ಹೆಂಡತಿ ತವರಿಗೆ; ಕೋಪದಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಬಿಹಾರದ ವ್ಯಕ್ತಿ

| Updated By: ಶ್ರೀದೇವಿ ಕಳಸದ

Updated on: Jan 21, 2023 | 3:25 PM

Bihar : ಕೋಪದಲ್ಲಿ ಮೂಗು ಕುಯ್ದುಕೊಳ್ಳುವುದು ಗೊತ್ತಿತ್ತು. ಆದರೆ ಈ ವ್ಯಕ್ತಿ ಕೋಪದಲ್ಲಿ ಹೀಗೆಲ್ಲ ಮಾಡಿಕೊಳ್ಳುವುದೆ? ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಅಪಾಯದಿಂದ ಈತ ಪಾರಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಹೆಂಡತಿ ತವರಿಗೆ; ಕೋಪದಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಬಿಹಾರದ ವ್ಯಕ್ತಿ
ಪ್ರಾತಿನಿಧಿಕ ಚಿತ್ರ
Follow us on

Viral Video : ಕೋಪ ಯಾವುದಕ್ಕೆಲ್ಲ ಬರುತ್ತದೆ. ಬಂದಾಗ ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಊಹಿಸುವುದು ಬಹಳೇ ಕಷ್ಟ. ಅನುಭವಿಸಿದವರಿಗೆ ಮತ್ತು ಅದಕ್ಕೆ ಸಾಕ್ಷಿಯಾದವರಿಗೆ ಮಾತ್ರ ಅದರ ತೀವ್ರತೆ ಗೊತ್ತು. ಇದೀಗ ಬಿಹಾರ ವ್ಯಕ್ತಿಯೊಬ್ಬ ಕೋಪದಲ್ಲಿ ಮಾಡಿಕೊಂಡ ಅವಾಂತರ ಮಾತ್ರ ಅತೀ ಭಯಂಕರ ಮತ್ತು ಪ್ರಾಣಾಂತಿಕ! ಪರಿಣಾಮವನ್ನೂ ಅವನೇ ಅನುಭವಿಸಬೇಕು. ಆದರೆ ಕೋಪಕ್ಕೆ ಕಾರಣ ಕೇಳಿದರೆ ನಗಬೇಕೋ ಅಳಬೇಕೋ ಭಯಪಡಬೇಕೋ.

ಇದನ್ನೂ ಓದಿ : ಗರ್ಭಿಣಿಯಾಗಲು ಸೊಸೆಗೆ ಮೂಳೆಪುಡಿ ಸೇವಿಸಲು ಒತ್ತಾಯಿಸಿದ ಅತ್ತೆ

ತನ್ನ ಹೆಂಡತಿ ತವರಿಗೆ ಹೋಗಿ ಬಹಳ ದಿನಗಳಾದರೂ ತನ್ನ ಮನೆಗೆ ವಾಪಸಾಗಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಬಿಹಾರದ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ಧಾನೆ. ಶುಕ್ರವಾರ ರಾತ್ರಿ ಬಿಹಾರದ ಮಾದೇಪುರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿರುವ ರಜನಿ ನಯಾನಗರ ಪ್ರದೇಶದಲ್ಲಿ ಈ ದುರ್ಘಟನೆ ವರದಿಯಾಗಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

ಮಹೇಂದ್ರ ಬಾಸುಕಿ ಎನ್ನುವವರ ಮಗ ಕೃಷ್ಣ ಬಾಸುಕಿ (25) ಎಂದು ಈ ವ್ಯಕ್ತಿಯನ್ನು ಗುರುತಿಸಲಾಗಿದೆ. ಗೋವಾಲ್ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಲೌದ್ 6ರ ನಿವಾಸಿ ಛೋಟೆ ಲಾಲ್ ಬಾಸುಕಿ ಅವರ ಮಗಳು ಅನಿತಾಳೊಂದಿಗೆ ಕೃಷ್ಣನ ಮದುವೆಯಾಗಿತ್ತು. ಕೃಷ್ಣ ಪಂಜಾಬ್‌ನ ಮಂಡಿಯಲ್ಲಿ ವಾಸವಾಗಿದ್ದು ಅಲ್ಲಿಯೇ ಕೆಲಸ ಮಾಡಿಕೊಂಡಿದ್ಧಾನೆ. ಎರಡು ತಿಂಗಳ ಹಿಂದೆ ರಜನಿ ನಯಾನಗರದಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದ.

ಇದನ್ನೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಆದರೆ ಆತನ ಪತ್ನಿ ಅನಿತಾ ತನ್ನ ತವರಿಗೆ ಹೋಗಿ ಬಹಳ ದಿನಗಳಾಗಿದ್ದವು. ಕೋಪಗೊಂಡ ಕೃಷ್ಣ ಹರಿತ ಆಯುಧದಿಂದ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅವನ ಸಂಬಂಧಿಕರು ಅವನನನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಕೆಲ ಮೂಲಗಳ ಪ್ರಕಾರ ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ.

ಈತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಅಪಾಯದಿಂದ ಪಾರಾಗಿದ್ಧಾನೆ ಎಂದು ಬಿಹಾರದ ವೈದ್ಯಕೀಯ ಕಾಲೇಜಿನ ಡಾ. ಸುಕೇಶ್ ಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 3:22 pm, Sat, 21 January 23