Viral News : ‘ವಿನ್ಯಾಸ ಮತ್ತು ಸೌಂದರ್ಯಪ್ರಜ್ಞೆಯ ಹಿನ್ನೆಲೆಯಲ್ಲಿ ನೋಡಿದಾಗ ಫ್ರಿಡ್ಜ್ಗಿಂತ ಮಡಿಕೆಯೇ ಸಮರ್ಥ. ನಮ್ಮ ನಿತ್ಯಜೀವನದಲ್ಲಿ ಇದು ಅತ್ಯುತ್ತಮವಾದ ಗೃಹಸಾಧನವಾಗಬಲ್ಲುದು’ ಎಂದು ಉದ್ಯಮಿ ಆನಂದ ಮಹೀಂದ್ರಾ ಫ್ರಿಡ್ಜ್ ಮತ್ತು ಮಡಿಕೆಯ ಫೋಟೋ ಟ್ವೀಟ್ ಮಾಡಿದ್ದಾರೆ. ಇದೀಗ ನಿನ್ನೆಯಷ್ಟೇ ಮಾಡಿದ ಈ ಟ್ವೀಟ್ ಈಗಾಗಲೇ 1.2 ಮಿಲಿಯನ್ಗಿಂತಲೂ ಹೆಚ್ಚು ಜನರ ಗಮನ ಸೆಳೆದಿದೆ.
Frankly, the Surahi is also superior from the point of view of design & aesthetics. In a world increasingly preoccupied with being planet-positive, the humble Surahi could become a premium lifestyle accessory. ??(credit: @EducatedMoron) pic.twitter.com/SR2M7sSMxU
ಇದನ್ನೂ ಓದಿ— anand mahindra (@anandmahindra) May 9, 2023
ಅನೇಕರು ಈ ಟ್ವೀಟ್ಗೆ ವಿವಿಧ ನೋಟಗಳಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಟ್ವೀಟ್ ಅನ್ನು ಒಪ್ಪಿದ್ದಾರೆ ಇನ್ನೂ ಕೆಲವರು ಇದು ವಾಸ್ತವದಿಂದ ದೂರ ಎಂದಿದ್ದಾರೆ. ಇನ್ನೂ ಕೆಲವರು ತಮಾಷೆಯಾಗಿ ಉತ್ತರಿಸಿದ್ದಾರೆ. ಮಡಿಕೆಗಾದರೆ ರೂ. 200 ವ್ಯಯಿಸಬಹುದು. ಫ್ರಿಡ್ಜ್ ಗಾದರೆ ರೂ. 10,000 ಮತ್ತು ಅದಕ್ಕಿಂತಲೂ ಮಿಗಿಲು. ಜೊತೆಗೆ ವಿದ್ಯುತ್ ಬಿಲ್. ಆದರೆ ಮಡಿಕೆಯಲ್ಲಿರುವ ನೀರು ಬೇಸಿಗೆಯಲ್ಲಿ ತಂಪಾಗಿರುತ್ತದೆ ಮತ್ತು ರುಚಿಯನ್ನೂ ಹೆಚ್ಚಿಸಿಕೊಳ್ಳುತ್ತದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್ ಗ್ಲಾಸ್; ಇದನ್ನು ಟ್ರೆಂಡ್ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
ಆದರೆ ಮಡಿಕೆ ಮತ್ತು ಫ್ರಿಡ್ಜ್ ಅನ್ನು ಸಾಮ್ಯಗೊಳಿಸಲಾಗದು ಎರಡರ ಪ್ರಯೋಜನ ಬೇರೆಬೇರೆಯೇ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮಡಿಕೆ ಇದ್ದರೆ ಮುಗಿಯಿತು ಫ್ರಿಡ್ಜ್ ಅಥವಾ ನೀರಿನ ಬಾಟಲಿಯ ಅಗತ್ಯವೇ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಮಡಿಕೆಯೇ ಯಾಕಾಗಬೇಕು? ನಾನು ಪ್ರತೀ ಬೇಸಿಗೆಯಲ್ಲಿ ತಾಮ್ರದ ಪಾತ್ರೆಯಲ್ಲಿ ಮಲ್ಲಿಗೆ ಹೂ ಹಾಕಿಟ್ಟಿರುತ್ತೇನೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್
ನಾನು ಮಡಿಕೆಯಲ್ಲಿ ಕ್ರೀಮ್ ಇಟ್ಟರೆ ಅದು ಮಿಲ್ಕ್ ಶೇಕ್ ಆಗಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅದು ಐಸ್ಕ್ರೀಮ್ ಆಗಬೇಕೆಂದರೆ ಫ್ರಿಡ್ಜ್ನಲ್ಲಿಡಿ ಎಂದು ತಮಾಷೆ ಮಾಡಿದ್ದಾರೆ. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:29 pm, Wed, 10 May 23