Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

Dog: ಈ ಹಿಮದ ರಾಶಿಯಲ್ಲಿ ಎರಡು ನಾಯಿಗಳು ನಡೆದುಕೊಂಡು ಹೋಗುತ್ತಿವೆ. ಆದರೆ ಇಲ್ಲಿ ಒಟ್ಟು ಮೂರು ನಾಯಿಗಳಿವೆ. ಕಾಣುತ್ತಿರುವುದು ಮಾತ್ರ ಎರಡು ನಾಯಿಗಳು. ಹಾಗಿದ್ದರೆ ಮೂರನೇ ನಾಯಿ ಎಲ್ಲಿ ಅಡಗಿದೆ? ನಿಮಗಿರುವ ಸಮಯ 7 ಸೆಕೆಂಡುಗಳು. ಅಷ್ಟರಲ್ಲಿ ನೀವು ಮೂರನೇ ನಾಯಿಯನ್ನು ಕಂಡುಹಿಡಿಯಬೇಕು. ನೆಟ್ಟಿಗರು ಈ ಸವಾಲು ಬಿಡಿಸುವಲ್ಲಿ ಸೋತಿದ್ದಾರೆ. ನೀವು?

Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಎಲ್ಲಿದೆ ಆ ಮೂರನೇ ನಾಯಿ ಇಲ್ಲಿ?

Updated on: Oct 04, 2023 | 12:12 PM

Brain Teaser: ಭ್ರಮಾತ್ಮಕ ಚಿತ್ರಗಳನ್ನು ನಿಮ್ಮ ಮೆದುಳು ಮತ್ತು ಕಣ್ಣು ಮೋಸಹೋಗುವಂತೆ ಚಿತ್ರಿಸಲಾಗಿರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಚಿತ್ರದಲ್ಲಿ ಎರಡು ನಾಯಿಗಳು ಮಾತ್ರ ಕಾಣುತ್ತಿವೆ. ಆದರೆ ಇಲ್ಲಿ ಮೂರು ನಾಯಿಗಳು ಇವೆ. ನಿಮ್ಮ ಕಣ್ಣುಗಳು ಚುರುಕಾಗಿದ್ದರೆ 7 ಸೆಕೆಂಡುಗಳಲ್ಲಿ ಮೂರನೇ ನಾಯಿಯೂ ಕಾಣುತ್ತದೆ. ನೆಟ್ಟಿಗರು ಕೆಲವರು ಈ ಫೋಟೋ ನೋಡಿ, ಮೂರನೇ ನಾಯಿ ಕಂಡಿತು ಎಂದಿದ್ಧಾರೆ. ಇನ್ನೂ ಕೆಲವರು ನನಗೆ ಕಾಣುತ್ತಿಲ್ಲ ಎನ್ನುತ್ತಿದ್ದಾರೆ. ನೋಡಿ ನೀವೂ ಒಮ್ಮೆ ಪ್ರಯತ್ನಿಸಿ. ಸಂಶೋಧನೆಗಳ ಪ್ರಕಾರ ಭ್ರಮಾತ್ಮಕ ಚಿತ್ರಗಳನ್ನು (Optical Illusion) ನೋಡುವುದರಿಂದ ಮತ್ತು ಅವು ಒಡ್ಡಿರುವ ಸವಾಲನ್ನು ಪರಿಹರಿಸುವುದರಿಂದ ಏಕಾಗ್ರತೆಯನ್ನು ಸಾಧಿಸಬಹುದಾಗಿದೆ. ಇಷ್ಟೇ ಅಲ್ಲ, ಸ್ಮರಣ ಶಕ್ತಿಯನ್ನೂ ಇಂಥ ಚಿತ್ರಗಳು ಹೆಚ್ಚಿಸುತ್ತವೆ.

ಇದನ್ನೂ ಓದಿ : Viral Video: ಅಪ್ಸರಾ ಆಲಿ: ‘ನಟರಂಗ’ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ

ನೀವು ಈಗಾಗಲೇ ಇಂಥ ಚಿತ್ರಗಳನ್ನು ನೋಡಿ ಮತ್ತು ಅವು ಒಡ್ಡಿರುವ ಸವಾಲುಗಳನ್ನು ಪರಿಹರಿಸಿ ನಿಮ್ಮ ಮೆದುಳು ಮತ್ತು ಕಣ್ಣುಗಳನ್ನು ಚುರು ಮಾಡಿಕೊಂಡಿರುತ್ತೀರಿ. ಹಾಗೆಯೇ ಈಗಿರುವ ಈ ಸವಾಲನ್ನು ಪರಿಹರಿಸುತ್ತೀರಿ ಎಂಬ ಭರವಸೆ ನಮ್ಮದು. ಎಲ್ಲೆಡೆ ಹಿಮದರಾಶಿ. ಈ ನಾಯಿಗಳು ಇಲ್ಲಿ ತಿರುವಾಡುತ್ತಿವೆ. ಇನ್ನೊಂದು ನಾಯಿ ಎಲ್ಲಿದೆ ಹಾಗಿದ್ದರೆ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೂರನೇ ನಾಯಿಯನ್ನು ಕಂಡುಹಿಡಿಯಿರಿ

ಎಲ್ಲಿದೆ ಆ ಮೂರನೇ ನಾಯಿ ಇಲ್ಲಿ?

7 ಸೆಕೆಂಡುಗಳಲ್ಲಿ ಮೂರನೇ ನಾಯಿಯನ್ನು ಕಂಡುಹಿಡಿಯುವುದು ನೆಟ್ಟಿಗರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗ ನಿಮ್ಮ ಸಮಯ ಶುರು. ನಿಮ್ಮ ಅಸಾಧಾರಣ ಬುದ್ಧಿ ಸಾಮರ್ಥ್ಯ ಮತ್ತು ತೀಕ್ಷ್ಣ ಕಣ್ಣುಗಳ ಸಹಾಯದಿಂದ ಖಂಡಿತ ನೀವು 7 ಸೆಕೆಂಡುಗಳಲ್ಲಿ ಆ ಮೂರನೇ ನಾಯಿಯನ್ನು ಕಂಡುಹಿಡಿಯುತ್ತೀರಿ. ಸಿಲಿಲ್ಲವೇ? ಬೇಸರಿಸಬೇಡಿ, ಈ ಕೆಳಗಿನ ಚಿತ್ರದಲ್ಲಿ ಆ ಮೂರನೇ ನಾಯಿಯನ್ನು ಕಂಡುಕೊಳ್ಳಿ.

ಇಲ್ಲಿದೆ ಆ ಮೂರನೇ ನಾಯಿ!

ಇಲ್ಲಿದೆ ಆ ಮೂರನೇ ನಾಯಿ

ಕಂಡಿತಲ್ಲವೇ ಮೂರನೇ ನಾಯಿ? ಮೊದಲಿಗೆ ನೋಡಿದಾಗ ಒಬ್ಬ ವ್ಯಕ್ತಿಯು ಕಪ್ಪು ಜಾಕೆಟ್ ಧರಿಸಿ ನಿಂತಿರುವಂತೆ ಕಾಣುತ್ತದೆ. ಒಪ್ಪುತ್ತೀರೇ? ಮೂರನೇ ನಾಯಿ ವ್ಯಕ್ತಿಯಂತೆ ಕಾಣುತ್ತಿದ್ದರೂ ಅದೇ ವಾಸ್ತವದಲ್ಲಿ ಮೂರನೇ ನಾಯಿ.

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:12 pm, Wed, 4 October 23