ಅಮೆರಿಕ: ರಸ್ತೆ ದಾಟುತ್ತಿದ್ದ ಜಿಂಕೆಯೊಂದು ವೇಗವಾಗಿ ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಅಮೆರಿಕದ ರೋಡ್ ಐಲೆಂಡ್‌ನಲ್ಲಿ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಜಿಂಕೆ ವಿಂಡ್‌ಸ್ಕ್ರೀನ್ ಗ್ಲಾಸ್ ಒಡೆದು ನೇರವಾಗಿ ಬಸ್ ಒಳಗಡೆ ಬಂದು ಬಿದ್ದಿದೆ. ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ ಜಿಂಕೆಯು ವಾರ್ವಿಕ್ ಏವ್‌ನಲ್ಲಿ ಪ್ರಯಾಣಿಸುತ್ತಿದ್ದ RIPTA ಬಸ್‌ಗೆ ಹಠಾತ್ತನೆ ಓಡಿ ಬಂದಿದೆ. ಓಡಿ ಬಂದ ರಭಸಕ್ಕೆ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಜಿಂಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಳಿಕ ಪರಿಸರ ನಿರ್ವಹಣೆಯ ರಾಜ್ಯ ಇಲಾಖೆ ಅದರ ಶವವನ್ನು ಬಸ್ಸಿನಿಂದ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?
ಜೂನ್ 10ರಂದು ಈ ಘಟನೆ ನಡೆದಿದ್ದು, @nbcnews ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಆಘಾತಕಾರಿ ವಿಡಿಯೋ ಹಂಚಿಕೊಂಡಿದೆ. ಜೂನ್ 14ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಒಂದೇ ದಿನದಲ್ಲಿ ಈ ವಿಡಿಯೋ 5ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: