Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

|

Updated on: Oct 28, 2023 | 11:14 AM

Bank: 2021ರಲ್ಲಿ ಚೀನಾದ ಬ್ಯಾಂಕ್​ ಒಂದರಲ್ಲಿ ನಡೆದ ಘಟನೆಯ ಕುರಿತ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬ್ಯಾಂಕ್​ನ ಗ್ರಾಹಕ ಸೇವೆ ಅತೀ ಕೆಟ್ಟದ್ದಾಗಿತ್ತು ಎಂದು ಮಿಲೆನಿಯರ್ ಗ್ರಾಹಕನೊಬ್ಬ ದೂರಿದ್ದಾನೆ. ಕೊವಿಡ್ ನಿಯಮಗಳನ್ನು ಅನುಸರಿಸದೇ ಬ್ಯಾಂಕ್​ಗೆ ಈ ವ್ಯಕ್ತಿ ಪ್ರವೇಶಿಸಿದ್ದ ಎಂದು ಬ್ಯಾಂಕ್​ ತಿಳಿಸಿದೆ. ಈ ತಿಕ್ಕಾಟದಮಧ್ಯೆ ಈ ವ್ಯಕ್ತಿ ಬ್ಯಾಂಕ್​ ಸಿಬ್ಬಂದಿಗೆ ಕೊಟ್ಟ ಹೆಚ್ಚುವರಿ ಕೆಲಸ ಇದು...

Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್
ರೂ. 6 ಕೋಟಿಯನ್ನು ಕೈಯ್ಯಿಂದ ಎಣಿಸುತ್ತಿರುವ ಬ್ಯಾಂಕ್​ ಸಿಬ್ಬಂದಿ
Follow us on

China: ಚೀನಾದ ಮಿಲೆನಿಯರ್​ (Millionaire) ಒಬ್ಬಾತ ಬ್ಯಾಂಕ್​ನಿಂದ ರೂ. 6 ಕೋಟಿ ಹಿಂಪಡೆದು ಅದನ್ನು ಬ್ಯಾಂಕ್​ ಸಿಬ್ಬಂದಿಗೆ ನೀಡಿ ಕೈಯಿಂದ ಎಣಿಸುವಂತೆ ಕೇಳಿದ ಘಟನೆ ಇದೀಗ ವೈರಲ್ ಆಗುತ್ತಿದೆ. ಈ ಪ್ರಸಂಗದ ಹಿನ್ನೆಲೆಯನ್ನು ಬ್ಯಾಂಕ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದೆ.​ ಮಿಲೆನಿಯರ್ ವ್ಯಕ್ತಿ 2021ರಲ್ಲಿ ಕೊವಿಡ್-19 ನಿಯಮಗಳನ್ನು ಅನುಸರಿಸದ ಕಾರಣ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ಏರ್ಪಟ್ಟಿತ್ತು. ನಂತರ ಆತ ಬ್ಯಾಂಕ್​ ಸಿಬ್ಬಂದಿಗೆ ರೂ. 6.5 ಕೋಟಿ ಹಣವನ್ನು ಕೈಯ್ಯಾರೆ ಎಣಿಸಬೇಕು ಎಂದು ಹೇಳಿದ್ದನು.  ಬ್ಯಾಂಕ್​ ಸಿಬ್ಬಂದಿ ಹಣವನ್ನು ಎಣಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚೀನಾದ ಮಾಧ್ಯಮಗಳಲ್ಲಿ ಈ ಪೋಸ್ಟ್​ ಪ್ರಕಟವಾಗಿದ್ದು ವೈಬೋ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಇದು ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ : Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ

ಸನ್​ವೇರ್​ ಎಂಬ ಹೆಸರಿನಲ್ಲಿ ಖಾತೆ ನಿರ್ವಹಿಸುತ್ತಿರುವ ಈ ಮಿಲೆನಿಯರ್​ ವ್ಯಕ್ತಿ 2021ರಲ್ಲಿ ಬ್ಯಾಂಕ್​ ಆಫ್​ ಶಾಂಘೈನ ಶಾಖೆಯಿಂದ ರೂ. 6.5 ಕೋಟಿ ಹಿಂಪಡೆದಿದ್ದ. ಕೊವಿಡ್ ಸಮಯದಲ್ಲಿ ಈ ವ್ಯಕ್ತಿ ಮಾಸ್ಕ್ ಧರಿಸದ ಕಾರಣ ಬ್ಯಾಂಕಿನ ಭದ್ರತಾ ಸಿಬ್ಬಂದಿ ಇವನೊಂದಿಗೆ ವಾಗ್ವಾದಕ್ಕಿಳಿಯಿತು. ಆ ನಂತರ ಮಿಲೆನಿಯರ್ ಬ್ಯಾಂಕಿನಿಂದ ಹಿಂಪಡೆದ ಹಣವನ್ನು ಕೈಯ್ಯಾರೆ ಎಣಿಸುವಂತೆ ಬ್ಯಾಂಕ್​ ಸಿಬ್ಬಂದಿಗೆ ಹೇಳಿದ. ಭದ್ರತಾ ಸಿಬ್ಬಂದಿಯ ವರ್ತನೆ ಭಯಾನಕವಾಗಿತ್ತು ಮತ್ತು ಅದು ಕೆಟ್ಟ ಗ್ರಾಹಕ ಸೇವೆಯಾಗಿತ್ತು ಎಂದು ವೈಬೋ ಸಾಮಾಜಿಕ ಜಾಲತಾಣದಲ್ಲಿ ಮಿಲೆನಿಯರ್​ ಪೋಸ್ಟ್ ಮಾಡಿದ್ದಾನೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ಸೂಪರ್​ ಮಾರ್ಕೆಟ್​ನಿಂದ ತಂದ ಪಾಲಕ್​ ಸೊಪ್ಪಿನಲ್ಲಿ ಕಪ್ಪೆ

‘ರೂ. 6.5 ಕೋಟಿಯನ್ನು ಕೈಯಿಂದ ಎಣಿಸಲು ಬ್ಯಾಂಕ್​ ಸಿಬ್ಬಂದಿ ಸುಮಾರು 2 ಗಂಟೆ ಸಮಯವನ್ನು ತೆಗೆದುಕೊಂಡಿದೆ. ಒಟ್ಟಾರೆ ಇದು ಕೆಟ್ಟ ಗ್ರಾಹಕ ಸೇವೆ ಎಂದು ಪರಿಗಣಿಸಿ ಖಾತೆಯಲ್ಲಿ ಉಳಿದ ಮಿಲಿಯನ್​ಗಟ್ಟಲೆ ಹಣವನ್ನು ಇತರೇ ಬ್ಯಾಂಕ್​​ಗಳಲ್ಲಿ ಠೇವಣಿ ಮಾಡಲು​ ತಯಾರಿ ನಡೆಸಿದ್ದೇನೆ ಎಂದು ಮಿಲೆನಿಯರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಬ್ಯಾಂಕ್​ ಸಿಬ್ಬಂದಿ ನೋಟಿನ ದೊಡ್ಡದೊಡ್ಡ ಕಂತೆಗಳನ್ನು ಎಣಿಸುತ್ತಿರುವುದು ಮತ್ತು ವ್ಯಕ್ತಿಯೊಬ್ಬ ಕರೆನ್ಸಿವುಳ್ಳ ಸೂಟ್​ಕೇಸ್​ನೊಂದಿಗೆ ಹೊರನಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ : Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!

ಈ ಮಧ್ಯೆ,  ಕೊವಿಡ್ 19 ನಿಯಮವನ್ನು ಮಿಲೆನಿಯರ್ ವ್ಯಕ್ತಿ ಉಲ್ಲಂಘಿಸಿದ್ದರಿಂದ ವಾಗ್ವಾದ ಉಂಟಾಗಿದೆ. ಆತ ಮಾಸ್ಕ್​ ಧರಿಸದೇ ಬ್ಯಾಂಕ್​ ಪ್ರವೇಶಿಸಿದ್ದ ಎಂದು ಬ್ಯಾಂಕ್​ ತಿಳಿಸಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 11:11 am, Sat, 28 October 23