AGI: ‘ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು’

|

Updated on: May 13, 2023 | 10:35 AM

ChatGPT : 'ನಾನಾಗಿರದಿದ್ದರೆ ಇದನ್ನು ಇನ್ನ್ಯಾರೋ ಮಾಡುತ್ತಿದ್ದರು ಎಂದು ಸ್ವತಃ ಸಾಂತ್ವನ ಹೇಳಿಕೊಳ್ಳುತ್ತಿದ್ದೇನೆ. ಈ ತಂತ್ರಜ್ಞಾನವನ್ನು ದುಷ್ಟಶಕ್ತಿಗಳು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ತಡೆಗಟ್ಟುವುದು ಕಷ್ಟ’ ಪ್ರೊ. ಜೆಫ್ರೀ ಹಿಂಟನ್.

AGI: ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು
ಕೃತಕ ಬುದ್ಧಿಮತ್ತೆಯ ಪಿತಾಮಹನೆಂದೇ ಖ್ಯಾತಿವೆತ್ತ ಫ್ರೊ. ಜೆಫ್ರಿ ಹಿಂಟನ್​
Follow us on

Viral News : ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೃತಕ ಬುದ್ಧಿಮತ್ತೆ (Artificial Intelligence/AI) ಕ್ಷೇತ್ರದ ಗಾಡ್ ಫಾದರ್ ಎಂದೇ ಜಗದ್ವಿಖ್ಯಾತರಾದ ಜೆಫ್ರೀ ಹಿಂಟನ್ ( Geoffrey Hinton) AIನ ಇತ್ತೀಚೆಗಿನ ಬೆಳವಣಿಗೆಗಳ ಅಪಾಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶಕ್ಕಾಗಿ ಹಾಗೂ ಜನರಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಳೆದ ತಿಂಗಳು ಗೂಗಲ್ ಕೆಲಸಕ್ಕೆ ರಾಜೀನಾಮೆ ಕೊಟ್ಟಿರುವ ಸುದ್ದಿ ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಜೀವಂತವಾಗಿದೆ.

‘ಈ ಕೆಲಸವನ್ನು ನಾನು ಮಾಡಿರದಿದ್ದರೆ ಬೇರೇ ಯಾರೋ ಮಾಡುತ್ತಿದ್ದರು ಎನ್ನುವ ಮಾಮೂಲಿ ನೆವ ಕಂಡುಕೊಂಡು ನನಗೆ ನಾನೇ ಸಾಂತ್ವನ ಹೇಳಿಕೊಳ್ಳುತ್ತಿದ್ದೇನಷ್ಟೇ. ಇದನ್ನು (ಈ ತಂತ್ರಜ್ಞಾನವನ್ನು) ದುಷ್ಟಶಕ್ತಿಗಳು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ತಡೆಗಟ್ಟುವುದು ಕಷ್ಟಸಾಧ್ಯ’ ಎಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ವಿಟರ್‌ನಲ್ಲಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟೀಕರಣ ಕೊಟ್ಟ ಹಿಂಟನ್ ಕೆಲವು ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಹಿಂಟನ್ ಅವರ ಈ ಹೇಳಿಕೆ ತಂತ್ರಜ್ಞಾನ ಹಾಗೂ ಬಿಸಿನೆಸ್ ಜಗತ್ತಿನಲ್ಲಿ ವ್ಯಾಪಕ ಸಂಚಲನ ಮೂಡಿಸಿದೆ. ಕೆಲವರು ಇದನ್ನು ರಾಬರ್ಟ್ ಒಪ್ಪನ್‌ಹೈಮರ್ ಅವರ ಹೇಳಿಕೆಗೆ ಹೋಲಿಸಿ ಇದೂ ಅಷ್ಟೇ ಮಹತ್ವದ್ದು ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

ಪ್ರೊ. ಜೆಫ್ರೀ ಹಿಂಟನ್‌ ಮತ್ತು ಅವರ ಸಹೋದ್ಯೋಗಿಗಳಾದ ಯಾನ್ ಲಕಾನ್ ಹಾಗೂ ಯೋಶುವಾ ಬೆಂಜಿಯೋ ಆಧುನಿಕ AI ಮತ್ತು Deep Learning ಕ್ಷೇತ್ರಗಳ ಪ್ರವರ್ತಕರು. ಅತ್ಯಂತ ಮಹತ್ವದ ಹಾಗೂ ಮುಂಚೂಣಿಯ ಕೆಲಸ ಮಾಡಿರುವ ಈ ತ್ರಯರಿಗೆ 2018ರಲ್ಲಿ ಗಣಕಶಾಸ್ತ್ರದ ನೊಬೆಲ್ ಎಂಬ ಅನ್ವರ್ಥ ಪಡೆದ ಟ್ಯೂರಿಂಗ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು.

ಇಷ್ಟು ವರ್ಷ AI ಮನುಷ್ಯನ ಬುದ್ಧಿಮತ್ತೆ ಮೀರುವುದು ಬಹಳ ದೂರದ ಮಾತು — ಕನಿಷ್ಠ 30ರಿಂದ 50 ವರ್ಷಗಳಾದರೂ ಬೇಕು ಎಂದು ಭವಿಷ್ಯ ನುಡಿಯುತ್ತಿದ್ದ ಹಿಂಟನ್, ಈಗ ಇದರ ಬಗ್ಗೆ ಏನು ಊಹಿಸುವುದೂ ಮೂರ್ಖತನವಾದೀತು. ಇನ್ನೂ ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆ (Artificial General Intelligence, AGI) ಇದರ ಕನಸು ನನಸಾದೀತು! ಎಂದಿದ್ದಾರೆ.

ಇದನ್ನೂ ಓದಿ : ಅನಾಥ ಮರಿಗಳನ್ನು ದತ್ತು ಸ್ವೀಕರಿಸುತ್ತಿರುವ ಬೆಕ್ಕಮ್ಮನ ವಿಡಿಯೋ ವೈರಲ್

ಹಲವು ತಿಂಗಳುಗಳಿಂದ ಎಲ್ಲೆಡೆ ಸುದ್ದಿ ಮಾಡುತ್ತಿರುವ ಚಾಟ್ ಜಿಪಿಟಿ (ChatGPT) ಎಂಬ ಅದ್ಭುತ ತಂತ್ರಜ್ಞಾನವನ್ನು ನೀವು ಬಳಸಿರುವಿರಾ? AI ಮನುಷ್ಯನ ಅಸ್ತಿತ್ವಕ್ಕೆ ಉಪಯುಕ್ತವೋ ಮಾರಕವೋ? ಮುಂದೆ ಎಂಥ ಸಮಸ್ಯೆಗಳು ಬರಬಹುದು? ನಿಮ್ಮ ಅನಿಸಿಕೆ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:23 am, Sat, 13 May 23