ಈತನಕ ಒಂದು ಹುಡುಗಿಯನ್ನೂ ಮನೆಗೆ ಕರೆತರದ ಮಗನನ್ನು ಮನೋತಜ್ಞರ ಬಳಿ ಕರೆದೊಯ್ದ ತಾಯಿ

| Updated By: ಶ್ರೀದೇವಿ ಕಳಸದ

Updated on: Feb 10, 2023 | 3:40 PM

China : ಟೆನ್ನಿಸ್ ಕೋಚ್ ಆಗಿರುವ ವಾಂಗ್​, ತಾನು ಕೆಲಸದಲ್ಲಿ ಮುಳುಗಿದ್ದೇನೆ. ಅಲ್ಲದೆ ಮದುವೆಯಾಗಲು ಈತನಕ ಸೂಕ್ತ ವ್ಯಕ್ತಿ ಸಿಕ್ಕಿಲ್ಲ. ಪ್ರತೀ ವರ್ಷ ಅಮ್ಮನ ಸಮಾಧಾನಕ್ಕೆ ಆಸ್ಪತ್ರೆಗೆ ಬರುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ.

ಈತನಕ ಒಂದು ಹುಡುಗಿಯನ್ನೂ ಮನೆಗೆ ಕರೆತರದ ಮಗನನ್ನು ಮನೋತಜ್ಞರ ಬಳಿ ಕರೆದೊಯ್ದ ತಾಯಿ
ವಾಂಗ್​ ತನ್ನ ತಾಯಿಯೊಂದಿಗೆ (ಸೌಜನ್ಯ : SCMP)
Follow us on

Viral News : ಇದು ಚೀನಾದಲ್ಲಷ್ಟೇ ಅಲ್ಲ, ಜಗತ್ತಿನ ಎಲ್ಲ ತಂದೆತಾಯಿಗೂ ಮಕ್ಕಳ ಬಗ್ಗೆ ಇಂಥ ಆತಂಕಗಳು ಸಹಜ. ಪೋಷಕರು ತಮ್ಮ ಮಕ್ಕಳ ಬೆಳವಣಿಗೆಯನ್ನು ವಯೋಸಹಜವಾಗಿ ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆ ಅವರ ಬದುಕು ಸಾಗದಿದ್ದಾಗ ಒತ್ತಡ ಮತ್ತುಆತಂಕಕ್ಕೆ ಸಿಲುಕುತ್ತಾರೆ. ಆಗ ಕೆಲವರು ದೈವದ ಮೊರೆ ಹೋಗುತ್ತಾರೆ ಇನ್ನೂ ಕೆಲವರು ವೈದ್ಯರ ಬಳಿ ಧಾವಿಸುತ್ತಾರೆ. ಚೀನಾದ ತಾಯಿ 38 ವರ್ಷದ ತನ್ನ ಮಗನ ಬಗ್ಗೆ ಬಹಳ ಚಿಂತಿತರಾಗಿದ್ದಾರೆ. ಕಾರಣ ಈತನಕ ಒಬ್ಬಳೇ ಒಬ್ಬಳು ಹುಡುಗಿಯನ್ನು ಈತ ಮನೆಗೆ ಕರೆದುಕೊಂಡು ಬಂದಿಲ್ಲ ಎಂದು. ಆಗ ಆಕೆ ಮನೋವೈದ್ಯರ ಬಳಿ ಆತನನ್ನು ಕರೆದೊಯ್ದಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಈ ಮಹಿಳೆಯು 2020ರಿಂದ ಚಾಂದ್ರಮಾನ ಹೊಸ ವರ್ಷದ ದಿನದಂದು ತನ್ನ ಮಗನನ್ನು ನಿಯಮಿತವಾಗಿ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಳು. ಇದು ಮಗನಿಗೆ ನುಂಗಲಾರದ ತುತ್ತಾಗಿತ್ತು. ಕೊನೆಗೆ ಅವನು ಇತ್ತೀಚೆಗೆ ತನ್ನ ಸಂಕಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಹಂಚಿಕೊಂಡೇಬಿಟ್ಟ.

ಇದನ್ನೂ ಓದಿ : ಪ್ರತೀ 447 ಹಿಮಕರಡಿಗಳಲ್ಲಿ ಒಂದು ಮಾತ್ರ ಹೀಗೆ ಪವಿತ್ರ ಬೆಂಕಿಯನ್ನು ಉಗುಳುತ್ತದೆ!?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಧ್ಯ ಚೀನೀ ಪ್ರಾಂತ್ಯದ ಹೆನಾನ್‌ನ ವಾಂಗ್ ಎನ್ನುವವನೇ ಈ ವ್ಯಕ್ತಿ. ಈತ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು, ಮದುವೆ ಮತ್ತು ಅದಕ್ಕಾಗಿ ಹೇರುವ ಒತ್ತಡದ ಬಗ್ಗೆ ಚರ್ಚಿಸಿದ್ದಾರೆ. ಈತನಕ ಹೊಸ ವರ್ಷದ ಮೊದಲ ದಿನದಂದು ಒಬ್ಬಳೇ ಒಬ್ಬಳು ಹುಡುಗಿಯನ್ನೂ ಮಗ ಮನೆಗೆ ಕರೆತಂದಿಲ್ಲ. ಏನಾದರೂ ಅವನಿಗೆ ಮನೋರೋಗವಿದೆಯೇ ಎಂದು ತಿಳಿದುಕೊಳ್ಳಲು ಹೀಗೆ ಮಾಡಿದೆ ಎಂದಿದ್ದಾಳೆ. ಆದರೆ ಮಗನಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆತ ಮಾನಸಿಕವಾಗಿ ದೃಢವಾಗಿದ್ದಾನೆ ಎಂದು ವೈದ್ಯರು ಈಸಲವೂ  ಹೇಳಿದ್ದಾರೆ.

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

‘ನಾನು ಅವಿವಾಹಿತ ಎಂದು ಗುರುತಿಸಿಕೊಳ್ಳುವ ಇರಾದೆ ಖಂಡಿತ ಇಲ್ಲ. ಆದರೆ ನನ್ನ ಕೆಲಸಗಳಲ್ಲಿ ಸಾಕಷ್ಟು  ಬಿಝಿಯಾಗಿದ್ದೇನೆ. ಅಲ್ಲದೆ ಈತನಕ ಸೂಕ್ತವೆನ್ನಿಸುವ ಯಾವುದೇ ವ್ಯಕ್ತಿಯನ್ನೂ ಭೇಟಿಮಾಡಿಲ್ಲ. ಏನು ಮಾಡುವುದು ನಾನು ಮದುವೆಯಾಗಿಲ್ಲವೆಂದು ನನ್ನ ತಾಯಿ ರಾತ್ರಿಹಗಲೂ ಯೋಚಿಸಿ ನಿದ್ರೆಯನ್ನೇ ಮಾಡುವುದಿಲ್ಲ. ಇದರಿಂದ ನನಗೆ ಬೇಸರವಾಗುತ್ತದೆ’ ಎಂದಿದ್ದಾನೆ ವಾಂಗ್​​.

ಇದನ್ನೂ ಓದಿ : ಬೈಕ್​ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್​​ಮಂದಿ

ವಾಂಗ್​ ಟೆನ್ನಿಸ್​ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತಾಯಿ ಆಸ್ಪತ್ರೆಗೆ ಹೋಗೋಣ ಎಂದು ಪದೇಪದೆ ಒತ್ತಾಯಿಸಿದಾಗ ಆಕೆಯ ಸಮಾಧಾನಕ್ಕೆ, ಧೈರ್ಯಕ್ಕೆ ಹೋಗುತ್ತಾನೆ. ಪ್ರತೀ ವರ್ಷವೂ ಆತನಿಗೆ ಏನೂ ಸಮಸ್ಯೆ ಇಲ್ಲ ಎನ್ನುವುದು ದೃಢಪಡುತ್ತದೆ. ಹಾಗೆಯೇ ಈ ವರ್ಷವೂ ಅವನು ಮಾನಸಿಕವಾಗಿ ಸ್ವಸ್ಥವಾಗಿಯೇ ಇದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಈ ತಾಯಿಯ ಕೊರಗನ್ನು ಏನು ಮಾಡುವುದು? ಮದುವೆ ಎನ್ನುವುದು ಅವರವರ ಆಯ್ಕೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:25 pm, Fri, 10 February 23