ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾದ ದಿನದಿಂದ ರಾಮ ಲಲ್ಲಾ ದರ್ಶನಕ್ಕೆ ಲಕ್ಷ ಲಕ್ಷ ಭಕ್ತರು ದೇಶ ವಿದೇಶದಿಂದ
ಬರುತ್ತಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನನ್ನು ಕಣ್ತುಂಬಿಸಿಕೊಳ್ಳಬೇಕು ಎಂಬುದು ಸಾಕಷ್ಟು ಜನರ ಕನಸು. ಇದೀಗ ಯುವಕನೊಬ್ಬ ತನ್ನ ಮನೆಯ 65 ವರ್ಷದ ಸೆಕ್ಯೂರಿಟಿ ಗಾರ್ಡ್‌ನ ಅಯೋಧ್ಯೆ ಯಾತ್ರೆಯ ಆಸೆಯನ್ನು ಈಡೇರಿಸಿದ್ದಾನೆ. ಹಲವು ವರ್ಷಗಳಿಂದ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ಆಸೆಯನ್ನು ಈಡೇರಿಸಿದೆ ಎಂದು ವಿಡಿಯೋ ಒಂದನ್ನು ಯುವಕ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಅನಿಶ್ ಭಗತ್ (@anishbhagatt) ಎಂಬ ಸೋಶಿಯಲ್ ಮೀಡಿಯಾ ಪ್ರಭಾವಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ02ರಂದು ವಿಡಿಯೋ ಹಂಚಿಕೊಂಡಿದ್ದಾನೆ. ವಿಡಿಯೋ ಹಂಚಿಕೊಂಡ ಕೇವ 5 ದಿನಗಳಲ್ಲಿ 17.2 ಮಿಲಿಯನ್ ಅಂದರೆ 1ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೆ 1,934,028 ಜನರು ವಿಡಿಯೋಗೆ ಲೈಕ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಆನ್ಲೈನ್ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್ ಕಾಡಿಗೆ ಹೋದ ಯುವತಿ
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಸ್ವಂತ ಮಗನ ಸ್ಥಾನದಲ್ಲಿ ನಿಂತು ಆ ವ್ಯಕ್ತಿಯ ಆಸೆಯನ್ನು ಈಡೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ