ಇಲ್ಲಿ ಕಚೋರಿ ತಿನ್ನಬೇಕೆಂದರೆ ರಸಾಯನಶಾಸ್ತ್ರ ಅಧ್ಯಯನ ಮಾಡುವುದು ಕಡ್ಡಾಯ!

| Updated By: ಶ್ರೀದೇವಿ ಕಳಸದ

Updated on: Jan 16, 2023 | 11:16 AM

Kachori : ಕೋಟಾದ ಈರುಳ್ಳಿ ಕಚೋರಿ ಮುಂದೆ ದಾಲ್​ ಕಚೋರಿ ನಪಾಸು. ಕಚೋರಿ ಮಾರುವವರಿಗೆ ಡಿಫ್ರೆನ್ಶಿಯೇಷನ್,​ ಇಂಟಿಗ್ರೇಷನ್​ ಬರುತ್ತದೆ... ಹೀಗೆಲ್ಲ ಹರಟೆ ಹೊಡೆಯುತ್ತ ಮಂಡೇ ಬ್ಲ್ಯೂಸ್​ನಿಂದ ಹೊರಬರುತ್ತಿದೆ ನೆಟ್​ಮಂದಿ.

ಇಲ್ಲಿ ಕಚೋರಿ ತಿನ್ನಬೇಕೆಂದರೆ ರಸಾಯನಶಾಸ್ತ್ರ ಅಧ್ಯಯನ ಮಾಡುವುದು ಕಡ್ಡಾಯ!
ಕಚೋರಿ ಹಾಕಿಕೊಟ್ಟ ಪೇಪರ್ ಪ್ಲೇಟ್​ನಲ್ಲಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಮುದ್ರಣಗೊಂಡಾಗ
Follow us on

Viral News : ನಮ್ಮ ನಡುವಿನ ಅನೇಕ ಓದುಗರನ್ನು, ಬರಹಗಾರರನ್ನು ಮಾತನಾಡಿಸಿ ನೋಡಿ. ನಿಮ್ಮ ಓದುವ ಹವ್ಯಾಸ ಎಲ್ಲಿಂದ ಶುರುವಾಯಿತೆಂದು. ಕಿರಾಣಿ ಅಂಗಡಿಗಳಲ್ಲಿ, ರಸ್ತೆಬದಿ ಅಂಗಡಿಗಳಲ್ಲಿ ದಿನಸಿ, ತಿನಿಸು, ತಿಂಡಿಗಳನ್ನು ಕಟ್ಟಿಕೊಡುತ್ತಿದ್ದ ಪೇಪರ್​ಗಳಿಂದ ಎಂದು ಹೇಳುತ್ತಾರೆ. ಆ ಕಾಲದಲ್ಲಿ ಹಳ್ಳಿಗಳಲ್ಲಿ ಪಠ್ಯಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳು ಸುಲಭಕ್ಕೆ ಮತ್ತು ಎಲ್ಲರಿಗೂ ಓದಲು ಸಿಗುತ್ತಿರಲಿಲ್ಲ. ಹಾಗಾಗಿ ಜ್ಞಾನದ ಹಸಿವನ್ನು ಅವರು ಹೀಗೆಲ್ಲ ಹುಡುಕಾಡಿ ತೀರಿಸಿಕೊಳ್ಳುತ್ತಿದ್ದರು. ಇದೀಗ ವೈರಲ್ ಆಗಿರುವ ಈ ಕಚೋರಿ ಪ್ಲೇಟ್​ ಅಪ್ಪಟ ರಸಾಯನಶಾಸ್ತ್ರ ಪ್ರೇಮಿಗಳಿಗೆ ಮತ್ತು ಕಚೋರಿ ಪ್ರಿಯರಿಗೆ!

ರಾಜಸ್ತಾನದ ಕೋಟಾ ಜಂಕ್ಷನ್​ನಲ್ಲಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯಿಂದ ಕೂಡಿದ ಪೇಪರ್​ ಪ್ಲೇಟ್​ನಲ್ಲಿ ಕಚೋರಿಗಳನ್ನು ಹಾಕಿಕೊಟ್ಟಿರುವ ಫೋಟೋ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು ಈ ಫೋಟೋ ಅನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್​ನ ಥ್ರೆಡ್​ನಲ್ಲಿ ಹರಟೆ ಹೊಡೆಯುತ್ತಿರುವ ನೆಟ್​ಮಂದಿ ಮಂಡೇ ಬ್ಲ್ಯೂಸ್​ನಿಂದ ಹೊರಬರುತ್ತಿದೆ.

ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್​

ಅನೇಕರು ತಮ್ಮ ಐಐಟಿ ಕೋಚಿಂಗ್​ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಕೋಟಾದಲ್ಲಿ ಕಚೋರಿ ತಿನ್ನಬೇಕಾದರೂ ಓದಿಕೊಂಡೇ ತಿನ್ನಬೇಕು! ಕೋಟಾದ ಈರುಳ್ಳಿ ಕಚೋರಿ ಮುಂದೆ ದಾಲ್​ ಕಚೋರಿ ನಪಾಸು.  ಕೋಟಾದ ಕಚೋರಿ ಮಾರುವವರಿಗೆ ಡಿಫ್ರೆನ್ಶಿಯೇಷನ್​ ಇಂಟಿಗ್ರೇಷನ್​ ಬರುತ್ತದೆ! ಅಣ್ಣಾ ಒಂದು ಪ್ಲೇಟ್​ ಆರ್ಗ್ಯಾನಿಕ್​ ಕಚೋರಿ ಕೊಡಿ ಎಂದು ಒಬ್ಬರು ಕೇಳಿದ್ದಾರೆ.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಇನ್ನೊಬ್ಬರು ರೀಟ್ವೀಟ್ ಮಾಡಿದ ವಿಡಿಯೋದಲ್ಲಿ ಕಚೋರಿಯನ್ನು ಕಾಗದದ ಕವರ್​ನಿಂದ ಹೊರತೆಗೆಯುತ್ತಾರೆ. ಆ ಕವರ್​ ಮೇಲೆ ಪೇಟ್ ಸಾಫ್​ ಎಂಬ ಮಾತ್ರೆಗಳ ಜಾಹೀರಾತು ಇದೆ! ಕಚೋರಿ ತಿಂದರೆ ಹೊಟ್ಟೆ ಸ್ವಚ್ಛ ಎಂಬರ್ಥವನ್ನು ಈ ವಿಡಿಯೋ ಸೂಚಿಸುತ್ತದೆ.

ಇದನ್ನೂ ಓದಿ : ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್

ಈ ಪ್ರಶ್ನೆಪತ್ರಿಕೆಗಾಗಿಯಾದರೂ ಕಚೋರಿ ಆರ್ಡ್ ಮಾಡಬೇಕು ಹಾಗಿದ್ದರೆ ಎಂದು ಒಬ್ಬರು ಹೇಳಿದ್ದಾರೆ. ಕೋಟಾದಲ್ಲಿ ಸುವಾಲಾಲ್​ಜೀ ಅವರ ಕಚೋರಿ ಬಹಳ ಚೆನ್ನಾಗಿರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಇದೆಲ್ಲ ಓದಿದ ಮೇಲೆ ನಿಮಗೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಇರುವ ಪ್ಲೇಟ್ ನೋಡಬೇಕು ಅನ್ನಿಸುತ್ತಿದೆಯೋ, ಕಚೋರಿ ತಿನ್ನಬೇಕು ಅನ್ನಿಸುತ್ತಿದೆಯೋ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:13 am, Mon, 16 January 23