
ಸನಾತನ ಧರ್ಮದ ಪ್ರತಿಯೊಂದು ಆಚರಣೆಗಳು, ಸಂಪ್ರದಾಯಗಳು ವೈಜ್ಞಾನಿಕ ಮಹತ್ವವನ್ನು ಹಾಗೂ ತಳಹದಿಯನ್ನು ಹೊಂದಿವೆ. ಅವುಗಳಲ್ಲಿ ಶಂಖನಾದವೂ ಒಂದು. ಹೌದು ಶಂಖನಾದ ಧನಾತ್ಮಕ ಶಕ್ತಿಯನ್ನು ಪಸರಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ಅನ್ನೋ ವಿಷಯ ಬಹುತೇಕ ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಹೀಗೆ ಇಲ್ಲೊಬ್ರು ಬಾಲಿವುಡ್ ನಟ ತಮ್ಮ ಫಿಟ್‌ನೆಸ್‌ಗಾಗಿ ಶಂಖ ಊದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದು ಶೇಕಡಾ 99.99% ರಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ ನಟ ಹಾಗೂ ಮಾರ್ಶಿಯಲ್ ಆರ್ಟಿಸ್ಟ್ ವಿದ್ಯುತ್ ಜಮ್ವಾಲ್ ತಮ್ಮ ಫಿಟ್‌ನೆಸ್‌ಗಾಗಿ ಪ್ರತಿನಿತ್ಯ ಶಂಖವನ್ನು ಊದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲದೆ ಇದು ಶೇಕಡಾ 99.99% ರಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಶಂಖ ಊದುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ 10 ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೌದು ಶಂಖ ಊದುವುದರಿಂದ ಶ್ವಾಸಕೋಶ ಮತ್ತು ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ.
ನಟ ವಿದ್ಯುತ್ ಜಮ್ವಾಲ್ ತಾವು ಶಂಖ ಊದುವಂತಹ ವಿಡಿಯೋವನ್ನು ಜನವರಿ 1 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ “ಈ ಹೊಸ ವರ್ಷದಲ್ಲಿ ಈ ಶಂಖದ ಶಬ್ದವನ್ನು ಯಾರು ಕೇಳುತ್ತಾರೆ, ಅದರ ಕಂಪನಗಳು ನಿಮ್ಮಲ್ಲಿ ಅತ್ಯುತ್ತಮವಾದದ್ದನ್ನು ತರಲಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಏನು ಆರ್ಡರ್ ಮಾಡದೆಯೇ ಮಹಿಳೆಗೆ ಪಾರ್ಸೆಲ್ ಡೆಲಿವರಿಗಾಗಿ ಬಂತು ಕರೆ; ಮುಂದೇನಾಯ್ತು ನೋಡಿ
mevidyutjammwal ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಂತ್ರಮುಗ್ಧಗೊಳಿಸುವ ಸದ್ದು, ಇದು ನನ್ನಲ್ಲಿ ಧನಾತ್ಮಕ ಹರಿವನ್ನು ಪ್ರೇರೇಪಿಸದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿ, ಫಿಟ್‌ನೆಸ್ ಮತ್ತು ಆರೋಗ್ಯ ವೃದ್ಧಿಗಾಗಿ ಶಂಖ ಊದುವ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Fri, 7 February 25