Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

ಅಜಿತ್ ವೈರಲ್ ಆಗಿರೋದು, ವೋಟ್ ಮಾಡಿರೋದಕ್ಕಲ್ಲ. ಬದಲಾಗಿ ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಕ್ಕೆ. ಅಭಿಮಾನಿ ಕೈಯಿಂದ ಅಜಿತ್ ಮೊಬೈಲ್ ಕಿತ್ತುಕೊಂಡ ಘಟನೆಯಲ್ಲಿ ಒಟ್ಟಾರೆ ನಡೆದಿದ್ದೇನು. ವೈರಲ್ ವಿಡಿಯೋ ಏನು ಹೇಳುತ್ತೆ ಅಂದ್ರೆ..

Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?
ಅಜಿತ್ (ಚಿತ್ರ: ಆಂಧ್ರ ಅಜಿತ್ ಫ್ಯಾನ್ಸ್ ಟ್ವಿಟರ್ ಹ್ಯಾಂಡಲ್)
Edited By:

Updated on: Apr 05, 2022 | 12:47 PM

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ರಜನೀಕಾಂತ್, ಕಮಲ್ ಹಾಸನ್ ಸಹಿತ ಬಹುತೇಕ ಸಿನಿಮಾ ಸೂಪರ್ ಸ್ಟಾರ್​ಗಳು ರಾಜಕೀಯ, ಚುನಾವಣೆಯನ್ನು ರಂಗೇರಿಸಿದ್ದಾರೆ. ಈ ನಡುವೆ ಮತದಾನದ ದಿನವಾದ ಇಂದು ಖ್ಯಾತ ನಟ ಅಜಿತ್ ಕೂಡ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದ್ದಾರೆ. ಅರೆ! ನಟನೆ ಹೊರತಾಗಿ ಇನ್ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡು, ವಿವಾದ ಆಗದ ಅಜಿತ್ ಚುನಾವಣೆ ವಿಷಯದಲ್ಲಿ ಟ್ರೆಂಡ್ ಆಗುವಂಥದ್ದು ಏನಿದೆ ಅಂತೀರಾ. ಇಲ್ಲಿದೆ ವಿವರಗಳು.

ಅಜಿತ್ ವೈರಲ್ ಆಗಿರೋದು, ವೋಟ್ ಮಾಡಿರೋದಕ್ಕಲ್ಲ. ಬದಲಾಗಿ ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಕ್ಕೆ. ಅಭಿಮಾನಿ ಕೈಯಿಂದ ಅಜಿತ್ ಮೊಬೈಲ್ ಕಿತ್ತುಕೊಂಡ ಘಟನೆಯಲ್ಲಿ ಒಟ್ಟಾರೆ ನಡೆದಿದ್ದೇನು. ವೈರಲ್ ವಿಡಿಯೋ ಏನು ಹೇಳುತ್ತೆ ಅಂದ್ರೆ..

ಸದ್ಯ 49 ವರ್ಷ ವಯಸ್ಸಿನ ಅನುಭವಿ ಹಾಗೂ ಖ್ಯಾತ ನಟ ಅಜಿತ್ ತಮ್ಮ ಪತ್ನಿ ಶಾಲಿನಿ ಜೊತೆ ಇಂದು ವೋಟ್ ಮಾಡಲು ಮತಗಟ್ಟೆಗೆ ತೆರಳಿದ್ದರು. ಚೆನ್ನೈನ ತಿರುವನ್ಮಿಯುರ್ ಪೋಲಿಂಗ್ ಕೇಂದ್ರಕ್ಕೆ ಅಜಿತ್ ಇಂದು ಬೆಳಗ್ಗೆ ಹೋಗಿದ್ದರು. ಆ ವೇಳೆ ಸಹಜವಾಗಿ ಅಭಿಮಾನಿಗಳು ಅಜಿತ್​ರನ್ನು ಮುತ್ತಿಗೆ ಹಾಕಿ, ಸೆಲ್ಫೀ ಕೇಳಲು ಬಂದಿದ್ದಾರೆ. ಆಗ ಮಾಸ್ಕ್ ಇಲ್ಲದೆ ನಟನಿಗೆ ಮುತ್ತಿಗೆ ಹಾಕಿದ ಅಭಿಮಾನಿಯ ಫೋನ್​ನ್ನು ಅಜಿತ್ ಕಿತ್ತುಕೊಂಡಿದ್ದಾರೆ. ಮಾಸ್ಕ್ ಹಾಕಲು ಅಭಿಮಾನಿಗೆ ತಿಳಿಸಿ, ಬಳಿಕ ಫೋನ್ ವಾಪಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಅಜಿತ್ ನಡೆದುಕೊಂಡದ್ದು ಸರಿ ಎಂದಿದ್ದಾರೆ. ಅಭಿಮಾನಿ ಕೊವಿಡ್-19 ಪ್ರೊಟೊಕಾಲ್ ಪಾಲಿಸಿಲ್ಲ. ಅದಕ್ಕಾಗಿ ಅಜಿತ್ ನಡೆದುಕೊಂಡಿದ್ದು ಸರಿಯೇ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ನಟ ವಿಜಯ್ ಅಭಿಮಾನಿಗಳು ಮಾತ್ರ ಅಜಿತ್ ನಡೆಯನ್ನು ವಿರೋಧಿಸಿದ್ದಾರೆ. ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ವಿರೋಧ ಸಿನಿ ಅಭಿಮಾನಿಗಳಿಗೆ ತಿಳಿಯದ ವಿಷಯವೇನಲ್ಲ. ಅದೇ ಕಾರಣಕ್ಕೆ ಈ ಸನ್ನಿವೇಶದಲ್ಲೂ ವಿಜಯ್ ಅಭಿಮಾನಿಗಳು ಅಜಿತ್ ಅಭಿಪ್ರಾಯವನ್ನು ಆಕ್ಷೇಪಿಸಿದ್ದಾರೆ. ವಿಜಯ್ ತಮ್ಮದೇ ಮೊಬೈಲ್ ತೆಗೆದು ಸೆಲ್ಫೀ ಕ್ಲಿಕ್ಕಿಸಿ ಕೊಟ್ಟರೆ, ಅಜಿತ್ ಅಭಿಮಾನಿಯ ಫೋನ್ ಕಿತ್ತುಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Thalapathy Vijay: ಸೈಕಲ್​ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್​! ಪೆಟ್ರೋಲ್​ ಬೆಲೆ ಏರಿಕೆಗೆ ನಟನ ತಿರುಗೇಟು?

ಇದನ್ನೂ ಓದಿ: ನಮಗೆ ಇವಿಎಂ ಮತ್ತು ಮತದಾರರ ಮೇಲೆ ನಂಬಿಕೆ ಇದೆ, ತಮಿಳುನಾಡಿನಲ್ಲಿ ಉತ್ತಮ ಫಲಿತಾಂಶ ಬರಲಿದೆ: ಸಿ.ಟಿ.ರವಿ

Published On - 4:52 pm, Tue, 6 April 21