ಸಿಂಗಪೂರ್​ ಬುಕ್ ಆಫ್​ ರೆಕಾರ್ಡ್ಸ್​ ಸೇರಿದ ತಾಯಿ ಮಗಳ ರಂಗೋಲಿ ಕಲೆ

| Updated By: ಶ್ರೀದೇವಿ ಕಳಸದ

Updated on: Jan 27, 2023 | 3:44 PM

Rangoli : ಕಲಾವಿದೆ ಸುಧಾ ರವಿ, ಮಗಳು ರಕ್ಷಿತಾ ಅವರೊಂದಿಗೆ ಸಿಂಗಪೂರ್​ನಲ್ಲಿ ಆಯೋಜಿಸಲಾಗಿದ್ದ ಪೊಂಗಲ್​ ಫೆಸ್ಟಿವಲ್​ನಲ್ಲಿ 26,000 ಐಸ್ಕ್ರೀಮ್ ಕಡ್ಡಿಗಳನ್ನು ಉಪಯೋಗಿಸಿ 6/6 ಮೀಟರ್ ರಂಗೋಲಿ ಕಲಾಕೃತಿಗಳನ್ನು ರಚಿಸಿದ್ದರು.

ಸಿಂಗಪೂರ್​ ಬುಕ್ ಆಫ್​ ರೆಕಾರ್ಡ್ಸ್​ ಸೇರಿದ ತಾಯಿ ಮಗಳ ರಂಗೋಲಿ ಕಲೆ
ರಂಗೋಲಿ ಕಲಾವಿದೆ ಸುಧಾ ರವಿ ಅವರು ರಚಿಸಿದ ರಂಗೋಲಿ ಕಲಾಕೃತಿಗಳು
Follow us on

Viral Video : ರಂಗೋಲಿ ಎನ್ನುವುದು ಮನೆಯಂಗಳಕ್ಕಷ್ಟೇ ಸೀಮಿತವಾದ ಕಲೆ ಅಲ್ಲ. ಅದು ಕಲಾವಿದರ ಕಲ್ಪನೆಯಲ್ಲಿ ಹೊಸಿಲು ದಾಟಿ ಆಗಾಗ ಜಗತ್ತಿನ ಗಮನ ಸೆಳೆಯುತ್ತಿರುತ್ತದೆ. ಇದೀಗ ಸಿಂಗಪೂರ್​ನಲ್ಲಿರುವ  ಭಾರತೀಯ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ತಮಿಳಿನ ಕವಿಗಳಾದ ತಿರುವಳ್ಳವರ್, ಅವ್ವೈಯ್ಯಾರ್​, ಭಾರತೀಯಾರ್, ಭಾರತೀದಾಸನ್​ ಅವರನ್ನು ರಂಗೋಲಿಯಲ್ಲಿ ಚಿತ್ರಿಸಿದ್ದಾರೆ. ಈ ಕಲಾಕೃತಿಗಳು ಸಿಂಗಪೂರ್​ ಬುಕ್​ ಆಫ್​ ರೆಕಾರ್ಡ್ಸ್​ ಸೇರಿವೆ.

ಸುಧಾ ರವಿ ತಮ್ಮ ಪುತ್ರಿ ರಕ್ಷಿತಾ ಅವರೊಂದಿಗೆ ಕಳೆದ ವಾರ ಲಿಟಲ್​ ಇಂಡಿಯಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೊಂಗಲ್​ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗೋಲಿ ಕಲೆಯನ್ನು ಪ್ರಸ್ತುತಪಡಿಸಿದ್ದರು. 26,000 ಐಸ್ಕ್ರೀಮ್ ಕಡ್ಡಿಗಳನ್ನು ಉಪಯೋಗಿಸಿ 6/6 ಮೀಟರ್ ರಂಗೋಲಿ ಕಲಾಕೃತಿಯನ್ನು ಇವರು ರಚಿಸಿದ್ದರು.

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಗಾಗಲೇ ಸುಧಾ ರವಿ 2016ರಲ್ಲಿ ಸಿಂಗಪೂರನಲ್ಲಿ 3,200 ಚದರ ಅಡಿ ಅಳತೆಯ ರಂಗೋಲಿ ರಚಿಸಿ ದಾಖಲೆ ಮಾಡಿದ್ದಾರೆ. ಇದೀಗ ಮತ್ತೆ ಮಗಳೊಂದಿಗೆ ತಮಿಳಿನ ವಿದ್ವಾಂಸರು, ಕಲಾವಿದರನ್ನು ರಂಗೋಲಿ ಕಲಾಕೃತಿಯಲ್ಲಿ ರಚಿಸುವುದರ ಮೂಲಕ ಮತ್ತೊಮ್ಮೆ ದಾಖಲೆ ಮಾಡಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಇವರು ಈ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದರು.

ಇದನ್ನೂ ಓದಿ : ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

ರಂಗೋಲಿ ಕಲೆಯ ಮೂಲಕ ತಮಿಳು ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ತೊಡಗಿಕೊಂಡಿರುವ ಸುಧಾ ಅವರು, ಅಕ್ಕಿ ಹಿಟ್ಟು, ಸೀಮೆಸುಣ್ಣ, ಐಸ್​ಕ್ರೀಮ್​ ಕಡ್ಡಿ, ಬಣ್ಣಗಳನ್ನು ಮಾಧ್ಯಮವನ್ನಾಗಿಸಿಕೊಳ್ಳುತ್ತ ಬಂದಿದ್ದಾರೆ. ‘ಸುಧಾ ಅವರು ರಂಗೋಲಿ ಕಲೆಯ ಮೂಲಕ ತಮಿಳು ಸಂಸ್ಕೃತಿ, ಭಾಷೆಯನ್ನು ಯುವಪೀಳಿಗೆಗೆ ತಲುಪಿಸುವಲ್ಲಿ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ.’ ಎಂದು ಕಲಾಮಂಜರಿಯ ಆಯೋಜಕರಾದ ಸೌಂದರಾ ನಾಯಕಿ ವೈರವನ್​ ಹೇಳಿದ್ದಾರೆ. ಈ ಕಲಾಮಂಜರಿ ಕಾರ್ಯಕ್ರಮವು ಲಿಶಾ ಪೊಂಗಲ್​ ಫೆಸ್ಟಿವಲ್ 2023 ಪ್ರೋತ್ಸಾಹದೊಂದಿಗೆ ಆಯೋಜನೆಗೊಂಡಿತ್ತು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:39 pm, Fri, 27 January 23