ಉತ್ತರ ಪ್ರದೇಶ: ಮಕ್ಕಳ ಪ್ರೇಮ ಪುರಾಣ (Love story) ಮನೆಯವರಿಗೆ ಗೊತ್ತಾದ್ರೆ ಅವರಿಗೆ ಹೊಡೆದು ಬಡಿದು ಮಾಡ್ತಾರೆ. ಜೊತೆಗೆ ಪ್ರೀತಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಪ್ರೇಮಿಗಳಿಬ್ಬರನ್ನು ದೂರ ಮಾಡಲು ನೋಡ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರ (villagers) ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರೇಮಿಗಳಿಬ್ಬರಿಗೆ (lovers) ಕುಟುಂಬಸ್ಥರೇ ಮದುವೆ (marriage) ಮಾಡಿಸಿದ್ದಾರೆ. ಇನ್‌ಸ್ಟಾಗ್ರಾಮ್ (Instagram) ಮೂಲಕ ಈ ಇಬ್ಬರಿಗೂ ಪರಿಚಯವಾಗಿದ್ದು, ಆ ಯುವಕ ಪ್ರೇಯಸಿಯನ್ನು ಭೇಟಿ ಮಾಡುವ ಸಲುವಾಗಿ ಆಕೆಯ ಗ್ರಾಮಕ್ಕೆ ಬಂದಿದ್ದಾನೆ. ಹೀಗೆ ಇವರಿಬ್ಬರು ಏಕಾಂತದಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದು, ಈ ವಿಷಯ ಯುವತಿಯ ಕುಟುಂಬಸ್ಥರ ಕಿವಿಗೆ ಬೀಳುತ್ತಿದ್ದಂತೆ, ಪ್ರೇಮಿಗಳಿಬ್ಬರನ್ನು ಹಿಡಿದು ದೇವಸ್ಥಾನದಲ್ಲಿ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಜಲೌನ್‌ನಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳಿಬ್ಬರಿಗೆ ಯುವತಿಯ ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಈ ಇಬ್ಬರಿಗೂ ಪರಿಚಯವಾಗಿದ್ದು, ಯುವಕ ಪ್ರೇಯಸಿಯನ್ನು ನೋಡುವ ಸಲುವಾಗಿ ಆಕೆಯ ಗ್ರಾಮಕ್ಕೆ ಬಂದಿದ್ದಾನೆ. ಮತ್ತು ಈ ಇಬ್ಬರು ಏಕಾಂತದಲ್ಲಿ ಕುಳಿತು ಸಮಯ ಕಳೆಯುತ್ತಿದ್ದಾಗ, ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ತಕ್ಷಣ ಈ ವಿಷಯವನ್ನು ಅವರು ಯುವತಿಯ ಕುಟುಂಬಸ್ಥರಿಗೆ ತಿಳಿಸುತ್ತಾರೆ. ನಂತರ ಕುಟುಂಬಸ್ಥರು ಈ ಇಬ್ಬರನ್ನು ಹಿಡಿದು ದೇವಾಲಯವೊಂದರಲ್ಲಿ ಮದುವೆ ಮಾಡಿಸಿದ್ದಾರೆ. ಆದರೆ ಈ ಮದುವೆಗೆ ಯುವಕನ ತಂದೆ ವಿರೋಧ ವ್ಯಕ್ತಪಡಿಸಿ, ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವಿಶಿಷ್ಟ ಮದುವೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
Boyfriend went to meet his girlfriend in her village proved costly for him (The girlfriend’s family caught them and forced them to marry) Jalaun UP
pic.twitter.com/PI7zZL980N— Ghar Ke Kalesh (@gharkekalesh) March 27, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಪ್ರೇಮಿಗಳಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ ಗೆಳತಿಯ ಕುಟುಂಬಸ್ಥರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕ ತನ್ನ ಪ್ರೇಯಸಿಯ ಕುತ್ತಿಗೆಗೆ ಹೂವಿನ ಹಾರವನ್ನು ಹಾಕುವಂತಹ ದೃಶ್ಯವನ್ನು ಕಾಣಬಹುದು. ಸಿಕ್ಕಿಬಿದ್ದ ಈ ಪ್ರೇಮಿಗಳನ್ನು ಹತ್ತಿರದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಯುವತಿಯ ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಹೃದಯ ಗೆದ್ದ ಪುಟ್ಟಕ್ಕ, 7 ವರ್ಷದ ಬಾಲಕಿಯ ಪ್ರತಿಭೆಗೆ ಭಾರೀ ಮೆಚ್ಚುಗೆ
ಮಾರ್ಚ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 62 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಒಳ್ಳೆಯ ಕಾರ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವುದು ತಪ್ಪಲ್ಲವೆʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ