
Viral : ನಮ್ಮ ದೇಶದಲ್ಲಿ ಅಂತೂ ಚಳಿಗಾಲ ಅಂಚಿಗೆ ಬರ್ತಾ ಇದೆ. ಆದರೂ ಕೂಡ ಹೊರಗೆ ಬಿಸಿಲು ಒಳಗಿನ್ನೂ ಚಳಿಯೇ. ಇನ್ನೇನು ಚಳಿಗಾಲ ಮುಗೀತಲ್ಲ ಎಂದುಕೊಂಡು ನೀವು ಮಂಕೀ ಕ್ಯಾಪ್ ತಗೊಳ್ಳೋದನ್ನ ಮುಂದಿನ ವರ್ಷಕ್ಕೆ ದೂಡ್ತಿದ್ರೆ ನಿಮಗೆ ಇಲ್ಲಿ ಅದ್ಭುತವಾದ ಆಫರ್ ಇದೆ. ಡೊಲ್ಚೆ ಆ್ಯಂಡ್ ಗಬಾನಾ (Dolce And Gabbana) ಈಗ ಮಾರುಕಟ್ಟೆಗೆ ಬಿಡುಗಡೆ ಮಾಡಿರೋ ಈ ಕ್ಯಾಪ್ನ ಬೆಲೆ ಬರೀ ರೂ. 40,000! ಆದರೆ ನಿಮಗೇ ಅಂತ ವಿಶೇಷ ರಿಯಾಯಿತಿ ಕೂಡ ಇದೆ. ನೋಡಿ ಸ್ವಲ್ಪ ಮನಸ್ಸು ಮಾಡಿ.
ಇಟಲಿಯ ಫ್ಯಾಷನ್ ಹೌಸ್ ಡೊಲ್ಚೆ ಆ್ಯಂಡ್ ಗಬಾನಾ ಖಾಕೀ ಬಣ್ಣದ ಸ್ಕೀ ಮಾಸ್ಕ್ ಕ್ಯಾಪ್ ಅನ್ನು ಇದೀಗ ಬಿಡುಗಡೆ ಮಾಡಿದೆ. ಇದರ ಸ್ಕ್ರೀನ್ ಶಾಟ್ ಇದೀಗ ವೈರಲ್ ಆಗುತ್ತಿದೆ. ಸ್ವಾತಿ ಮೊಯಿತ್ರಾ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ಮೂಲ ಬೆಲೆ ರೂ. 40,000. ಆದರೆ ರೂ. 31,990 ರಿಯಾಯ್ತಿ ಇದಕ್ಕಿದೆ. ಇದನ್ನು ಜನವರಿ 17ರಂದು ಹಂಚಿಕೊಳ್ಳಲಾಗಿದೆ. ಈತನಕ 3,000ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ನೋಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ಇದು ಮಂಕೀ ಕ್ಯಾಪ್ (Monkey Cap) ನಂತಿದೆ ಎಂದಿದ್ದಾರೆ.
ಇದನ್ನೂ ಓದಿ : ಸ್ಟೀವ್ ಜಾಬ್ಸ್ ಅವರ ಹಳೆಯ ಸ್ಯಾಂಡಲ್ಸ್ ಹರಾಜು
ಇದು ಮಂಕೀ ಕ್ಯಾಪ್ ಅಲ್ಲ ಏಕೆಂದರೆ ಇದರ ನೆತ್ತಿ ಮೇಲೆ ಪಾಂ ಪಾಂ ಇಲ್ಲ ಎಂದಿದ್ಧಾರೆ ಒಬ್ಬರು. ಮಲಯಾಳಂ ತಮಿಳು ಸಿನೆಮಾಗಳಲ್ಲಿ ತೋರಿಸುವ ಊಟಿಯ ಹನಿಮೂನ್ ದೃಶ್ಯಗಳನ್ನು ಇದು ನೆನಪಿಸುವಂತಿದೆ ಎಂದಿದ್ದಾರೆ ಮತ್ತೊಬ್ಬರು. ನನಗೆ ಹೆಣೆಯಲು ಬಂದಿದ್ದರೆ ಐನೂರು ರೂಪಾಯಿಯಲ್ಲಿ ಇಂಥ ಟೋಪಿ ಮಾಡಿಕೊಡುತ್ತಿದ್ದೆ ಎಂದಿದ್ದಾರೆ ಮಗದೊಬ್ಬರು. ಇಷ್ಟೊಂದು ರಿಯಾಯ್ತಿ ಕೊಟ್ಟಿದ್ದರೂ ಪ್ರಯೋಜನವಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು.
ಚಳಿ ಕಮ್ಮಿ ಅನ್ನಸ್ತಿದೆಯಲ್ವಾ, ಬೇಡ ಅಲ್ವಾ ಈ ವರ್ಷ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:11 pm, Thu, 19 January 23