ಗೂಬೆಗಳ ಗುಂಪಿನೊಳಗೆ ಅಡಗಿಹುದು ಬೆಕ್ಕು; ಹತ್ತೇ ಸೆಕೆಂಡು, ಹುಡುಕಿ ನೋಡೋಣ

| Updated By: ಶ್ರೀದೇವಿ ಕಳಸದ

Updated on: May 04, 2023 | 3:02 PM

Optical Illusion : ಬಾರೋ ಸೋಮಾರಿ, 20 ತಾಸು ನಿದ್ದೆ ಮಾಡ್ತೀಯಾ ದಿನಕ್ಕೆ. ನಮ್ಮಜೊತೆ ಒಂದು ರಾತ್ರಿ ಎದ್ದು ಕುಳಿತುಕೋ. ನಾವೆಲ್ಲಾ ಸೇರಿ ನಿನ್ನ ತಿಂಡಿಯನ್ನು ಹಿಡಿದುಕೊಡುತ್ತೇವೆ! ಎಂದು ಗೂಬೆಗಳು ನೈಟ್ ಔಟ್ ಮಾಡಿಸುತ್ತಿವೆ ಈ ಬೆಕ್ಕನ್ನು.

ಗೂಬೆಗಳ ಗುಂಪಿನೊಳಗೆ ಅಡಗಿಹುದು ಬೆಕ್ಕು; ಹತ್ತೇ ಸೆಕೆಂಡು, ಹುಡುಕಿ ನೋಡೋಣ
ಇಷ್ಟೊಂದು ಗೂಬೆಗಳ ಮಧ್ಯೆ ಬೆಕ್ಕೊಂದು ಅಡಗಿದೆ, ಹುಡುಕಿ...
Follow us on

Viral Brain Teaser : ಸುಮ್ಮನೇ ಹುಳಾ ಬಿಡ್ತಾರೆ ಮಾರಾಯಾ, ನನಗಂತೂ ಸಿಗಲೇ ಇಲ್ಲ ಬೆಕ್ಕು ಎಂದು ಒಬ್ಬರು. ಹತ್ತು ಸಲ ಕಣ್ಣಾಡಿಸಿದೆ ಇಲ್ಲಿರೋ ಗೂಬೆಗಳ ಸಾಲನ್ನು. ಆದರೂ ಬೆಕ್ಕು ಸಿಗಲಿಲ್ಲ ಎಂದು ಮತ್ತೊಬ್ಬರು. ಅಂಥಾ ಏನೂ ಇರೋದಿಲ್ಲ ಇದರಲ್ಲಿ ಸುಮ್ಮನೇ ತಲೆಬಿಸಿ ಮಾಡ್ತಾರೆ ಇವರು ಎಂದು ಮಗದೊಬ್ಬರು. ಹೀಗೆ ಈ ಗೂಬೆಗಳ ಗುಂಪಿನಲ್ಲಿ ಬೆಕ್ಕನ್ನು ಹುಡುಕಾಡಲಾಗದೆ ಚಡಪಡಿಸುತ್ತಿದ್ದಾರೆ. ಆದರೆ ನೀವು ಹಾಗಲ್ಲ, ಎಂದಿನಂತೆ ಇಂಥ ಬ್ರೇನ್​ ಟೀಸರ್​ಗಾಗಿ ಕಾಯುತ್ತಿರುತ್ತೀರಿ. ಅಲ್ಲವೆ?

ಹತ್ತು ಸೆಕೆಂಡಿನೊಳಗೆ ಈ ಗೂಬೆಯ ಹಿಂಡಿನಲ್ಲಿ ಬೆಕ್ಕನ್ನು ಹುಡುಕಬಲ್ಲಿರಾ ಹಾಗಿದ್ದರೆ? ನೂರಾರು ಗೂಬೆಗಳ ಮಧ್ಯೆ ಒಂದು ಬೆಕ್ಕು ಹುಡುಕಲು ಕೇವಲ ಹತ್ತು ಸೆಕೆಂಡ್, ಎನ್ನುತ್ತಿರುವಿರಾ? ಸರಿ ಇಪ್ಪತ್ತು ಸೆಕೆಂಡುಗಳನ್ನೇ ತೆಗೆದುಕೊಳ್ಳಿ.

ಇದನ್ನೂ ಓದಿ : Viral Video: ಮದುವೆ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತ ವಧು; ವಿಡಿಯೊ ನೋಡಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಊಟ ಮಾಡಿ ಕುಳಿತ ನಿಮಗೆ ಕೆಲಸ ಮಾಡಲೂ ಮನಸ್ಸಾಗದು, ಸುಮ್ಮನೇ ಹತ್ತು ನಿಮಿಷ ಮಲಗೋಣ ಎಂದೆನ್ನಿಸುತ್ತಿರುತ್ತದೆ. ಆದರೆ ಮಾಡುವ ಕೆಲಸ ಬಿಟ್ಟು ಹಾಗೆ ಮಾಡಲು ಸಾಧ್ಯವೆ? ಅದಕ್ಕೇ ನಿಮ್ಮ ಮೆದುಳಿನ ಜಡತ್ವವನ್ನ ಹೊಡೆದೋಡಿಸಲು ನಾವು ಆಗಾಗ ಇಂಥ ಸವಾಲುಗಳನ್ನು ಒಡ್ಡುವುದುಂಟು.

ಸುಳಿವು ಕೊಡಬೇಕೆ? ಬೆಕ್ಕು ಮೇಲಿನಿಂದ ಐದನೇ ಸಾಲಿನಲ್ಲಿ ಕುಳಿತಿದೆ. ಇನ್ನೂ ಗೊತ್ತಾಗಲಿಲ್ಲವಾ? ಹಾಗಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿಬಿಡಿ.

ಇಲ್ಲಿದೆ ಉತ್ತರ!

ಸಿಕ್ಕಿತೋ ಬೆಕ್ಕು? ಇದು ಇಲಿ ಹುಡುಕಿಕೊಂಡು ಇಲ್ಲಿ ಬಂದು ಕುಳಿತಿದೆ. ಬಾರೋ ಸೋಮಾರಿ, 20 ತಾಸು ನಿದ್ದೆ ಮಾಡ್ತೀಯಾ ದಿನಕ್ಕೆ. ನಮ್ಮಜೊತೆ ಒಂದು ರಾತ್ರಿ ಎದ್ದು ಕುಳಿತುಕೋ. ಆಗ ನಾವೆಲ್ಲಾ ಸೇರಿ ನಿನ್ನ ತಿಂಡಿಯನ್ನು ಹಿಡಿದುಕೊಡುತ್ತೇವೆ! ಎಂದು ಗೂಬೆಗಳು ನೈಟ್ ಔಟ್ ಮಾಡಿಸುತ್ತಿವೆ ಈ ಬೆಕ್ಕನ್ನು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

 

Published On - 2:55 pm, Thu, 4 May 23