ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಚಿರತೆ (Leopard) ಕಾರಿನ ಬಾನೆಟ್‌ನಡಿ ಸಿಲುಕಿಕೊಂಡ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ ಸ್ಥಳ ಯಾವುದೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ. ಬಾಲಿವುಡ್ ನಟಿ ರವೀನಾ ಟಂಡನ್ (Raveena Tondon) ಕೂಡ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಕಾರಿಗೆ ಚಿರತೆ ಡಿಕ್ಕಿ ಹೊಡೆದ ನಂತರ ಚಿರತೆ ಆ ಸ್ಥಳದಿಂದ ಪರಾರಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಸುಂದರವಾದ ಚಿರತೆಗಾಗಿ ಪ್ರಾರ್ಥಿಸಿ. ಈ ಚಿರತೆ ಬದುಕುಳಿದಿದೆ ಎಂದು ನಾನು ಭಾವಿಸುತ್ತೇನೆ. ಚಿರತೆಗೆ ತೀವ್ರವಾಗಿ ಗಾಯಗೊಂಡಿದ್ದರೂ, ಅದು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದೆ ಎಂದು ರವೀನಾ ಟಂಡನ್ ಅವರು ಬರೆದುಕೊಂಡಿದ್ದಾರೆ.
Prayers for this beautiful leopard… hope he survives,even though he’s badly wounded , he escapes into the jungle . @WildLense_India I hope our politicians wake to the fact that linear development can happen hand in hand with well thought of conservation methods. pic.twitter.com/KbdhgRoaZS
— Raveena Tandon (@TandonRaveena) June 20, 2022
ವನ್ಯಜೀವಿ ಕಾರ್ಯಕರ್ತರೊಬ್ಬರು ಹಂಚಿಕೊಂಡ ಮತ್ತೊಂದು ವಿಡಿಯೋ ಕ್ಲಿಪ್‌ನಲ್ಲಿ, ಚಿರತೆ ವಾಹನದ ಬಾನೆಟ್ ಅಡಿಯಲ್ಲಿ ಸಿಲುಕಿಕೊಂಡಿರುವುದನ್ನು ನೋಡಬಹುದು. ಕಾಡುಪ್ರಾಣಿಯನ್ನು ಉಳಿಸಲು ಚಾಲಕ ಕಾರನ್ನು ಹಿಂದಕ್ಕೆ ಎಳೆದಾಗ, ಚಿರತೆ ತನ್ನ ಕೋಪವನ್ನು ವ್ಯಕ್ತಪಡಿಸಿ ದಾಳಿ ಮಾಡಲು ಹೋದಾಗ ಆ ಕಾರು ತನ್ನ ಜೊತೆಯೇ ಚಿರತೆಯನ್ನು ರಸ್ತೆಮೇಲೆ ಎಳೆದುಕೊಂಡು ಹೋಗಿರುವುದನ್ನು ನೋಡಬಹುದು. ಕೊನೆಗೆ ಬಾನೆಟ್ನಿಂದ ತನ್ನ ಹಿಡಿತವನ್ನು ಬಿಟ್ಟ ಚಿರತೆ ಪಕ್ಕದ ರಸ್ತೆಯಿಂದ ಕಾಂಪೌಂಡ್ ಹಾರಿ ಓಡಿಹೋಗಿದೆ.
ಇದನ್ನೂ ಓದಿ: Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು
This is what we are doing to our wildlife. It’s a simple case of bad planning. More importantly we are building unsafe roads for citizens. @OfficeOfNG @MORTHIndia @MORTHRoadSafety @nitin_gadkari @RoadkillsIndia
Warning: Gruesome video…source social media#roadkills pic.twitter.com/dwls5tdzp8— Milind Pariwakam ?? (@MilindPariwakam) June 20, 2022
ಈ ವಿಡಿಯೋ ಇಂಟರ್ನೆಟ್ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಾವಿರಾರು ಜನರು ಈಗಾಗಲೇ ಈ ವಿಡಿಯೋ ವೀಕ್ಷಿಸಿದ್ದಾರೆ. ಈ ರೀತಿ ವಾಹನಗಳಿಗೆ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ವರ್ಷ, ಗುರುಗ್ರಾಮ್ ಬಳಿಯ ಪಾಲಿ-ಸೂರಜ್‌ಕುಂಡ್ ರಸ್ತೆಯಲ್ಲಿ ಎರಡು ವರ್ಷದ ಚಿರತೆ ಸತ್ತಿರುವುದು ಪತ್ತೆಯಾಗಿದ್ದು, ಶವಪರೀಕ್ಷೆ ವರದಿಗಳು ವಾಹನಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಸೂಚಿಸಲಾಗಿತ್ತು. 2019ರಲ್ಲಿ ಮನೇಸರ್‌ನ NH-48ನಲ್ಲಿ ಒಂದೂವರೆ ವರ್ಷದ ಹೆಣ್ಣು ಚಿರತೆ ಕೂಡ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿತ್ತು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Tue, 21 June 22