Viral: ಮದುವೆ ಮಂಟಪದಲ್ಲಿ ಫ್ರೆಂಡ್ಸ್‌ ಜೊತೆ ಲೂಡೋ ಗೇಮ್‌ ಆಡುತ್ತಾ ಕುಳಿತ ಮದುಮಗ; ಫೋಟೋ ವೈರಲ್‌

ಮದುವೆ ಮನೆಯಲ್ಲಿ ನಡೆಯುವ ತರ್ಲೆ ತಮಾಷೆಗಳು, ಕೆಲವೊಂದು ಜಗಳಗಳ ಫೋಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಫೋಟೋವೊಂದು ವೈರಲ್‌ ಆಗಿದ್ದು, ವರ ವಿವಾಹ ಶಾಸ್ತ್ರ ಎಲ್ಲಾ ಆಮೇಲೆ ಮಾಡಿದ್ರಾಯ್ತು ನನ್ಗಂತೂ ತಾಳಿ ಕಟ್ಟೋದಕ್ಕಿಂತ ಆಟನೇ ಇಂಪಾರ್ಟೆಂಟ್‌ ಅಂತ ಮದುವೆ ಮಂಟಪದಲ್ಲಿಯೇ ಕುಳಿತು ಫ್ರೆಂಡ್ಸ್‌ ಜೊತೆ ಮೊಬೈಲ್‌ನಲ್ಲಿ ಲೂಡೋ ಗೇಮ್‌ ಆಡಿದ್ದಾನೆ.

Viral: ಮದುವೆ ಮಂಟಪದಲ್ಲಿ ಫ್ರೆಂಡ್ಸ್‌ ಜೊತೆ ಲೂಡೋ ಗೇಮ್‌ ಆಡುತ್ತಾ ಕುಳಿತ ಮದುಮಗ; ಫೋಟೋ ವೈರಲ್‌
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 12:10 PM

ಮದುವೆ ಅಂದ್ರೇನೆ ಒಂದು ಸಂಭ್ರಮ. ಸ್ನೇಹಿತರು ಸಂಬಂಧಿಕರು ಖುಷಿ ಖುಷಿಯಾಗಿ ಇದ್ರೆ, ವಧು ಮತ್ತು ವರ ಖುಷಿಯ ಜೊತೆಗೆ ಮದುವೆ ಕಾರ್ಯ ಸುಸೂತ್ರವಾಗಿ ನಡೆದ್ರೆ ಸಾಕಪ್ಪಾ ಎಂದು ಸ್ವಲ್ಪ ಟೆನ್ಷನ್‌ನಲ್ಲಿ ಇರ್ತಾರೆ. ಅದರಲ್ಲೂ ಮದುವೆ ಮಂಟಪದಲ್ಲಿ ವಧುವಿನ ಪಕ್ಕ ಕುಳಿತ ಮದುಮಗ ವಧುವಿಗೆ ತಾಳಿ ಕಟ್ಟೋ ಶುಭ ಘಳಿಗೆಗೆ ಕಾಯ್ತ ಇರ್ತಾನೆ. ಆದ್ರೆ ಇಲ್ಲೊಬ್ಬ ವರ ವಿವಾಹ ಶಾಸ್ತ್ರ ಎಲ್ಲಾ ಆಮೇಲೆ ಮಾಡಿದ್ರಾಯ್ತು ನನ್ಗಂತೂ ತಾಳಿ ಕಟ್ಟೋದಕ್ಕಿಂತ ಆಟನೇ ಇಂಪಾರ್ಟೆಂಟ್‌ ಅಂತ ಮದುವೆ ಮಂಟಪದಲ್ಲಿ ವಿವಾಹ ಶಾಸ್ತ್ರದ ನಡುವೆಯೇ ಫ್ರೆಂಡ್ಸ್‌ ಜೊತೆ ಕುಳಿತು ಮೊಬೈಲ್‌ನಲ್ಲಿ ಲೂಡೋ ಗೇಮ್‌ ಆಡಿದ್ದಾನೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Muskan_nnn ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಫೋಟೊವನ್ನು ಹಂಚಿಕೊಳ್ಳಲಾಗಿದ್ದು, “ಅಣ್ಣ ತನ್ನದೇ ಆದ ಆದ್ಯತೆಯನ್ನು ಹೊಂದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ಈ ಫೋಟೋದಲ್ಲಿ ಮದುವೆ ಮಂಟಪದಲ್ಲಿ ವಿವಾಹ ಶಾಸ್ತ್ರಗಳು ನಡೆಯುತ್ತಿರುವ ಮಧ್ಯದಲ್ಲಿಯೇ ವರ ತನ್ನ ಇಬ್ಬರು ಫ್ರೆಂಡ್ಸ್‌ ಜೊತೆ ಕುಳಿತು ಮೊಬೈಲ್‌ನಲ್ಲಿ ಲೂಡೋ ಗೇಮ್‌ ಆಡುತ್ತಿರುವ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ಓದಿ: Viral: ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ಕಾರ್‌ ಚಾಲಕ ಪರಾರಿ, ಪೊಲೀಸ್ ಎಂಟ್ರಿ ;ಮುಂದೇನಾಯ್ತು ನೋಡಿ…

ನವೆಂಬರ್‌ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 2.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಮದುವೆ ಟೈಮ್‌ನಲ್ಲೂ ಲೂಡೋನಾʼ ಎಂದು ಆಶ್ಚರ್ಯಪಟ್ಟಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮದುವೆ ಆದ ಮೇಲೆ ಫ್ರೆಂಡ್ಸ್‌ಗೆ ಟೈಮ್‌ ನೀಡೋಕೆ ಆಗಲ್ಲ ಎಂದು ಪಾಪ ಈಗ ಅವರ ಜೊತೆ ಲೂಡೋ ಆಡಿದ್ದಾನೆ ಅನ್ನಿಸುತ್ತದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ