Viral News : ಬೆಕ್ಕೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮುದ್ದುಮುದ್ಧಾಗಿರುವ ಮೆತ್ತಗಿನ ಈ ಸಾಕುಪ್ರಾಣಿಗೂ ಮನುಷ್ಯರ ಸಹವಾಸ ಬೇಕೇಬೇಕು. ಆದರೆ ಇಷ್ಟು ಮುದ್ದಾದ ಪ್ರಾಣಿಯನ್ನು ಯಾರಿಗಾದರೂ ಬೀದಿಯಲ್ಲಿ ಬಿಡಲು ಸಾಧ್ಯವೆ? ಇಂಥದ್ದರಲ್ಲಿ ಇಂಗ್ಲೆಂಡಿನ ಪಾರ್ಕ್ನಲ್ಲಿ ಯಾರೋ ಒಬ್ಬರು ಜೀವಂತ ಬೆಕ್ಕನ್ನು ಚೀಲದಲ್ಲಿ ಕಟ್ಟಿ ಎಸೆದು ಹೋಗಿದ್ದಾರೆ. ಇದು ಬೆಕ್ಕುಪ್ರಿಯರನ್ನು ಗಾಸಿಗೊಳಿಸಿದೆ. ಇದೀಗ ಈ ಬೆಕ್ಕು ರೊಥರ್ ಹ್ಯಾಮ್ ಜಿಲ್ಲಾಪ್ರಾಣಿ ಕೇಂದ್ರದಲ್ಲಿ ವೈದ್ಯರ ಆರೈಕೆಯಲ್ಲಿದೆ.
ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್
ಈ ಬೆಕ್ಕು ಡೇನ್ ಪಾರ್ಕ್ನಲ್ಲಿ ಪತ್ತೆಯಾಗಿದೆ. ಲಾಂಡ್ರಿ ಝಿಪ್ ಅಪ್ ಬ್ಯಾಗ್ನಲ್ಲಿ ಹಾಕಿ ಯಾರೋ ಎಸೆದು ಹೋಗಿದ್ದರು. ತನ್ನ ನಾಯಿಯೊಂದಿಗೆ ವಾಕಿಂಗ್ ಬಂದ ಮಹಿಳೆಯೊಬ್ಬರು ಇದನ್ನು ಗಮನಿಸಿದ್ದಾರೆ. ನಂತರ ಅದನ್ನು ಎತ್ತಿಕೊಂಡು ಝಿಪ್ ಅನ್ಲಾಕ್ ಮಾಡಿ ಪ್ರಾಣಿ ದತ್ತಿ ಸಂಸ್ಥೆಗೆ ಸುದ್ದಿ ಮುಟ್ಟಿಸಿದ್ದಾರೆ. ಜನವರಿ 26ರಂದು ಈ ಘಟನೆ ನಡೆದಿದೆ.
ಇದನ್ನೂ ಓದಿ : ರಾಶಿ ಪೆಂಗ್ವಿನ್ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ
ಬೂದು ಮತ್ತು ಬಿಳೀ ಬಣ್ಣದ ಮೂರು ವರ್ಷದ ಬೆನ್ನು ಬಹಳಷ್ಟು ಒತ್ತಡ ಮತ್ತು ಆತಂಕಕ್ಕೆ ಈಡಾಗಿತ್ತು. ಇದು ಸಾಕಿದ ಬೆಕ್ಕಾದರೂ ಬೇಡವೆಂದು ಹೀಗೆ ಬೀದಿಗೆ ಎಸೆದ ಬೆಕ್ಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವ ಪ್ರಾಣಿಗಳನ್ನು ಹೀಗೆ ಕ್ರೂರವಾಗಿ ಕಾಣಬಾರದು. ಸಾಕಿದ ಪ್ರಾಣಿಗಳು ಬೇಡವೆನ್ನಿಸಿದಾಗ ಪ್ರಾಣಿ ದಯಾ ಸಂಘಗಳ ಸುಪರ್ದಿಗೆ ಒಪ್ಪಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ‘ಹಾಂ ಈಗ ವೈರ್ ಎಳೀ ನೋಡೋಣ’ ಸಹಾಯಕ ಎಲೆಕ್ಟ್ರಿಷಿಯನ್ ಮಿಸ್ಟರ್ ಬೆಕ್ಕಣ್ಣ
ಪ್ರತೀ ಜೀವಿಗೂ ಅದರದೇ ಆದ ಘನತೆ ಇರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ಕ್ರೂರತೆ ಎಲ್ಲರೊಳಗೂ ಇರುತ್ತದೆ. ಆದರೆ ಮಾನವೀಯತೆನ್ನು ಬೆಳೆಸಿಕೊಳ್ಳುವುದಕ್ಕೇ ಪ್ರಾಣಿ ಪಕ್ಷಿಗಳ ಬಾಂಧವ್ಯವನ್ನು ಮನುಷ್ಯ ಬೆಸೆದುಕೊಳ್ಳುತ್ತಾ ಹೋಗುತ್ತಾನೆ. ಆದರೆ ಈಗಿಲ್ಲಿ ಹೀಗಾಗಿರುವುದು ಮಾತ್ರ ಅಸಹ್ಯದ ಪರಮಾವಧಿ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:55 pm, Mon, 6 February 23