ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು

|

Updated on: Feb 07, 2023 | 9:46 AM

ChatGPT : ಈ ಫೋಟೋ, ಫೋಟೋಶಾಪ್ ಮಾಡಿದ್ದೇ? ಆನಂದ ಮಹೀಂದ್ರಾ ಅವರಿಗೆ ಅನುಮಾನ ಬಂದಿದೆ. ಮಾಡಿದ್ದರೂ ಇದು ಬುದ್ಧಿವಂತಿಕೆಯಿಂದ ಕೂಡಿದೆ ಎಂದಿದ್ದಾರೆ.

ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು
ಚಾಟ್​ ಜಿಪಿಟಿ ಕಾರ್ನರ್​
Follow us on

Viral News : ನಿನ್ನೆಯಷ್ಟೇ ಚಾಟ್​ಜಿಪಿಟಿ (ChatGPT) ಒಬ್ಬ ವ್ಯಕ್ತಿಗೆ ಡ್ರಗ್ಸ್​ ಬಿಝಿನೆಸ್​ ಮಾಡಲು ಸಲಹೆಗಳನ್ನು ಕೊಟ್ಟಿರುವ ಸುದ್ದಿಯನ್ನು ಓದಿದಿರಿ. ಈಗೀಗಲಂತೂ ಎಲ್ಲೆಡೆ ಚಾಟ್​ಜಿಪಿಟಿಯದೇ ಸುದ್ದಿ. ಇದೀಗ ಭಾರತದಲ್ಲಿ ಒಂದು ಹೊಸ ಚಾಟ್​ಜಿಪಿಟಿ ಕಾರ್ನರ್​ ಶುರುವಾಗಿದೆ. ನೆಟ್ಟಿಗರೆಲ್ಲ ಇದನ್ನು ಬಾಯಲ್ಲಿ ನೀರೂರಿಸಿಕೊಂಡು ನೋಡುತ್ತಿದ್ದಾರೆ. ಈ ಗೋಲ್ಗಪ್ಪಗಳನ್ನು ತಿಂದರೆ ನಮಗೆ ಬೇಕಾದ ಉತ್ತರಗಳೆಲ್ಲವೂ ಸಿಗುತ್ತವಾ? ಎಂದು ಕೇಳುತ್ತಿದ್ದಾರೆ.

ಈ ಪೋಸ್ಟ್​ ಅನ್ನು ಉದ್ಯಮಿ ಆನಂದ ಮಹೀಂದ್ರಾ ಇದೀಗ ಟ್ವೀಟ್ ಮಾಡಿದ್ದಾರೆ. ಪೇಟಿಎಂನ ಸ್ಥಾಪಕ ವಿಜಯ ಶೇಖರ್ ಶರ್ಮಾ ಕೂಡ ಇದನ್ನು ಟ್ವೀಟ್ ಮಾಡಿದ್ದಾರೆ. ಚಾಟ್​ ಎಂದರೆ ಯಾರಿಗೆ ಗೊತ್ತಿಲ್ಲ? ಭಾರತೀಯರೆಲ್ಲರ ರುಚಿಧಾತುಗಳನ್ನು ಹಿಡಿದಿಟ್ಟುಕೊಂಡಂಥ ಅದ್ಭುತ ಶಕ್ತಿ ಇದಕ್ಕಿದೆ. ಆದರೆ ಈಗ ಚಾಲ್ತಿಯಲ್ಲಿರುವ ಚಾಟ್​ಜಿಪಿಟಿ ತಂತ್ರಜ್ಞಾನ ಮಾತ್ರ ಜಗತ್ತಿನ ಮೆದುಳುಗಳನ್ನೆಲ್ಲ ತನ್ನೆಡೆ ಸೆಳೆದಿಟ್ಟುಕೊಳ್ಳುತ್ತಲೇ ಇದೆ. ಚುರುಕಾದ ತನ್ನ ಕೃತಕ ಬುದ್ಧಿಮತ್ತೆ (AI)ಯಿಂದ ತನ್ನ ಬಗ್ಗೆ ಕುತೂಹಲ ಹುಟ್ಟುಹಾಕುತ್ತಲೇ ಇದೆ.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಚಾಟ್​ ಜಿಪಿಟಿ, ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​, ಚಾಟ್​ಬಾಟ್​ ಈ ಎಲ್ಲವೂ ಸಾಮಾಜಿಕ ಜಾಲತಾಣಗಳನ್ನು ಆಳುತ್ತಿವೆ. ಈ ಸಂದರ್ಭದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ಚಾಟ್​ ಅಂಗಡಿಯ ಚಿತ್ರ ಫೋಟೋಶಾಪ್ ಮಾಡಿರಲೂ ಸಾಧ್ಯವಿದೆ. ಬೇಕೆಂದೇ ಮಾಡಿದ್ದರೂ ಇದು ಬುದ್ಧಿವಂತಿಕೆಯಿಂದ ಕೂಡಿದೆ. ಭಾರತೀಯರಾದ ನಾವುಗಳು ಎಲ್ಲವನ್ನೂ ‘ಭಾರತೀಯ’ತೆಗೆ ಒಗ್ಗಿಸಿಕೊಳ್ಳುವ ಖಯಾಲಿಯನ್ನು ಹೊಂದಿದ್ದೇವೆ! ಎಂದಿದ್ದಾರೆ ಆನಂದ ಮಹೀಂದ್ರಾ.

ಇದನ್ನೂ ಓದಿ : ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್

ಅನೇಕರು ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನು AI – Aloo+Imli ಯಿಂದ ನಿರ್ವಹಿಸಲಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಹಾಂ ನಾವು ಅನೇಕ ವಿಷಯಗಳನ್ನು ಹೀಗೆ ‘ಭಾರತೀಯ’ಗೊಳಿಸುವ ಕೌಶಲವನ್ನು ಹೊಂದಿದ್ದೇವೆ. ಹೀಗೆ ಮಾಡುತ್ತಲೇ ಇಂಥ ವಿಷಯಗಳನ್ನು ಒಂದು ಸ್ತರ ಹೆಚ್ಚೇ ಮೇಲಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ ಇನ್ನೊಬ್ಬರು. ದಯವಿಟ್ಟು ಒಂದು ಪ್ಲೇಟ್​ ಗೋಲ್ಗಪ್ಪ, ಆಲೂಚಾಟ್ ಎಂದು ಮಗದೊಬ್ಬರು ಕೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 9:45 am, Tue, 7 February 23