Viral : ತಾಯ್ತನ ಮತ್ತು ಕಚೇರಿ ನಿರ್ವಹಣೆ ಹೆಣ್ಣುಮಕ್ಕಳ ಬದುಕಿನಲ್ಲಿ ಅತ್ಯಂತ ದೊಡ್ಡ ತಿರುವು ಮತ್ತು ಸವಾಲು. ಈ ಸಂದರ್ಭದಲ್ಲಿ ಈ ಎರಡನ್ನೂ ನಿಭಾಯಿಸುವುದು ಸಣ್ಣ ಮಾತಲ್ಲ. ಅನೇಕರು ಈ ಸಂದರ್ಭದಲ್ಲಿ ಕೆಲಸವನ್ನೇ ಬಿಡುತ್ತಾರೆ. ಇನ್ನೂ ಕೆಲವರು ಎರಡನ್ನೂ ನಿರ್ವಹಿಸುತ್ತಾರೆ. ಮತ್ತೂ ಕೆಲವರು ಬ್ರೇಕ್ ತೆಗೆದುಕೊಂಡು ಮತ್ತೆ ವಾಪಸ್ ಕೆಲಸಕ್ಕೆ ಸೇರುತ್ತಾರೆ. ಆದರೆ ಸ್ವಂತ ಕಂಪೆನಿ ಹೊಂದಿದವರು ಈ ಹಂತವನ್ನು ಹೇಗೆ ನಿಭಾಯಿಸುತ್ತಾರೆ? ಇದೀಗ ವೈರಲ್ ಆಗಿರುವ ಎಡೆಲ್ವೀಸ್ ಮ್ಯೂಚುವಲ್ ಫಂಡ್ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ (Radhika Guptha) ಅವರ ಈ ಪೋಸ್ಟ್ ನೋಡಿ.
On a day when both parents have to work, and there is no help, guess who comes to work?
ಇದನ್ನೂ ಓದಿOften asked how are you going to make a mom and CEOs life work. Well, a little planning, a lot of patience and a problem solving attitude make things work. And a baby’s laugh does the rest. pic.twitter.com/u2iqE5pKqU
— Radhika Gupta (@iRadhikaGupta) January 6, 2023
ಚಾಪೆಯ ಮೇಲೆ ಮಲಗಿದ ತಮ್ಮ ಮಗುವಿನ ಫೋಟೋ ಟ್ವೀಟ್ ಮಾಡಿದ ರಾಧಿಕಾ, ತಾಯ್ತನ ಮತ್ತು ಕಚೇರಿ ಕೆಲಸವನ್ನು ಒಟ್ಟಿಗೆ ತಾವು ಸಂತುಲನಗೊಳಿಸಿಕೊಂಡು ಹೋಗುವ ಬಗ್ಗೆ ಹೇಳಿಕೊಂಡಿದ್ದಾರೆ. ಪೋಷಕರಿಬ್ಬರೂ ಕೆಲಸ ಮಾಡಲೇಬೇಕಾದಾಗ ಮತ್ತು ಆ ದಿನ ಸಹಾಯಕ್ಕೆ ಯಾರೂ ಇಲ್ಲದೇ ಇದ್ಧಾಗ ನೋಡಿ ಯಾರು ಬಂದಿದ್ದಾರೆ ಸಹಾಯಕ್ಕೆ! ಹೀಗಿದ್ಧಾಗ ಮೊದಲು ಆ ದಿನವನ್ನು ಚೆನ್ನಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ಜೊತೆಗೆ ಸಾಕಷ್ಟು ತಾಳ್ಮೆ, ಸಮಸ್ಯೆಯನ್ನು ಪರಿಹರಿಸುವ ಆ್ಯಟಿಟ್ಯೂಡ್ ಬೇಕಾಗುತ್ತದೆ. ಉಳಿದೆಲ್ಲವನ್ನೂ ಮಗುವಿನ ನಗುವೇ ನಿರ್ವಹಿಸುತ್ತದೆ.
ಇದನ್ನೂ ಓದಿ : ‘ಕಲೆ, ಪ್ರತಿಭೆ, ಆತ್ಮವಿಶ್ವಾಸ ಮಣ್ಣಾಂಗಟ್ಟಿ, ಭವ್ಯ ಭಾರತದ ಬಡವರ ನಿತ್ಯದ ಸರ್ಕಸ್ ಇದು’
3 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್ ನೋಡಿದ್ದಾರೆ. 3,000 ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ಧಾರೆ. 68 ಜನ ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಷಯಗಳು ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುವ ದಂಪತಿಗೆ ಮಾತ್ರ ಸುಲಭ ಮೇಡಮ್. ಎಲ್ಲ ಹಂತಗಳನ್ನೂ ಪರಸ್ಪರ ಸ್ವೀಕರಿಸಬೇಕಾಗುತ್ತದೆ. ಆದರೆ ನಿತ್ಯವೂ ಕಚೇರಿಗೆ ಹೋಗಿ ಕೆಲಸ ಮಾಡುವ ದಂಪತಿಗಳಲ್ಲಿ ಇದು ಅಸಾಧ್ಯ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ನಶೆ ಹಿಡಿಸುತ್ತದೆ ‘ಪಠಾಣ್’ದ ಬೇಶರಮ್ ರಂಗ್ ಹಾಡಿನ ಈ ಗಝಲ್ ಶೈಲಿ
ಇದು ಅದ್ಭುತ. ಆದರೆ ಎಲ್ಲ ಮಹಿಳೆಯರಿಗೂ ಕಚೇರಿಗಳಿಗೆ ಮಗುವನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ. ಹಾಗೆಯೇ ಎಷ್ಟೋ ಕಚೇರಿಗಳಲ್ಲಿ ಬೇಬಿ ಸಿಟಿಂಗ್ಗಳಿಲ್ಲ. ಹಾಗಾಗಿ ಸಾಮಾನ್ಯರಿಗೆ ಇದು ದೊಡ್ಡ ಸವಾಲೇ ಎಂದಿದ್ಧಾರೆ ಮತ್ತೊಬ್ಬರು.
ಆದರೆ ಜನಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ದಂಪತಿಗಳು ಪರಂಪರಾಗತ ನಂಬಿಕೆಗಳನ್ನು ಹಿಂದೂಡಿ, ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ, ಪರಸ್ಪರ ಅರ್ಥ ಮಾಡಿಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಮತ್ತು ತಾತ್ಕಾಲಿಕವಾಗಿಯಾದರೂ ಇತರರ ಸಹಾಯ ತೆಗೆದುಕೊಂಡು ನಿಭಾಯಿಸುವಲ್ಲಿ ಈ ದ್ವಂದ್ವಕ್ಕೆ ಪರಿಹಾರವಿದೆ. ಹಾಗೆಯೇ ಕಂಪೆನಿಗಳು ಶಿಶುವಿಹಾರಗಳನ್ನು ಸ್ಥಾಪಿಸಿದಲ್ಲಿ ಇನ್ನೂ ಅನುಕೂಲ!
ಈ ಪೋಸ್ಟ್ ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:48 pm, Mon, 9 January 23