತವೆ. ಆದರೆ ಈಗ ಮದುವೆ ಊಟದ ವ್ಯವಸ್ಥೆಯೊಂದರ ವಿಡಿಯೋ ಎಲ್ಲೆಡೆ ಭಾರೀ ಸುದ್ದು ಮಾಡುತ್ತಿದೆ. ಹೌದು ತಮಿಳುನಾಡಿನ ಪೊಲ್ಲಚ್ಚಿಯ ತೆಂಗಿನಕಾಯಿ ವ್ಯಾಪಾರಿಯ ಮನೆಯ ಮದುವೆಯ ಸಂಭ್ರಮಕ್ಕಿಂತ ಅಲ್ಲಿ ಸಿದ್ಧಗೊಂಡ ಊಟೋಪಚಾರದ ವ್ಯವಸ್ಥೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ತನ್ನ ತೆಂಗಿನ ಕಾಯಿಯ ವ್ಯಾಪಾರದ ಥೀಮ್​ ಇಟ್ಟುಕೊಂಡು ಇಡೀ ಮದುವೆ ಮನೆಯನ್ನು ಸಿಂಗಾರಗೊಳಿಸಲಾಗಿದೆ. ಊಟಕ್ಕೆ ಕೂರುವ ಅತಿಥಿಗಳಿಗೆ ಒಡೆದು ಹೊಳಾದ ತೆಂಗಿನಕಾಯಿ ಮಾದರಿಯ ಒಂದು ಗೂಡಿನಲ್ಲಿ ಕೂರಿಸಿ ತೆಂಗಿನಕಾಯಿ ಹೋಳಿನ ರೀತಿಯ ಟೇಬಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನದ ವ್ಯವಸ್ಥೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗುತ್ತಿದೆ. ​​

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ