Viral Video : ಹಾಂ, ಇದು ನನ್ನ ತಟ್ಟೆ! ಹೀಗೆ ಹೇಳುವುದನ್ನು ನಮ್ಮ ನಡುವಿನ ಅನೇಕರು ಹೇಳುವುದನ್ನು ಕೇಳಿರುತ್ತೀರಿ. ಚಿಕ್ಕಮಕ್ಕಳು ಹೇಳಿದರೆ, ಆಯ್ತು ನಿನ್ನದೇ ತಗೋ ಎನ್ನುತ್ತೀರಿ. ದೊಡ್ಡವರು ಹೇಳಿದರೆ, ಜೋರಾಗಿ ನಕ್ಕುಬಿಡುತ್ತೀರಿ. ಆದರೆ ಸಣ್ಣಪುಟ್ಟ ವಸ್ತುವಿನ ಕುರಿತು ಯಾರಾದರೂ ಅದು ನನ್ನದು, ನನಗೇ ಬೇಕು ಎಂದು ಹೇಳಿದಾಗ, ಅದನ್ನು ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಗ್ರಹಿಸಬೇಕು. ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ.
We’re still using a similar one that we bought from Chennai at Rs.35/- in the year 2006! Glad that you’ve preserved your mother’s plate, it is priceless for the memories. Thank you. pic.twitter.com/zOxCdCB1eF
ಇದನ್ನೂ ಓದಿ— Sandeep (@SandeepSarma268) January 20, 2023
ನಾವೆಲ್ಲರೂ ಹಾಗೆಯೇ ಒಂದು ಸಣ್ಣ ಚಮಚ, ಡಬ್ಬಿಯಿಂದ ಹಿಡಿದು ಅನೇಕ ವಸ್ತುಗಳತನಕವೂ ಒಂದಿಲ್ಲಾ ಒಂದು ನೆನಪನ್ನು ಅಂಟಿಸಿಕೊಂಡೇ ಇರುತ್ತೇವೆ. ವಿಕ್ರಮ್ ಎನ್ನುವ ಟ್ವಿಟರ್ ಖಾತೆದಾರರು ತಮ್ಮ ‘ಅಮ್ಮನ ತಟ್ಟೆ’ಯ ಹಿಂದೆ ಇರುವ ಕಥೆಯನ್ನು ಹಂಚಿಕೊಂಡಿದ್ದಾರೆ.
‘ಇದು ನನ್ನ ಅಮ್ಮನ ತಟ್ಟೆ. 20 ವರ್ಷಗಳಿಂದ ಅವರು ಇದರಲ್ಲಿ ಉಣ್ಣುತ್ತಿದ್ದರು. ನನಗೆ ಮತ್ತು ನನ್ನ ಪುಟ್ಟ ಸೊಸೆಗೆ ಮಾತ್ರ ಇದರಲ್ಲಿ ಉಣ್ಣಲು ಅನುಮತಿ ನೀಡುತ್ತಿದ್ದರು. ಆದರೆ ಈ ತಟ್ಟೆಯ ಹಿಂದೆ ಒಂದು ಕಥೆಯೇ ಇದೆ ಎನ್ನುವುದು ಅವರ ನಿಧನದ ನಂತರವಷ್ಟೇ ಗೊತ್ತಾಯಿತು; ಇದು, 1997ರಲ್ಲಿ ಏಳನೇ ತರಗತಿಯಲ್ಲಿದ್ದಾಗ ಯಾವುದೋ ಸ್ಪರ್ಧೆಯಲ್ಲಿ ನನಗೆ ಬಂದ ಬಹುಮಾನ ಎಂದು ನನ್ನ ಸಹೋದರಿ ತಿಳಿಸಿದ್ದಾಳೆ. ಈ 24 ವರ್ಷಗಳ ತನಕವೂ ನನ್ನ ಅಮ್ಮ ಈ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದರು. ಎಂಥ ಮಧುರ ನೆನಪಿದು.’
ಇದನ್ನೂ ಓದಿ : ಭೂಲ್ ಭುಲೈಯ್ಯಾದ ಮಂಜುಲಿಕಾ ಮೆಟ್ರೋ ರೈಲಿನಲ್ಲಿ; ಪ್ರಯಾಣಿಕರಿಗೆ ಕಿರಿಕಿರಿ
ನೆಟ್ಟಿಗರು ಈ ಪೋಸ್ಟ್ ಓದಿ ಭಾವುಕರಾಗುತ್ತಿದ್ದಾರೆ. ಅನೇಕರು ಕಣ್ಣೀರು ಹಾಕಿದ್ದಾರೆ. ತಮ್ಮ ತಮ್ಮ ಪೋಷಕರ ನೆನಪಿನಲ್ಲಿ ಇಟ್ಟುಕೊಂಡ ಅನೇಕ ಸಾಮಾನುಗಳ ಬಗ್ಗೆ ಚರ್ಚಿಸಿದ್ದಾರೆ. ಇದು ಬಹಳ ಹೃದಯಸ್ಪರ್ಶಿಯಾದ ಪೋಸ್ಟ್ ಎಂದಿದ್ದಾರೆ ಅನೇಕರು. ಈ ತಟ್ಟೆಯೊಂದಿಗೆ ನಿಮ್ಮ ಅಮ್ಮ ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ ಎಂದಿದ್ದಾರೆ ಒಬ್ಬರು. ನಾನು ನನ್ನ ಅಮ್ಮನನ್ನು ಕಳೆದುಕೊಂಡೆ. ನಿಮ್ಮ ಪೋಸ್ಟ್ ಓದಿ ಅಳು ಬಂದಿತು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ತೆಂಗಿನ ಚಹಾ? ಪಾತ್ರೆ ಇಲ್ಲವಾದರೆ ಕಳಿಸುತ್ತಿದ್ದೆವಲ್ಲ ಎನ್ನುತ್ತಿರುವ ನೆಟ್ಟಿಗರು
ನನ್ನ ಅಪ್ಪ ತೀರಿದಾಗ ಅವರಿಗೆ ಸಂಬಂಧಿಸಿದ ಸಾಮಾನುಗಳನ್ನು ಸಾಗಿಸುವಾಗ ಅವರ ಹಳೆಯ ಡೈರಿ ಸಿಕ್ಕಿತು. ಜರ್ಮನಿಯಲ್ಲಿ ಅವರು 20 ಯೂರೋಗಳನ್ನು ಕೊಟ್ಟು ಖರೀದಿಸಿದ ಡೈರಿಯಾಗಿತ್ತು. ಅದನ್ನು ಓದುತ್ತಾ ಹೋದಂತೆ ಎಂಥ ಅಮೂಲ್ಯವಾದದ್ದು ಇದು ಎನ್ನುವುದು ಅರಿವಿಗೆ ಬಂದಿತು ಎಂದು ಮಗದೊಬ್ಬರು ಹೇಳಿದ್ದಾರೆ. ಶ್ರದ್ಧಾ ಮತ್ತು ಸ್ಟೇನ್ಲೆಸ್ ಸ್ಟೀಲ್ ಎಂಬ ಕನ್ನಡ ನಾಟಕವನ್ನು ಒಬ್ಬರು ನೆನಪಿಸಿಕೊಂಡಿದ್ದಾರೆ. ನಾನು ಕೂಡ ಐದಾರು ವರ್ಷಗಳ ಕಾಲ, ಬಹುಮಾನ ರೂಪದಲ್ಲಿ ಸಿಕ್ಕ ಸ್ಟೀಲ್ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ಅಪ್ಪ ಅಮ್ಮ ಇಲ್ಲದಿದ್ರೆ ಸತ್ತೇ ಹೋಗ್ತಿದ್ವಿ; ಚಿರತೆಯಿಂದ ಕಾಪಾಡಿದ ಮುಳ್ಳುಹಂದಿಗಳ ವಿಡಿಯೋ ವೈರಲ್
ನೆನಪುಗಳು ನಮ್ಮ ಬದುಕಿಗೆ ಆಕಾರವನ್ನು ಕೊಡುತ್ತ ನಮ್ಮ ವ್ಯಕ್ತಿತ್ವವನ್ನು ಬಂಗಾರದಂತೆ ಹೊಳೆಯಿಸುತ್ತಾ ಹೋಗುತ್ತವೆ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ಫೇವರಿಟ್ ಪ್ಲೇಟ್ ಮತ್ತು ಅವುಗಳ ಹಿಂದಿನ ನೆನಪು, ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿದ ನೀವು ನಿಮ್ಮ ಇಷ್ಟದ ತಟ್ಟೆಗಳನ್ನು ಮತ್ತವುಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದೀರಾ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ