ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ತುಂಬಿದ ಟ್ರಕ್ ಒಂದು ಕಡಿದಾದ ಕಣಿವೆಯಲ್ಲಿ ಸಾಗುತ್ತಿರುವಾಗ ಆಯತಪ್ಪಿ ಬೀಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಅಬ್ದುಲ್ಲಾ ಆರಿಫ್ ಎಂಬ ವ್ಯಕ್ತಿ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಾಹನವು ಕಡಿದಾದ ಕಣಿವೆಯನ್ನು ದಾಟುವಾಗ ಕಂದರಕ್ಕೆ ಬೀಳುತ್ತದೆ. ಈ ದಾರಿಯು ತುಂಬಾ ಸಿಕ್ಕದಾಗಿತ್ತು ಎಂದು ಸ್ಥಳಿಯರು ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫರಾಬಾದ್‌ನಲ್ಲಿ ಈ ಘಟನೆ ನಡೆದಿದೆ.
30-ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಟ್ರಕ್ ಡ್ರೈವರ್ ಈ ಕಿರಿದಾದ ದಾರಿಯನ್ನು ದಾಟಲು ಪ್ರಯತ್ನಿಸುತ್ತಾನೆ ಆದರೆ ಆತನ ನಿಯಂತ್ರಣ ತಪ್ಪಿ ಟ್ರಕ್ ದೊಡ್ಡದಾದ ಕಂದರಕ್ಕೆ ಬೀಳುತ್ತದೆ. ಇದನ್ನು ನೋಡುತ್ತಿದ್ದ ಜನರು ಮರ್ಸಿ, ಓ ಗಾಡ್ ಎಂದು ಕೂಗುತ್ತಾರೆ. ಆದರೆ ಚಾಲಕನ ನಿಯಂತ್ರಣ ತಪ್ಪಿ ಕಣಿವೆಯಿಂದ ಲಾರಿ ಬೀಳುತ್ತದೆ.
ಘಟನೆ ಮತ್ತು ಚಾಲಕನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಅನೇಕ ಕೇಳಿದ್ದರೆ . ಜೊತೆಗೆ ಈ ವಿಡಿಯೋವನ್ನು ಅನೇಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಟ್ರಕ್ ಚಾಲಕ ಜಿಗಿದಿದ್ದು, ಸುರಕ್ಷಿತವಾಗಿದ್ದಾರೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.
ಪೋಸ್ಟ್ ಪ್ರಕಾರ, ಘಟನೆಯ ಸ್ಥಳದಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ. ಈ ಭಯಾನಕ ಘಟನೆಯ ಮತ್ತೊಂದು ವೀಡಿಯೊವನ್ನು ಹುಸ್ನೇನ್ ಮುಖ್ತಾರ್ ಖುರೇಷಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸೇತುವೆಯ ಮೇಲಿಂದ ಬಿದ್ದಿದ್ದ ಟ್ರಕ್ ಅನ್ನು ಎತ್ತುವ ಸಂದರ್ಭದಲ್ಲಿ ಟೋಯಿಂಗ್ ಕ್ರೇನ್ ನೀರಿಗೆ ಅಪ್ಪಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಒಡಿಶಾದ ತಾಲ್ಚೆರ್‌ನಲ್ಲಿ ಈ ಘಟನೆ ನಡೆದಿದೆ.
ಚಾಲಕ ಇನ್ನೂ ಸೇತುವೆಯೊಳಗೆ ಇರುವಾಗಲೇ ಕ್ರೇನ್ ಕುಸಿದು ಸೇತುವೆಯ ಕೆಳಗೆ ಧುಮುಕುವುದನ್ನು ವೀಡಿಯೊ ತೋರಿಸಿದೆ. ವರದಿಗಳ ಪ್ರಕಾರ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೈಗಾರಿಕಾ ವಾಹನದ ಚಾಲಕ ತನ್ನ ಕ್ರೇನ್ ಕ್ಯಾಬಿನ್‌ನಿಂದ ಜಿಗಿದು ಸುರಕ್ಷಿತವಾಗಿ ಈಜುಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.
Published On - 3:20 pm, Wed, 10 August 22