ನನ್ಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕು, ತಿಂಗಳಿಗೆ 1.2 ಲಕ್ಷ ರೂ. ಸಂಬಳ ಗಳಿಸುವ ವರನನ್ನು ತಿರಸ್ಕರಿಸಿದ ವಧು

ಅನೇಕ ಕಾರಣಗಳಿಗೆ ಮದುವೆ ಮಂಟಮದಲ್ಲಿಯೇ ಅದೆಷ್ಟೋ ಮದುವೆಗಳು ಮುರಿದು ಬಿದ್ದಿರುವ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ವಿಚಿತ್ರ ಘಟನೆ ನಡೆದಿದ್ದು, ಮದುಮಗ ಸರ್ಕಾರಿ ಕೆಲಸದಲ್ಲಿಲ್ಲ ಎಂಬ ವಿಚಾರ ತಿಳಿದು ಆತನಿಗೆ ತಿಂಗಳಿಗೆ 1.2 ಲಕ್ಷ ಸಂಬಳ ಇದ್ರೂ ನನಗೆ ಸರ್ಕಾರಿ ಕೆಲಸದ ಗಂಡನೇ ಬೇಕೆಂದು ಪಟ್ಟು ಹಿಡಿದು ವಧು ಮದುವೆ ಮಂಟಪದಲ್ಲಿಯೇ ಮದುವೆಯನ್ನು ಮುರಿದಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ನನ್ಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕು, ತಿಂಗಳಿಗೆ 1.2 ಲಕ್ಷ ರೂ. ಸಂಬಳ ಗಳಿಸುವ ವರನನ್ನು ತಿರಸ್ಕರಿಸಿದ ವಧು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 27, 2024 | 4:46 PM

ಹೆಚ್ಚಿನ ಹುಡುಗಿಯರು ತಾವು ಮದುವೆಯಾಗುವ ಹುಡುಗ ಹ್ಯಾಂಡ್ಸಮ್‌ ಆಗಿರ್ಬೇಕು, ಉತ್ತಮ ಸಂಬಳವನ್ನು ಪಡೆಯುವ ಉದ್ಯೋಗದಲ್ಲಿರಬೇಕು ಎಂದು ಬಯಸುತ್ತಾರೆ. ಇನ್ನೂ ಕೆಲವರು ಹುಡುಗ ಹೇಗಿದ್ರೂ ಪರವಾಗಿಲ್ಲ ಆತನಿಗೆ ಸರ್ಕಾರಿ ಕೆಲಸ ಇದ್ರೆ ಸಾಕಪ್ಪಾ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ತನಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕೆಂದು ಮದುವೆ ಮಂಟಪದಲ್ಲಿಯೇ ಖಾಸಗಿ ಕಂಪೆನಿಯಲ್ಲಿ ತಿಂಗಳಿಗೆ 1.2 ಲಕ್ಷ ಸಂಬಳ ಗಳಿಸುವ ವರನನ್ನು ತಿರಸ್ಕರಿಸಿ, ಆಗಬೇಕಿದ್ದ ಮದುವೆಯನ್ನೇ ಮುರಿದಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಉತ್ರರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದ್ದು, ಸಂಪ್ರದಾಯಬದ್ಧವಾಗಿ ವರ ಮಾಲೆಯನ್ನು ವಿನಿಯಮ ಮಾಡಿಕೊಂಡ ಬಳಿಕ ವರ ಸರ್ಕಾರಿ ಕೆಲಸದಲ್ಲಿಲ್ಲ ಎಂಬ ವಿಚಾರ ತಿಳಿದು ವಧು ಮದುವೆಗೆ ಒಲ್ಲೆ ಎಂದಿದ್ದಾಳೆ. ವರದಿಗಳ ಪ್ರಕಾರ ವಧುವಿನ ಕುಟುಂಬವು ಛತ್ತೀಸ್‌ಗಢದ ಬಲರಾಮ್‌ಪುರದ ಹುಡುಗನೊಂದಿಗೆ ಮದುವೆಯನ್ನು ಏರ್ಪಡಿಸಿದ್ದರು. ಮದುವೆ ಬ್ರೋಕರ್‌ ಹುಡುಗ ಸರ್ಕಾರಿ ಇಂಜಿನಿಯರ್‌, ಆತನ ಹೆಸರಲ್ಲಿ ಆರು ನಿವೇಶನಗಳಿವೆ ಜೊತೆಗೆ ಕೃಷಿ ಭೂಮಿಯೂ ಕೂಡಾ ಇದೆ ಎಂದು ಹೇಳಿ ಮದುವೆಗೆ ಒಪ್ಪಿಸಿದ್ದರು. ವಾಸ್ತವದಲ್ಲಿ ಹುಡುಗನ ಕುಟುಂಬ ಕನೌಜ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಜೊತೆಗೆ ವರನಿಗೆ ಯಾವುದೇ ಸರ್ಕಾರಿ ಕೆಲಸ ಕೂಡಾ ಇರಲಿಲ್ಲ ಬದಲಾಗಿ ಆತ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ.

ಮದುವೆಯ ದಿನ ವರ ಮಾಲೆಯನ್ನು ವಿನಿಮಯ ಮಾಡಿಕೊಂಡ ಬಳಿಕ ವಧುವಿಗೆ ಈ ಸತ್ಯ ತಿಳಿದಿದ್ದು, ನನಗೆ ಈ ಹುಡುಗ ಬೇಡ ಎಂದು ಮದುವೆಯನ್ನು ನಿರಾಕರಿಸಿದ್ದಾಳೆ. ನಂತರ ಎರಡೂ ಕುಟುಂಬದವರು ವಧುವಿನ ಮನವೊಲಿಸಲು ಪ್ರಯತ್ನಿಸಿದರೂ ಆಕೆ ನನಗೆ ಈತ ಬೇಡ್ವೇ ಬೇಡಾ ಎಂದು ಪಟ್ಟು ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ ವರ ತನ್ನ ಸ್ಯಾಲರಿ ಸ್ಲಿಪ್‌ ತೋರಿಸಿ ನೋಡು ನನಗೆ ಸರ್ಕಾರಿ ಕೆಲಸ ಇಲ್ಲಂದ್ರೆ ಏನಂತೆ ನಾನು ತಿಂಗಳಿಗೆ 1.2 ಲಕ್ಷ ಸಂಪಾದನೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇವರ ಯಾವ ಮಾತಿಗೂ ಬಗ್ಗದ ವಧು ನಾನು ಮದುವೆಯಾದ್ರೆ ಸರ್ಕಾರಿ ಕೆಲಸದ ಹುಡುಗನನ್ನೇ ಎಂದು ಹೇಳಿದ್ದಾಳೆ.

ಇದನ್ನೂ ಓದಿ: 89 ರ ನಡುವೆ ಅಡಗಿರುವ ನಂಬರ್‌ 88 ಅನ್ನು ಹುಡುಕಬಲ್ಲಿರಾ?

ಬಳಿಕ ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗಾದ ಖರ್ಚನ್ನು ಸಮಪಾಲು ಮಾಡೋಣ ಎಂಬ ಒಪ್ಪಂದಕ್ಕೆ ಬಂದು ಮದುವೆಯನ್ನು ನಿಲ್ಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 4:15 pm, Wed, 27 November 24

ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ