
Lion: ದೂರದಿಂದ ಸಿಂಹದ ಗರ್ಜನೆ ಕೇಳಿದ ಕೆಲವರಿಗೆ ಕಾಲು ಥರಥರ ಎನ್ನುತ್ತವೆ. ಇನ್ನೂ ಕೆಲವರಿಗೆ ಬೋನಿನೊಳಗಿರುವ ಸಿಂಹ ನೋಡಲು ಗುಂಡಿಗೆ ಗಟ್ಟಿ ಇರಬೇಕು. ಆದರೆ ಸಿಂಹವೊಂದು ನಿಮ್ಮ ಪಕ್ಕದಲ್ಲಿ ಅಚಾನಕ್ ಆಗಿ ನಡೆದುಕೊಂಡು ಬಂದರೆ? ಹೇಗಿರುತ್ತದೆ ನೋಡಿ ಈ ವಿಡಿಯೋದಲ್ಲಿ. ಸದ್ಯ ಇವರೆಲ್ಲ ಕಾರಿನಲ್ಲಿದ್ದಾರೆ. ದನಕರುವೋ ನಾಯಿಯೋ ಬೆಕ್ಕೋ (Animals) ರಸ್ತೆಯಲ್ಲಿ ನಡೆದು ಬಂದಷ್ಟು ಸಹಜವಾಗಿ ಈ ದೈತ್ಯ ಸಿಂಹ ಹೀಗೆ ರಸ್ತೆಗಿಳಿದಿದೆ. ಅಲ್ಲಿ ನಿಂತಿರುವ ಕಾರುಗಳ ಮಧ್ಯೆ ತನ್ನಪಾಡಿಗೆ ತಾ ಗಂಭೀರವಾಗಿ ನಡೆದುಕೊಂಡು ಹೋಗಿದೆ. ಆಕ್ರಮಣಕಾರೀ, ನಿಗೂಢ ಮತ್ತು ಸಂಚಿನಿಂದ ಕೂಡಿದ ಈ ಪ್ರಾಣಿಯನ್ನು ನೋಡಿದರೆ ಯಾರಿಗೆ ತಾನೆ ಭಯವಾಗದು?
ಇದನ್ನೂ ಓದಿ : Viral Optical Illusion: ಸರ್ಕಸ್ ಮಾಸ್ಟರ್ನೊಳಗೆ ಅಡಗಿರುವ ಆನೆಯನ್ನು ಹುಡುಕಿದರೆ ನೀವು ಮೇಧಾವಿ!
ಈ ವಿಡಿಯೋ ಅನ್ನು X ನಲ್ಲಿ Figen @TheFigen ದಿ ಕಿಂಗ್ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ತಾಜ ಹೀಗೆ ನಡೆದುಹೋಗಬೇಕಾದರೆ ಆತನ ಠೀವಿಯನ್ನು ಹತ್ತಿರದಿಂದ ನೋಡುವುದು ಎಂಥ ಸೌಭಾಗ್ಯ ಎಂದಿದ್ದಾರೆ ಒಬ್ಬರು. ಅಕಸ್ಮಾತ್ ಕಾರಿನ ಗಾಜನ್ನು ಒಡೆದು ಒಳಗಿರುವವರನ್ನು ತಿಂದಿದ್ದರೆ? ಎಂದಿದ್ದಾರೆ ಇನ್ನೊಬ್ಬರು.
ಓಹೋ ಇವರು ಕಾಡಿಗೆ ರಜೆ ಹಾಕಿ ಬಂದಿದ್ದಾರೆ ಎಂದು ಒಬ್ಬರು. ಇವರು ಹೀಗೆ ನಡೆದುಕೊಂಡು ಬರಬೇಕಾದರೆ ನಾನು ಇಲ್ಲೇ ಇದ್ದೆ, ಈಗ ಮನೆ ತಲುಪಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಅವರು ಇಡೀ ರಾತ್ರಿ ಹೊರಗೇ ಮಲಗಿದ್ದರು ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಇದು ನಿಜವೇ ಅಥವಾ ಎಐ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಆ ಕ್ಷಣಗಳು
ಬ್ರೇಕ್ಫಾಸ್ಟ್ ಮುಗಿಸಿ ಲಂಚ್ಗಾಗಿ ಅವರು ಹುಡುಕುತ್ತಿದ್ದಾರೆ ಎಂದಿದ್ದಾರೆ ಒಬ್ಬರು. ರಾಜರು ಬಂದರು ದಾರಿ ಮಾಡಿಕೊಡಿ ಎಂದಿದ್ದಾರೆ ಮತ್ತೊಬ್ಬರು. ಅವರು ಕಾರಿನಬಾಗಿಲ ಬಳಿ ಬಂದು ನಿಂತರೆ ಏನು ಮಾಡುವಿರಿ? ಎಂದು ಕೇಳಿದ್ದಾರೆ ಅನೇಕರು. ಏನೂ ಬೇಡ ನಿಂತಲ್ಲಿಯೇ ನಿಂತು ಒಮ್ಮೆ ಗರ್ಜಿಸಿದರೆ!? ಎಂದು ಕೇಳಿದ್ದಾರೆ ಒಂದಿಷ್ಟು ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:28 pm, Wed, 6 September 23