Fact Check: ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?

ಉಚಿತ ಮೊಬೈಲ್ ವಿತರಣಾ ಯೋಜನೆಗೆ ಸಂಬಂಧಿಸಿದ ವೈರಲ್ ಹಕ್ಕು ನಕಲಿ ಎಂದು ಟಿವಿ9 ಕನ್ನಡ ವಾಸ್ತವ ಪರಿಶೀಲನೆಯಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ಶುರುಮಾಡಿಲ್ಲ. ಇದು ಸುಳ್ಳು ಸುದ್ದಿಯಾಗಿದೆ.

Fact Check: ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?
Free Mobile Scheme
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Nov 28, 2024 | 11:15 AM

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಇದರಲ್ಲಿ ಉಚಿತ ಸ್ಮಾರ್ಟ್​ಫೋನ್ ಯೋಜನೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ GavDehatvlogs ಹೆಸರಿನ ಚಾನಲ್‌ನಲ್ಲಿ ಈ ಕುರಿತು ವಿಡಿಯೋ ಅಪ್ಲೋಡ್ ಆಗಿದೆ. ಹಾಗಾದರೆ ಇದು ನಿಜವೇ?, ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನಿಜಕ್ಕೂ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?. ಈ ಕುರಿತ ಮಾಹಿತಿ ಇಲ್ಲಿದೆ.

ವಿಡಿಯೋ ಥಂಬ್‌ನೇಲ್​ನಲ್ಲಿ ಮಹಿಳೆಯರಿಗೆ ಉಚಿತ ಮೊಬೈಲ್ ವಿತರಣೆ ಎಂದು ಬರೆಯಲಾಗಿದೆ. ಜೊತೆಗೆ, ‘‘ಉಚಿತ ಮೊಬೈಲ್ ಯೋಜನೆಯ ಎರಡನೇ ಹಂತದಲ್ಲಿ 70,000 ಮಹಿಳೆಯರು ಉಚಿತ ಮೊಬೈಲ್ ಫೋನ್‌ಗಳನ್ನು ಪಡೆಯುತ್ತಾರೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮೊಬೈಲ್ ವಿತರಣೆ ಆರಂಭವಾಗಿದೆ’’ ಹೇಳಲಾಗಿದೆ. ಈ ಥಂಬ್‌ನೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕೂಡ ಸೇರಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದ ಟಿವಿ9 ಕನ್ನಡ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎಂಬುದು ಕಂಡುಬಂದಿದೆ. ನಾವು ಮೊಬೈಲ್ ವಿತರಣೆ ಸಂಬಂಧಿತ ಕ್ಲೈಮ್ ಅನ್ನು ಕಂಡುಹಿಡಿಯಲು ಮೊದಲು ಗೂಗಲ್​ನಲ್ಲಿ ಕೀವರ್ಡ್‌ ಮೂಲಕ ಸರ್ಚ್ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರದ ಮೊಬೈಲ್ ವಿತರಣೆ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಿಂದ ನಮಗೆ ಯಾವುದೇ ಸುದ್ದಿ ಸಿಕ್ಕಿಲ್ಲ.

ಹೆಚ್ಚಿನ ತನಿಖೆಯ ನಂತರ, ನಾವು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಪೋಸ್ಟ್ ಅನ್ನು ಎಕ್ಸ್​ನಲ್ಲಿ ಕಂಡುಕೊಂಡಿದ್ದೇವೆ. ಇದರಲ್ಲಿ ಮೊಬೈಲ್ ವಿತರಣೆ ಯೋಜನೆಗೆ ಸಂಬಂಧಿಸಿದ ವೈರಲ್ ಕ್ಲೈಮ್ ಅನ್ನು ನಿರಾಕರಿಸಲಾಗಿದೆ ಮತ್ತು ಅದು ನಕಲಿ ಎಂದು ಕರೆಯಲಾಗಿದೆ. ಪಿಐಬಿ ಪೋಸ್ಟ್‌ನಲ್ಲಿ, ‘‘ಈಗ 70,000 ಮಹಿಳೆಯರು ಪಿಎಂ ಉಚಿತ ಮೊಬೈಲ್ ಯೋಜನೆ 2024 ಅಡಿಯಲ್ಲಿ ಉಚಿತ ಮೊಬೈಲ್ ಫೋನ್‌ಗಳನ್ನು ಪಡೆಯುತ್ತಾರೆ, ಅತ್ಯಾಕರ್ಷಕವಾಗಿದೆ, ಅಲ್ಲವೇ? YT ಚಾನೆಲ್ GavDehatvlogsನ ಈ ವಿಡಿಯೋ ಥಂಬ್‌ನೇಲ್‌ನಲ್ಲಿ ಮಾಡಿದ ಹಕ್ಕುಗಳು ನಕಲಿ, ಕೇಂದ್ರ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ’’ ಎಂದು ಬರೆದುಕೊಂಡಿದೆ.

ಹೀಗಾಗಿ ಉಚಿತ ಮೊಬೈಲ್ ವಿತರಣಾ ಯೋಜನೆಗೆ ಸಂಬಂಧಿಸಿದ ವೈರಲ್ ಹಕ್ಕು ನಕಲಿ ಎಂದು ಟಿವಿ9 ಕನ್ನಡ ವಾಸ್ತವ ಪರಿಶೀಲನೆಯಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ಶುರುಮಾಡಿಲ್ಲ. ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ್ತೊಂದು ಹೇಳಿಕೆ ವೈರಲ್ ಆಗಿತ್ತು. ಇದರಲ್ಲಿ ಉಚಿತ ರೀಚಾರ್ಜ್ ಹೆಸರಿನಲ್ಲಿ ಲಿಂಕ್ ಹಂಚಿಕೊಳ್ಳಲಾಗಿತ್ತು. ಪಿಎಂ ಮೋದಿಯವರ ಉಚಿತ ಮೊಬೈಲ್ ರೀಚಾರ್ಜ್ ಯೋಜನೆಯಡಿಯಲ್ಲಿ, ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂಪಾಯಿಗಳ 28 ದಿನಗಳ ರೀಚಾರ್ಜ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಗೌತಮ್ ಅದಾನಿಯನ್ನು ಬಂಧಿಸಿರುವುದು ನಿಜವೇ?: ವೈರಲ್ ಫೋಟೋದ ಸತ್ಯಾಂಶ ಏನು?

ಹಾಗೆಯೆ ಶಿಕ್ಷಣ ಸಚಿವಾಲಯದ ವತಿಯಿಂದ ಉಚಿತ ಸ್ಮಾರ್ಟ್‌ಫೋನ್ ಯೋಜನೆಯಡಿ, ಎಲ್ಲಾ ಯುವಕರಿಗೆ ಉಚಿತವಾಗಿ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಕೂಡ ವೈರಲ್ ಆಗಿತ್ತು. ಅಂತಹ ಯಾವುದೇ ಯೋಜನೆಯನ್ನು ಮೋದಿ ಸರ್ಕಾರ ನಡೆಸುತ್ತಿಲ್ಲ. ಬಳಕೆದಾರರ ಡೇಟಾವನ್ನು ಸಂಗ್ರಹಿಸಲು ಇದನ್ನು ಬಳಸಲಾಗುತ್ತದೆ. ಫಿಶಿಂಗ್ ಲಿಂಕ್‌ಗಳನ್ನು ನಕಲಿ ಸಂದೇಶಗಳೊಂದಿಗೆ ವೈರಲ್ ಮಾಡಲಾಗುತ್ತಿದೆ. ಇಂತಹ ಮೆಸೇಜ್​ಗಳಿಂದ ನೀವು ಎಚ್ಚರದಿಂದ ಇರಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:48 am, Thu, 28 November 24

ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?