Viral Video : ಮೋದಿಯ ನಿಂದಿಸದಿರೋ ಅಣ್ಣಗಳಿರಾ, ಸಂತನ ನಿಂದಿಸದಿರೋ, ಮೋದಿಗಾಗಿ ಕನ್ನಡ ಹಾಡು ಬರೆದ ವೃದ್ಧೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅನೇಕರು ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಮೋದಿ ಮಾಡಿದ ಕೆಲಸ ಕಾರ್ಯಗಳನ್ನು ಹೊಗಳುತ್ತಿರುವವರು ಅದೆಷ್ಟೋ ಜನರು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೃದ್ಧೆಯೊಬ್ಬರು ಮೋದಿಯ ಬಗ್ಗೆ ಹಾಡು ಕಟ್ಟಿ ಅವರ ಸಾಧನೆಯನ್ನು ಹಾಡಿನಲ್ಲಿ ಹೇಳಿದ್ದಾರೆ..ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೋದಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral Video : ಮೋದಿಯ ನಿಂದಿಸದಿರೋ ಅಣ್ಣಗಳಿರಾ, ಸಂತನ ನಿಂದಿಸದಿರೋ, ಮೋದಿಗಾಗಿ ಕನ್ನಡ ಹಾಡು ಬರೆದ ವೃದ್ಧೆ
Edited By:

Updated on: Apr 25, 2024 | 6:34 PM

ಮೋದಿ ಮೋದಿ ಎಲ್ಲೆಲ್ಲಿಯು ಮೋದಿಯದ್ದೇ ಹವಾ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕದಲ್ಲಿಯೂ ಮೋದಿ ಹವಾ ಜೋರಾಗಿದೆ. ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯ ಪಟ್ಟದಲ್ಲಿ ಕಾಣಬೇಕೆಂಬ ಬಯಕೆಯು ಮೋದಿ ಅಭಿಮಾನಿಗಳದ್ದು. ಮೋದಿ ಮಾಡಿದ ಸಾಧನೆಗಳನ್ನು ಹೆಮ್ಮೆಯಿಂದ ಹೇಳುತ್ತಾ ಮೋದಿಗೆ ಜೈಕಾರ ಕೂಗುವವರಿಗೇನು ಲೆಕ್ಕವಿಲ್ಲ. ಆದರೆ ಇಲ್ಲೊಬ್ಬರು ಅಜ್ಜಿ ಮೋದಿಯವರ ಮೇಲೆ ಹಾಡು ಬರೆದು ಸೊಗಸಾಗಿ ಹಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋದ ಪ್ರಾರಂಭದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಕಾಂಗ್ರೆಸ್ ಸರ್ಕಾರವನ್ನು ತೆಗಳಿರುವ ಅಜ್ಜಿಯು ನಂತರ ಮೋದಿಯವರ ಮೇಲೆ ಹಾಡು ಬರೆದಿದ್ದೇನೆ ಎಂದು ಹೇಳಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ!

ಈ ವಿಡಿಯೋಗೆ ಶೀರ್ಷಿಕೆಯಾಗಿ ‘ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ ಮಾಡಿಸಿ ಪ್ರಚಾರ ಪಡೆದುಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದಲ್ಲ ಸಿದ್ದರಾಮಯ್ಯ ಅವರೇ, ಈ ಇಳಿ ವಯಸ್ಸಿನಲ್ಲೂ ತಂತ್ರ‌ಜ್ಞಾನ ಬಳಸದೆ ಮೋದಿಯವರ ಸಾಧನೆಯನ್ನು ವೃದ್ಧೆ ಓರ್ವರು ಹಾಡಿರುವ ಹಾಡನ್ನೊಮ್ಮೆ ಕೇಳಿ’ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ‘ಮೋದಿಯ ನಿಂದಿಸದಿರೋ ಅಣ್ಣಗಳಿರಾ, ಸಂತನ ನಿಂದಿಸದಿರೋ’ ಎಂದು ಹಾಡುತ್ತ ಮೋದಿಯ ಸಾಧನೆಯನ್ನು ಹಾಡಿನ ಮೂಲಕ ಹಾಡಿ ಹೊಗಳಿದ್ದಾರೆ. ನರೇಂದ್ರ ಮೋದಿಯನ್ನು ಹಾಡಿ ಹೊಗಳಿರುವ ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ