
ಹಾವುಗಳನ್ನು (Snakes) ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಇನ್ನು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟರೆ ಅಲ್ಲಿ ನಿಲ್ಲುವ ಧೈರ್ಯವಂತೂ ಯಾರು ಮಾಡಲ್ಲ. ಈ ವಿಷಕಾರಿ ಹಾವುಗಳು ಮನೆಯ ಮೂಲೆಯಲ್ಲಿ ಅವಿತುಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ವಿಡಿಯೋದಲ್ಲಿ ಎಲ್‌ಇಡಿ ಟಿವಿಯೊಳಗೆ (LED Tv) ತೋಳದ ಹಾವೊಂದು ಅವಿತುಕೊಂಡಿದ್ದು, ಉರಗ ತಜ್ಞರು ಟಿವಿಯೊಳಗಿದ್ದ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ಟಿಯಾಗಿದ್ದಾರೆ. ಈ ತೋಳದ ಹಾವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿವಿಯೊಳಗೆ ಅವಿತು ಕುಳಿತಿದ್ದ ಹಾವು
Nagendra ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಉರಗ ತಜ್ಞರು ಎಲ್ ಇಡಿ ಟಿವಿಯೊಳಗೆ ಸೇರಿಕೊಂಡಿದ್ದ ತೋಳದ ಹಾವನ್ನು ರಕ್ಷಣೆ ಮಾಡಿರುವುದನ್ನು ನೀವಿಲ್ಲಿ ನೋಡಬಹುದು. ಹಾವೊಂದು ಟಿವಿಯೊಳಗೆ ಹೋಗಿರುವುದನ್ನು ಮನೆ ಮಂದಿ ನೋಡಿದ್ದು, ಹೀಗಾಗಿ ಉರಗ ತಜ್ಞರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರು ಮನೆಗೆ ಬಂದಿದ್ದಾರೆ. ಎಲ್ ಇಡಿ ಟಿವಿಯೊಳಗೆ ಹಾವು ಸೇರಿಕೊಂಡಿದ್ದ ಹಾವನ್ನು ರಕ್ಷಣೆ ಮಾಡಲು ಟಿವಿಯ ಭಾಗಗಳನ್ನು ಬಿಡಿಸಿದ್ದಾರೆ. ಈ ವೇಳೆಯಲ್ಲಿ ಟಿವಿ ಒಳಗೆ ಬೆಚ್ಚಗೆ ಅವಿತು ಕುಳಿತಿರುವುದನ್ನು ನೋಡಬಹುದು. ಈ ಹಾವನ್ನು ರಕ್ಷಣೆ ಮಾಡಿದ್ದು, ಇದು ತೋಳದ ಹಾವು, ಇದು ಮನೆಯಲ್ಲಿ ಹಲ್ಲಿಯನ್ನು ತಿನ್ನಲು ಬರುತ್ತದೆ ಎಂದು ಉರಗ ತಜ್ಞರು ಹೇಳುವುದನ್ನು ನೋಡಬಹುದು.
ಇದನ್ನೂ ಓದಿ:Video: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಈ ವಿಡಿಯೋವನ್ನು ಹಲವಾರು ವೀಕ್ಷಿಸಿದ್ದು, ಬಳಕೆದಾರರು ಟಿವಿಯೊಳಗೆ ಹಾವು ಹೇಗೆ ಹೋಯ್ತು. ಬೋರ್ ಆಗಿರ್ಬೇಕು ಅದಕ್ಕೆ ಟಿವಿ ನೋಡೋಕೆ ಹೋಗಿರ್ಬೇಕು ಎಂದಿದ್ದಾರೆ. ಇನ್ನೊಬ್ಬರು ಮನೆಯಲ್ಲಿ ಬೆಕ್ಕು ಸಾಕಿ. ಹೊರಗಿಂದ ಏನೇ ಬಂದ್ರು ಸೂಚನೆ ಕೊಡುತ್ತದೆ. ಮನೆ ಹೊರಗೆ ನಾಯಿ, ಒಳಗೆ ಬೆಕ್ಕು ನಮಗೆ ರಕ್ಷಣೆ ಕೊಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಹೇಳೋದು ಮನೆಯನ್ನು ಸ್ವಚ್ಛವಾಗಿ ಇಡಬೇಕು ಅಂತ. ಈ ತರ ಗಲೀಜಾಗಿ ಇಟ್ಕೊಂಡ್ರೆ ಹಾವು ಚೇಳು ಬಾರದೆ ಇನ್ನೇನು ಮಾಡುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ