Viral Video : ಯಜಮಾನ್ಯ ಸಂಸ್ಕೃತಿಯ (Patriarchy) ಕೆನ್ನಾಲಗೆಯ ಆಳ ಕಂಡವರುಂಟೆ? ಆದರೂ ಇದನ್ನು ಮುರಿದು ಬದುಕು ಕಟ್ಟಿಕೊಳ್ಳಲು ಅನೇಕ ಹೆಣ್ಣುಮಕ್ಕಳು ಅಲ್ಲಲ್ಲಿ ಪ್ರಯತ್ನಿಸುತ್ತಿದ್ದಾರೆ ಎನ್ನುವುದೇ ಭರವಸೆಯ ವಿಷಯ. ಏಕೆಂದರೆ ಆಧುನಿಕ ಜಗತ್ತಿನಲ್ಲಿ ಬದುಕಬೇಕಿರುವ ತನ್ನ ಮಕ್ಕಳಿಗಾಗಿ ಆಕೆ ವಿವೇಚನೆ ಬೆಳೆಸಿಕೊಳ್ಳಬೇಕು. ಅವರ ಭವಿಷ್ಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಕೆ ಮಹತ್ವದ ಪಾತ್ರ ವಹಿಸಲೇಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ. ಬದಲಾವಣೆ ಎನ್ನುವುದು ವ್ಯಕ್ತಿಗತವಾಗಿ ಸಾಗಿ ನಂತರ ಸಮಾಜವೆಂಬ ಸಮುದ್ರಕ್ಕೆ ಸೇರುವಂಥದ್ದು. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಇಂಥದಕ್ಕೆ ಒಳ್ಳೆಯ ಉದಾಹರಣೆ.
This tea story will melt your heart.❤️❤️ pic.twitter.com/WPbi78fCdo
ಇದನ್ನೂ ಓದಿ— Aatreyee Dhar(Let Sleeping trees lie) (@carbon_stink) February 1, 2023
ಅತ್ರೇಯೀ ಧರ್ ಎಂಬ ಅಸ್ಸಾಮ್ ಮೂಲದ ಪರಿಸರ ಪರ್ತಕರ್ತೆಯೊಬ್ಬರು ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟಗೊಂಡ ಪುಟ್ಟ ಬರಹವನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಬರೆದವರು ಸೋನಮ್ ತಂಡೇನ್ ಎನ್ನುವವರು. ಸೋನಮ್ ಅವರ ಮಾತುಗಳಲ್ಲೇ ಓದಿಕೊಳ್ಳಿ.
ಇದನ್ನೂ ಓದಿ : Self Awareness; ನಾನೆಂಬ ಪರಿಮಳದ ಹಾದಿಯಲಿ: ಅಡುಗೆಯ ಜವಾಬ್ದಾರಿ ಇಲ್ಲದಿರುವುದೇ ನನ್ನ ಅದೃಷ್ಟ
ಹಿಮಾಲಯದ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿರುವ ನನ್ನ ತಾಯಿ ಎಂದೂ ಶಾಲೆಯ ಮೆಟ್ಟಿಲೇರಿಲ್ಲ. ಆದರೆ ನನ್ನನ್ನು ಮಾತ್ರ ಶಿಕ್ಷಣದಿಂದ ವಂಚಿತಗೊಳಿಸಲಿಲ್ಲ. ಸ್ಥಳೀಯ ಕಚೇರಿಗಳಲ್ಲಿ ಕುರ್ಚಿ ಮೇಲೆ ಕುಳಿತ ಗಂಡಸರು, ಹೆಣ್ಣುಮಕ್ಕಳನ್ನು ಚಹಾ ಮಾಡುವಂತೆ ಜೋರಾಗಿ ಕೂಗುವುದನ್ನು ನೋಡಿದಾಗೆಲ್ಲ ಆಕೆಗೆ ವ್ಯವಸ್ಥೆಯ ಮೇಲೆ ತಿರಸ್ಕಾರ ಹುಟ್ಟುತ್ತಿತ್ತು.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ
ನಾನೇನಾದರೂ ಅನಕ್ಷರಸ್ಥಳಾಗಿದ್ದರೆ ಈ ಸೋಮಾರಿ ಗಂಡಸರಿಗೆ ಆ ಹೆಣ್ಣುಮಕ್ಕಳಂತೆ ಚಹಾ ಮಾಡಿಕೊಡುತ್ತಲೇ ಜೀವನ ಸಾಗಿಸಬೇಕಾಗಿತ್ತು. ಸದ್ಯ ನಾನು ಹೈಸ್ಕೂಲು ಮುಗಿಸಿದೆ. ಆರು ಭಾಷೆಗಳನ್ನು ಕಲಿತೆ. ಬರ್ಕಲೀ ವಿಶ್ವವಿದ್ಯಾಲಯದಿಂದ ಪದವಿ ಪಡೆದೆ. ದಶಕಗಳಿಂದ ಗೂಗಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ನಾನಲ್ಲಿ ಏನು ಕೆಲಸ ಮಾಡುತ್ತೇನೆ ಎನ್ನುವುದರ ಬಗ್ಗೆ ನನ್ನ ತಾಯಿಗೆ ಅರಿವೇ ಇಲ್ಲ. ಒಂದಂತೂ ನಿಜ ನಾನು ಯಾರಿಗೂ ಚಹಾ ಮಾಡಿಕೊಡುವುದಿಲ್ಲ ಎನ್ನುವುದರ ಬಗ್ಗೆ ಆಕೆಗೆ ಖುಷಿ ಇದೆ (ಅಪರೂಪಕ್ಕೆ ಆಕೆಗೆ ಮಾತ್ರ ಮಾಡಿಕೊಡುವೆ)
-ಸೋನಮ್ ತಂಡೇನ್
ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ
ಚಹಾ ಎನ್ನುವುದು ಇಲ್ಲಿ ಒಂದು ಸಂಕೇತ. ಹೆಣ್ಣುಮಕ್ಕಳು ಅಡುಗೆಮನೆಗೆ, ಮಕ್ಕಳನ್ನು ಹೆರುವುದಕ್ಕೇ ಸೀಮಿತ ಎನ್ನುವ ಕಾಲ ಇದೀಗ ಎಷ್ಟೋ ಪಾಲು ಸರಿದಿದೆ. ಹಾಗೆಂದು ಹೊರೆಗಳಿಂದ ಅವರು ಮುಕ್ತರಾಗಿಲ್ಲ. ಮುಕ್ತವಾಗಿಸಿ ಗಂಡು ಹೆಣ್ಣು ಬದುಕನ್ನು ಸಮಾನವಾಗಿ ಹಂಚಿಕೊಂಡು ಬದುಕುವ ಈ ಪ್ರಯತ್ನಕ್ಕೆ ಗಂಡಸರ ಸಹಕಾರ ಅತ್ಯವಶ್ಯ ಬೇಕಿದೆ. ಮುಂದಿನ ಪೀಳಿಗೆಯ ಗಂಡುಮಕ್ಕಳಿಗೆ ಈ ಬಗ್ಗೆ ಹೆಚ್ಚು ತಿಳಿವಳಿಕೆ ಕೊಡಬೇಕಿದೆ. ಇನ್ನು ಹೆಣ್ಣುಮಕ್ಕಳು ಅರಿವನ್ನು ಪ್ರಾಯೋಗಿಕವಾಗಿ ರೂಢಿಸಿಕೊಳ್ಳಬೇಕಿದೆ.
ಇದನ್ನು ಓದಿದ ನೀವು ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:00 pm, Fri, 3 February 23