ಸಾಮಾನ್ಯವಾಗಿ ರಸ್ತೆಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಅವುಗಳ ದಾಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ದನಕರುಗಳು ನಡು ರಸ್ತೆಯಲ್ಲಿ ಮಲಗಿದ್ದರೂ ಕೂಡ ಯಾರ ತಂಟೆಗೂ ಹೋಗುವುದಿಲ್ಲ ಎಂಬ ನಂಬಿಕೆ. ಆದರೆ ಇಲ್ಲೊಂದು ವಿಡಿಯೋ ಇದೀಗಾ ಭಾರೀ ವೈರಲ್ ಆಗಿದ್ದು, ಈ ಘಟನೆಯಿಂದ ನಿಮ್ಮ ಎದೆಯಲ್ಲಿ ನಡುಕ ಉಂಟಾಗುವುದಂತೂ ಖಂಡಿತಾ. ನಡುರಸ್ತೆಯಲ್ಲಿ ಮಲಗಿದ್ದ ದನವೊಂದು ಏಕಾಏಕಿ ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿದೆ. ಆ ವ್ಯಕ್ತಿಯನ್ನು ಬೈಕ್‌ನಿಂದ ತಳ್ಳಿ ಹಾಕಿ, ಕೊಂಬಿನಿಂದ ಆತನ ಮೇಲೆ ದಾಳಿ ಮಾಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Kalesh b/w Buffalo and Everyone on Road
pic.twitter.com/SaFbkNOpGl— Ghar Ke Kalesh (@gharkekalesh) January 7, 2024
ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ
ವೈರಲ್ ವೀಡಿಯೊ ದನ ನಡುರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ರಸ್ತೆಯ ಇನ್ನೊಂದು ಬದಿಯಲ್ಲಿ ಟ್ರಾಫಿಕ್ ಸಿಗ್ನಲ್ನಿಂದಾಗಿ ವಾಹನಗಳು ನಿಂತಿರುವುದು ಕಾಣಬಹುದು. ಬೈಕ್ ಬರುತ್ತಿದ್ದಂತೆ ಏಕಾಏಕಿ ಓಡಿ ಬಂದು ದಾಳಿ ಮಾಡಿದೆ.ಆ ವ್ಯಕ್ತಿಯನ್ನು ಬೈಕ್‌ನಿಂದ ತಳ್ಳಿ ಕೆಳಗೆ ಎಸೆದಿದೆ. ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಸ್ಥಳೀಯರ ಮೇಲೂ ದನ ದಾಳಿ ಮಾಡಲು ಮುಂದಾಗಿದೆ. ಅವರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೀಡಿಯೊವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಜನವರಿ 7ರಂದು ಹಂಚಿಕೊಳ್ಳಲಾಗಿದ್ದು, ಸಾಕಷ್ಟು ನೆಟ್ಟಿಗರು ವಿಡಿಯೋ ನೋಡುತ್ತಿದ್ದಂತೆ ಕಾಮೆಂಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ