ಪಾಕಿಸ್ತಾನದಲ್ಲಿ ಇನ್ನು ಟರ್ಕಿಷ್​ ಐಸ್ಕ್ರೀಮ್ ನಿಷೇಧಿಸಲಾಗುತ್ತದೆಯಾ? ನೆಟ್ಟಿಗರು ಕೇಳುತ್ತಿದ್ದಾರೆ

| Updated By: ಶ್ರೀದೇವಿ ಕಳಸದ

Updated on: Jan 10, 2023 | 5:55 PM

Turkish Ice cream : ಐಸ್ಕ್ರೀಮ್​ ಮಾರುವವನ, ಇಸಿದುಕೊಳ್ಳುವವನ ಅತಿರೇಕವನ್ನು ನೋಡಿದ ನೆಟ್ಟಿಗರು ಅಸಹ್ಯದ ಪರಮಾವಧಿ ಎನ್ನುತ್ತಿದ್ದಾರೆ. ಈಗ ಟರ್ಕಿ ಜೊತೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಿ ಎಂದು ವ್ಯಂಗ್ಯವನ್ನಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಇನ್ನು ಟರ್ಕಿಷ್​ ಐಸ್ಕ್ರೀಮ್ ನಿಷೇಧಿಸಲಾಗುತ್ತದೆಯಾ? ನೆಟ್ಟಿಗರು ಕೇಳುತ್ತಿದ್ದಾರೆ
ಟರ್ಕಿಷ್ ಐಸ್ಕ್ರೀಮ್​ ಅನ್ನು ‘ನುಂಗುತ್ತಿರುವ’ ಪಾಕಿಸ್ತಾನಿ ವ್ಯಕ್ತಿ
Follow us on

Viral Video : ಟರ್ಕಿಷ್​ ಐಸ್ಕ್ರೀಮ್ (Turkish Icecream)​ ಎನ್ನುವುದು ಎಲ್ಲರಿಗೂ ಯಾವಾಗಲೂ ಮಜಾ ಕೊಡುತ್ತದೆ ಎಂದು ಹೇಳಲಾಗದು. ಕೆಲ ತಿಂಗಳುಗಳ ಹಿಂದೆ ಪುಟ್ಟ ಹುಡುಗಿಯೊಬ್ಬಳು ಈ ಐಸ್ಕ್ರೀಮ್​ ತೆಗೆದುಕೊಳ್ಳುವಾಗ ರೋಸಿ ಹೋಗಿ ಅತ್ತಿದ್ದ ವಿಡಿಯೋ ಅನ್ನು ನೋಡಿ ಮರುಗಿದ್ದೀರಿ. ಆದರೆ ಪಾಕಿಸ್ತಾನಿ ಪತ್ರಕರ್ತರೊಬ್ಬರು ಹಂಚಿಕೊಂಡ ಈ ವಿಡಿಯೋ ನೋಡಿದ ಮೇಲೆ ಯಾರಿಗೂ ಕೋಪ ಉಕ್ಕದೇ ಇರದು. ಐಸ್ಕ್ರೀಮ್​ ಮಾರುವವನು ಮಾಡಲಿರುವ ಮೋಜನ್ನು ಪಕ್ಕದಲ್ಲಿ ನಿಂತ ಮಕ್ಕಳ ಗುಂಪು ಕುತೂಹಲದಿಂದ ಎದುರು ನೋಡುತ್ತಿದೆ. ಮೋಜು ಶುರುವಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಐಸ್ಕ್ರೀಮ್​ ಸಿಕ್ಕಿಸಿದ ಕೋಲನ್ನು ಅತ್ತಿತ್ತ ತಿರುವಿ ಐಸ್ಕ್ರೀಮ್​ ಅನ್ನು ಅಕ್ಷರಶಃ ಗಬಗಬನೆ ಬಾಯಿಗೆ ತುರುಕಿಕೊಳ್ಳುತ್ತಾನೆ.

ಆದರೆ ಇದು ಮೋಜು? ಎನ್ನುವಂಥ ಅನುಮಾನವನ್ನು ಹುಟ್ಟುಹಾಕುವಂತಿದೆ ಈ ವಿಡಿಯೋ. ಐಸ್ಕ್ರೀಮ್​ ಮಾರುವವನು ಮತ್ತು ಗ್ರಾಹಕನೂ ಅತಿರೇಕದಿಂದ ವರ್ತಿಸಿದ ಹಾಗಿದೆ. ಪಾಕಿಸ್ತಾನದಲ್ಲಿ ಟರ್ಕಿಶ್ ಐಸ್ ಕ್ರೀಮ್ ನಿಷೇಧಿಸಬೇಕು ಎಂಬ ಕ್ಯಾಪ್ಷನ್​ನಲ್ಲಿ ಪಾಕಿಸ್ತಾನಿ ಪತ್ರಕರ್ತ ಅಜರ್​ ಖಾನ್​ ಎಂಬುವವರು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈಗಾಗಲೇ 16,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ : ಫಿಲಿಪೈನ್ಸ್​ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್​

ಐಸ್ಕ್ರೀಮ್​ ಕೊಡುವ ತಂತ್ರವೂ ಅಸಹ್ಯವಾಗಿದೆ. ಅದನ್ನು ಹಠಾತ್ತನೇ ಇಸಿದುಕೊಂಡು ನುಂಗುವುವವನ ವರ್ತನೆಯೂ ಅಸಹ್ಯವಾಗಿದೆ. ಅವ ನುಂಗಿದ ರೀತಿ ಮತ್ತು ಥಟ್ಟನೇ ಇವ ಟಿಶ್ಯೂ ಕೊಡುವ ರೀತಿಗೆ ಇನ್ನೆಂದೂ ಟರ್ಕಿಷ್​ ಐಸ್​ಕ್ರೀಮ್​ ತಿನ್ನಬಾರದು ಎನ್ನುವಷ್ಟು ಕೋಪ ಬರುತ್ತಿದೆ ಎನ್ನುತ್ತಿದ್ಧಾರೆ ನೆಟ್ಟಿಗರು.

ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು

ಈಗ ಟರ್ಕಿ ಜೊತೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಿ ಎಂದಿದ್ದಾರೆ ಕೆಲವರು. ಈ ಜನಕ್ಕೆ ಯಾಕೆ ಇಂಥ ಹುಚ್ಚೋ, ಸಮಾಧಾನದಲ್ಲಿ ಐಸ್​ಕ್ರೀಮ್ ತಿನ್ನುವುದನ್ನು ಬಿಟ್ಟು ಇಂಥ ತಂತ್ರಗಳಿಗೆ ಯಾಕೆ ಹಾತೊರೆಯುತ್ತಾರೋ ಎಂದು ಕೇಳಿದ್ಧಾರೆ ಮತ್ತೊಬ್ಬರು. ಮಾರಾಟಗಾರರು ಈ ಅವಕಾಶವನ್ನೇ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:52 pm, Tue, 10 January 23