Viral: ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ಕಾರ್ ಚಾಲಕ ಪರಾರಿ, ಪೊಲೀಸ್ ಎಂಟ್ರಿ ;ಮುಂದೇನಾಯ್ತು ನೋಡಿ…
ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಚಾಲಾಕಿ ಚಾಲಕ ಪರಾರಿಯಾದ ಘಟನೆ ಈ ಹಿಂದೆಯೂ ನಡೆದಿದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿದ್ದಾನೆ. ಆ ತಕ್ಷಣ ಫಿಲ್ಮಿ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ಪೊಲೀಸರು ಆತನನ್ನು ಚೇಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮದುವೆ ಮಂಟಪದಲ್ಲಿ ಮದುವೆ ಮುರಿದು ಬೀಳುವಂತಹ, ಕಳ್ಳತನವಾಗುವಂತಹ, ಭಯಂಕರ ಫೈಟಿಂಗ್‌ಗಳಾಗುವ ಇತ್ಯಾದಿ ಸಿನಿಮೀಯ ರೀತಿಯ ಘಟನೆಗಳು ನಿಜ ಜೀವನದಲ್ಲೂ ಕೂಡಾ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ಕೊಡದೆ ವ್ಯಕ್ತಿಯೊಬ್ಬ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಫಿಲ್ಮಿ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹಣ ಕೊಡದೆ ಪರಾರಿಯಾದ ಕಾರನ್ನು ಪೊಲೀಸ್ ಜೀಪ್ ಚೇಸ್ ಮಾಡಿದ್ದು, ಈ ನಾಟಕೀಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಪೆಟ್ರೋಲ್ ಬಂಕ್‌ಗೆ ಬಂದ ವ್ಯಕ್ತಿಯೊಬ್ಬ ತನ್ನ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಸಿಬ್ಬಂದಿಗೆ ಹಣ ಕೊಡದೆ ಸೀದಾ ಹೋಗಿದ್ದಾನೆ. ಆ ಆಸಾಮಿ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಸರಿಯಾದ ಸಮಯಕ್ಕೆ ಪೊಲೀಸ್ ಜೀಪೊಂದು ಪೆಟ್ರೋಲ್ ಬಂಕ್‌ಗೆ ಎಂಟ್ರಿ ಕೊಟ್ಟಿದ್ದು, ತಕ್ಷಣ ಪೊಲೀಸರು ದುಡ್ಡು ಕೊಡದೆ ಪರಾರಿಯಾದ ವ್ಯಕ್ತಿಯನ್ನು ಫಿಲ್ಮಿ ಸ್ಟೈಲ್‌ನಲ್ಲಿ ಚೇಸ್ ಮಾಡಿದ್ದಾರೆ, ಈ ನಾಟಕೀಯ ದೃಶ್ಯ ಪೆಟ್ರೋಲ್ ಬಂಕ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
A car attempted to flee without paying, but the police arrived just in time (This is Cinema) pic.twitter.com/yCPw51ShrA
— Ghar Ke Kalesh (@gharkekalesh) November 26, 2024
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೋದಲ್ಲಿ ಪೆಟ್ರೋಲ್ ಬಂಕ್‌ಗೆ ಬಂದಂತಹ ವ್ಯಕ್ತಿಯೊಬ್ಬ ತನ್ನ ಕಾರಿಗೆ ಫ್ಯೂಲ್ ಹಾಕಿಸಿಕೊಳ್ಳುವಂತಹ ದೃಶ್ಯವನ್ನು ಕಾಣಬಹುದು. ನಂತರ ಕಾರಿನಿಂದ ಇಳಿದ ಆತ ಗೋಡೆಯಲ್ಲಿ ಅಂಟಿಸಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದಂತೆ ನಾಟಕವಾಗಿ ಹಣ ಕೊಡದೆಯೇ ಪರಾರಿಯಾಗಿದ್ದಾನೆ. ಇದೇ ಸಮಯಕ್ಕೆ ಪೆಟ್ರೋಲ್ ಬಂಕ್‌ಗೆ ಪೊಲೀಸ್ ಜೀಪ್ ಒಂದು ಎಂಟ್ರಿ ಕೊಟ್ಟಿದ್ದು, ತಕ್ಷಣ ಪೊಲೀಸರು ಫಿಲ್ಮಿ ಸ್ಟೈಲ್‌ನಲ್ಲಿ ಕಾರನ್ನು ಚೇಸ್ ಮಾಡಿದ್ದಾರೆ.
ಇದನ್ನೂ ಓದಿ: ನನ್ಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕು, ತಿಂಗಳಿಗೆ 1.2 ಲಕ್ಷ ರೂ. ಸಂಬಳ ಗಳಿಸುವ ವರನನ್ನು ತಿರಸ್ಕರಿಸಿದ ವಧು
ನವೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪೊಲೀಸರು ಸಮಯಕ್ಕೆ ಸರಿಯಾಗಿ ಬಂದಿದ್ದೆಂದರೆ ಅದು ಇದೇ ಮೊದಲ ಬಾರಿಗೆ ಅನ್ನಿಸುತ್ತದೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಡೀಸೆಲ್ ಹಾಕಿಸಲು ಹಣ ಇಲ್ಲದವರು ಕಾರ್ ಖರೀದಿಸುವ ಅಗತ್ಯವಿತ್ತೇʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ