Marriage: ‘ನನ್ನ ಮದುವೆ ಡಿಸೆಂಬರ್ನಲ್ಲಿದೆ. ನನ್ನ ಭಾವೀಪತಿ ನನಗೆ ಮತ್ತು ತನ್ನ ಅಮ್ಮನಿಗೆ (Mother) ಒಂದೇ ವಿನ್ಯಾಸದ ಆದರೆ ಬೇರೆ ಬೇರೆ ಬಣ್ಣದ ಸೀರೆಯನ್ನು ಖರೀದಿಸಬೇಕೆಂದು ದುಂಬಾಲು ಬಿದ್ದಿದ್ದಾನೆ. ಅವನ ಈ ವಿಚಿತ್ರ ಆಸೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ. ನನಗಿದು ಉಸಿರುಗಟ್ಟಿಸುತ್ತಿದೆ. ನನ್ನನ್ನು ಬಲವಂತ ಮಾಡಬೇಡ ನನಗಿದು ಇಷ್ಟವಿಲ್ಲ ಎಂದು ಹೇಳುತ್ತಲೇ ಇದ್ದೇನೆ. ಆದರೂ ಅವನು ಒತ್ತಾಯಿಸುತ್ತಿದ್ದಾನೆ ಅಷ್ಟೇ ಅಲ್ಲ, ನೀನು ಇದಕ್ಕೆ ಒಪ್ಪದಿದ್ದರೆ ಮದುವೆಯನ್ನೇ ನಿಲ್ಲಿಸುತ್ತೇನೆ ಎಂಬ ಬೆದರಿಕೆ ಹಾಕುತ್ತಿದ್ದಾನೆ. ಇದು ಸಂಸ್ಕೃತಿಯೇ?’ ಎಂದು ಕೇರಳದ ಯುವತಿಯೊಬ್ಬರು ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ನೆಟ್ಟಿಗರು ಗಂಡಿನ ಈ ವರ್ತನೆಯ ಬಗ್ಗೆ ತೋಚಿದ ಸಲಹೆಗಳನ್ನು ನೀಡಿದ್ದಾರೆ.
ಇದನ್ನು ಓದಿ : Viral: ಮುಂಬೈ; ಕಳೆದುಕೊಂಡ ‘ಶಾಂತಿ’ ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ
ಈ ಪೋಸ್ಟ್ ಅನ್ನು ಮೂರು ತಾಸುಗಳ ಹಿಂದೆ ಹಂಚಿಕೊಳ್ಳಲಾಗಿದೆ. ಸುಮಾರು 60 ಜನರು ಲೈಕ್ ಮಾಡಿದ್ದು, 100ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಖಂಡಿತ ಅವನೊಂದಿಗೆ ಮದುವೆಯಾಗಬೇಡಿ, ಈಗಲೇ ಅವನಿಗೆ ಮಾನಸಿಕ ಸಮಸ್ಯೆ ಇದ್ದ ಹಾಗಿದೆ ಎಂದಿದ್ದಾರೆ ಅನೇಕರು.
ಅವನು ಇಷ್ಟಪಡುವ ಸೀರೆಯನ್ನು ನೀವು ಉಟ್ಟುಕೊಳ್ಳದಿದ್ದರೆ ಅವನು ಮದುವೆಯನ್ನೇ ರದ್ದುಗೊಳಿಸಲು ಸಿದ್ಧನಿದ್ದಾನೆ ಎಂದಮೇಲೆ ನೀವೇಕೆ ಕಾಯುತ್ತೀರಿ, ಅವನಿಗಿಂತ ಮೊದಲೇ ಮದುವೆಯನ್ನು ರದ್ದುಗೊಳಿಸಿ ಎಂದಿದ್ದಾರೆ ಒಬ್ಬರು. ಒಂದು ವರ್ಷದ ನಂತರ ನೀವು ಇದೇ ರೆಡ್ಡಿಟ್‌ನಲ್ಲಿ ನಾರ್ಸಿಸಿಸಮ್‌ನ ಲಕ್ಷಣಗಳ ಕುರಿತಾಗಿ ಪೋಸ್ಟ್ ಮಾಡುತ್ತೀರಿ ಎಂದಿದ್ದಾರೆ ಇನ್ನೊಬ್ಬರು. ನಿರಾಕರಣೆ ಕಷ್ಟ, ಆದರೆ ಒಮ್ಮೆ ಈ ಕಷ್ಟವನ್ನು ತೆಗೆದುಕೊಂಡುಬಿಡಿ, ಜೀವನಪೂರ್ತಿ ನರಳಬೇಡ ಎನ್ನುವ ಮುನ್ಸೂಚನೆ ನಿಮಗೆ ಸಿಕ್ಕಿದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್ ಎಲ್ಲಿ ಎಂದ ನೆಟ್ಟಿಗರು
ಇದು ಖಂಡಿತ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ, ಇದು ಈಡಿಪಸ್, ಮನೋರೋಗ. ರೆಡ್ ಫ್ಲ್ಯಾಗ್! ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದಿದ್ದಾರೆ ಒಬ್ಬರು. ಅವನು ಈ ಬಗ್ಗೆ ಇಷ್ಟೊಂದೇಕೆ ತಲೆ ಕೆಡಿಸಿಕೊಂಡಿದ್ದಾನೆ ಕೇಳಿ, ಇದು ಕೇವಲ ಸೀರೆಗೆ ಮಾತ್ರ ಸಂಬಂಧಿಸಿದ್ದೇ ಅಥವಾ.. ಆದರೆ ಖಂಡಿತ ಈ ರೀತಿ ವರ್ತನೆ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ ಇನ್ನೊಬ್ಬರು. ಇವನು ಮುಂದೆಯೂ ನಿಮ್ಮಲ್ಲಿ ತನ್ನ ತಾಯಿಯನ್ನೇ ಹುಡುಕುತ್ತ ಹೊರಡುತ್ತಾನೆ, ಸಿಗ್ಮಂಡ್ ಫ್ರಾಯ್ಡ್ ಹೇಳಿದ್ದು ಸರಿ ಇದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ವೆಲ್ಕಮ್ ಟು ಮರ್ಲಿ ಹೇರ್ ಸಲೂನ್! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?
ನಿಮ್ಮ ಆದ್ಯತೆ, ಭವಿಷ್ಯದ ಯೋಜನೆಗಳ ಬಗ್ಗೆ ಅವನೊಂದಿಗೆ ಮಾತನಾಡಿ, ನೀವು ಅವನ ಮೊದಲ ಆದ್ಯತೆಯಾಗಿರಬೇಕು ಮತ್ತು ಅವನ ಹೆತ್ತವರಿಗೆ ಈ ವಿಷಯವನ್ನುಅರ್ಥ ಮಾಡಿಸಬೇಕೆಂದು ಹೇಳಿನೋಡಿ. ಅವನ ಉತ್ತರ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಿ ಎಂದಿದ್ದಾರೆ ಇನ್ನೂ ಕೆಲವರು. ಒಟ್ಟಾರೆಯಾಗಿ ಇವನಿಂದ ಬಿಡಿಸಿಕೊಂಡು ಓಡಿ! ಎಂದೇ ಹೇಳಿದ್ದಾರೆ ಎಲ್ಲರೂ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:47 pm, Fri, 3 November 23