
ಬರೇಲಿ, ಮಾ.2: ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಮಂಗಳಮುಖಿಯರು ಭಿಕ್ಷೆ ಬೇಡುತ್ತಾರೆ. ಅದರಲ್ಲೂ ಕೆಲವರಂತೂ ಜನರನ್ನು ಹಣಕ್ಕಾಗಿ ಪೀಡಿಸುತ್ತಾರೆ, ಇನ್ನೂ ಕೆಲವರು ಜನರ ಮೇಲೆ ದರ್ಪವನ್ನೇ ತೋರುತ್ತಾರೆ. ಇಂತಹ ಕೆಲವೊಂದು ಘಟನೆಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಹಣ ಕೊಡಲು ಒಲ್ಲೆ ಎಂದನೆಂದು ಮಂಗಳಮುಖಿಯರ ತಂಡವೊಂದು ಯುವಕನ ಮೇಲೆ ದರ್ಪ ತೋರಿಸಿ ಆತನಿಗೆ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಂಗಳಮುಖಿಯರ ಈ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಹಣಕೊಡಲು ನಿರಾಕರಿಸಿದನೆಂದು ಮೂರು ನಾಲ್ಕು ಜನ ಮಂಗಳಮುಖಿಯರು ವ್ಯಕ್ತಿಯೊಬ್ಬನ ಮೇಲೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೆ ನಡು ರಸ್ತೆಯಲ್ಲಿಯೇ ಆತನ ಮೇಲೆ ಕೈ ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಬರೇಲಿ ಪೊಲೀಸ್ ಈ ಬಗ್ಗೆ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂರು ನಾಲ್ಕು ಜನ ಮಂಗಳಮುಖಿಯರು ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಸುತ್ತುವರೆದಿರುವಂತಹ ದೃಶ್ಯವನ್ನು ಕಾಣಬಹುದು. ಆತ ಹಣ ಕೊಡಲಿಲ್ಲವೆಂದು ಆ ವ್ಯಕ್ತಿಯ ಕೈ ಹಿಡಿದು ಎಳೆದು, ಹೊಡೆದು ದರ್ಪ ತೋರಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
Kalesh b/w Transgenders and a Guy over this guy refused to give them Money, Bareilly UP
pic.twitter.com/Ni1nVDY0cv— Ghar Ke Kalesh (@gharkekalesh) February 28, 2025
ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ
ಫೆಬ್ರವರಿ 28 ರಂದು ಶೇರ್ ಮಾಡಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಏಕೆ ಈ ಬಗ್ಗೆ ಪೊಲೀಸರು ಸುಮ್ಮನಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮೂರಲ್ಲಿಯೂ ಇದೇ ರೀತಿಯ ಸಮಸ್ಯೆಯಿದೆ, ಹಣ ಕೊಡದೆ ಹೋದ್ರೆ ಅವರುಗಳು ನಮ್ಮ ಬೆನ್ನು ಬಿಡುವುದೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಂಗಳಮುಖಿಯರ ಈ ವರ್ತನೆಯನ್ನು ಖಂಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ