Viral Video: ಈ ನಾಯಿಗಳನ್ನು ಸಾಕಿದವರಿಗೇ ಗೊತ್ತು ಇವುಗಳ ವೈಶಿಷ್ಟ್ಯ
Golden Retriever : ಈ ಗೋಲ್ಡನ್ ರಿಟ್ರೈವರ್ ಯಾಕೆ ಹೀಗೆ ಲಕ್ಷಾಂತರ ಜನರ ಹೃದಯವನ್ನು ಕದಿಯುತ್ತವೆ? ವಿಡಿಯೋ ನೋಡಿ ಗೊತ್ತಾಗಬಹುದು.

Viral Video : ಸಾಕುಪ್ರಾಣಿಗಳಲ್ಲಿ ಗೋಲ್ಡನ್ ರಿಟ್ರೈವರ್ ನಾಯಿಗಳು ನಿಜಕ್ಕೂ ಉತ್ತಮ ತಳಿಯವು. ಅದಕ್ಕೇ ಅವು ಲಕ್ಷಾಂತರ ಪ್ರಾಣಿಪ್ರಿಯರ ಹೃದಯವನ್ನು ಗೆಲ್ಲುತ್ತ ಬಂದಿವೆ. ಅಂಥದ್ದು ಏನಿದೆ ಅವುಗಳಲ್ಲಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದನ್ನು ಸಾಕಿದವರಿಗೆ ಖಂಡಿತ ಅವುಗಳ ವೈಶಿಷ್ಟ್ಯ ಅನುಭವಕ್ಕೆ ಬಂದಿರುತ್ತದೆ. ಅಂಥ ಸ್ನೇಹಮಯೀ, ಸೂಕ್ಷ್ಮ ನಾಯಿಗಳಿವು. ಗೋಲ್ಡನ್ ರಿಟ್ರೈವರ್ ನಾಯಿಯಾದ ಲೇಡಿ ಎಂಬ ನಾಯಿಗೆ ಮೀಸಲಾದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಖಾತೆಗೆ 2.7 ಲಕ್ಷ ಫಾಲೋವರ್ಸ್ ಇದ್ದಾರೆ.
ನಿಯಮಿತವಾಗಿ ಗೋಲ್ಡನ್ ರಿಟ್ರೈವರ್ ನಾಯಿಗಳ ವಿಡಿಯೋ ಅನ್ನು ಇಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವಿಡಿಯೋ ಅನ್ನು 2.3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 13,200 ಕ್ಕೂ ಹೆಚ್ಚು ಲೈಕ್ಸ್ ಇದಕ್ಕೆ ಬಂದಿವೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:06 pm, Mon, 29 August 22








