67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್

Rope Cycling : ಕಲಿಯುವ ಆಸಕ್ತಿ, ಉತ್ಸಾಹ ಮತ್ತು ಆತ್ಮವಿಶ್ವಾಸಕ್ಕೆ ಯಾವ ವಯಸ್ಸಾದರೇನು? ಇದೀಗ ವೈರಲ್ ಆಗುತ್ತಿರುವ ಈ ಅಜ್ಜಿಯ ವಿಡಿಯೋ ನೋಡಿ, ಹಗ್ಗದ ಮೇಲೆ ಸೈಕಲ್ ಓಡಿಸುತ್ತಿದ್ಧಾರೆ, ಅದೂ ಸೀರೆಯುಟ್ಟು!

67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್
ಸೀರೆಯುಟ್ಟು ಸೈಕ್ಲಿಂಗ್ ಮಾಡುತ್ತಿರುವ 67ರ ಅಜ್ಜಿ
Updated By: ಶ್ರೀದೇವಿ ಕಳಸದ

Updated on: Feb 14, 2023 | 11:24 AM

Viral Video : ವಯಸ್ಸು ಎನ್ನುವುದು ಅನೇಕರಿಗೆ ಅಂಕಿಸಂಖ್ಯೆ ಮಾತ್ರ. ಈ ಹಿಂದೆ 80 ವರ್ಷದ ಅಜ್ಜಿ ಪ್ಯಾರಾಗ್ಲೈಡಿಂಗ್ ಮಾಡಿ ವಿಡಿಯೋ ನೋಡಿದ್ದಿರಿ. ಮೊನ್ನೆಯಷ್ಟೇ 90 ವರ್ಷ ಅಜ್ಜಿಯೊಬ್ಬರು ತನ್ನ 72 ವರ್ಷದ ಮಗಳೊಂದಿಗೆ ಸ್ವಂತ ಉದ್ಯಮ ಆರಂಭಿಸಿದ್ದರ ಬಗ್ಗೆ ಓದಿದಿರಿ, ನೋಡಿದಿರಿ. ಇದೀಗ 67ರ ಅಜ್ಜಿಯೊಬ್ಬರು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ, ಅದೂ ಸೀರೆಯುಟ್ಟು! ನೆಟ್ಟಿಗರು ಕುತೂಹಲದಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಹಗ್ಗದ ಮೇಲೆ ಸೈಕಲ್​ ಓಡಿಸುವುದು, ಅದೂ ಈ ವಯಸ್ಸಿನಲ್ಲಿ, ಸೀರೆಯುಟ್ಟು! ನೆಟ್ಟಿಗರು ಅಚ್ಚರಿಯಿಂದ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದಾರೆ. ಹೆಲ್ಮೆಟ್​ ಮತ್ತು ಸುರಕ್ಷತಾ ಕವಚಗಳನ್ನು ಧರಿಸಿದ ಈಕೆ ಹೀಗೆ ನಿರಾಯಾಸವಾಗಿ ಇಂಥ ಕಠಿಣ ಸವಾಲನ್ನು ಪೂರೈಸುತ್ತಿರುವುದು ಎಂಥವರಿಗೂ ಅಚ್ಚರಿಯೇ.

ಭಯವಾಗುವುದಿಲ್ಲವಾ ಹೀಗೆ ಸೈಕಲ್ ಓಡಿಸಲು ಎಂದು ಕೇಳಿದ ಯಾರಿಗೂ, ನನಗಂತೂ ಭಯ ಇಲ್ಲ. ಬನ್ನಿ ನೀವು ನನ್ನೊಂದಿಗೆ ಸೈಕಲ್ ಓಡಿಸಿ ಎನ್ನುತ್ತಾರೆ ಈಕೆ. ಈ ವಿಡಿಯೋ ಅನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ 241 ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಹೀಗೆ ನಿರ್ಭಯದಿಂದ ಈಕೆ ಸೈಕಲ್ ಓಡಿಸುತ್ತಾರೆಂದರೆ ಆಕೆ ಎಷ್ಟೊಂದು ಕಠಿಣ ಪರಿಶ್ರಮಿಯಾಗಿರಬಹುದು? ನಿರಂತರ ಅಭ್ಯಾಸದಿಂದ ಮಾತ್ರ ಇದೆಲ್ಲವೂ ಸಾಧ್ಯ. ನಮಗೆ ನೀವೇ ಸ್ಫೂರ್ತಿ ಅಜ್ಜಿ ಎಂದು ನೆಟ್ಟಿಗರು ಅಜ್ಜಿಯನ್ನು ಹೊಗಳುತ್ತಿದ್ದಾರೆ. ನಮಗೂ ಸೈಕಲ್ ಓಡಿಸುವುದನ್ನು ಹೇಳಿಕೊಡಿ ಎನ್ನುತ್ತಿದ್ದಾರೆ ಅನೇಕರು.

ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್​ ಕಲಾವಿದ ದೀಪನ್; ವಿಡಿಯೋ ವೈರಲ್

ಸಾಹಸ ಮನೋವೃತ್ತಿಗೆ ವಯಸ್ಸು ಎಂದೂ ಮಾನದಂಡವಲ್ಲ ಎನ್ನುವುದಕ್ಕೆ ನಮ್ಮ ನಡುವಿನ ಅನೇಕ ಮಹಿಳೆ ಪುರುಷರೇ ಸಾಕ್ಷಿ. ಉತ್ಸಾಹ ಮತ್ತು ಆತ್ಮವಿಶ್ವಾಸವಿದ್ದರೆ ಯಾವ ವಯಸ್ಸಿಗೆ ಏನನ್ನೂ ಸಾಧಿಸಬಹುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:24 am, Tue, 14 February 23