ಮೋದಿಗೆ ವಯಸ್ಸಾಯ್ತು, ನಾವು ಹೊಸ ‘ಮೋದಿ’ ಬೆಳೆಸ್ತೀವಿ: ಸಂಚಲನ ಮೂಡಿಸುತ್ತಿದ್ದಾರೆ ರವೀಂದ್ರ ಸಿಂಗ್ ಭಾಟಿ ಎಂಬ 26 ವರ್ಷದ ಎಂಪಿ ಅಭ್ಯರ್ಥಿ

Ravindra Singh Bhati, independent candidate in Barmer constituency: ರಾಜಸ್ಥಾನದ ಬಾರ್ಮೆರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 26 ವರ್ಷದ ರವೀಂದ್ರ ಸಿಂಗ್ ಭಾಟಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಇವರ ಮೊನಚಾದ ಭಾಷಣ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಕೇಂದ್ರ ಸಚಿವ ಕೈಲಾಶ್ ಚೌಧರಿ ಎದುರು ನಿಂತಿರುವ ಭಾಟಿ ಗೆಲುವಿನ ಸಾಧ್ಯತೆ ತೋರಿಸಿದ್ದಾರೆ. ಈ ಹಿಂದೆ ಶಿಯೋ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಅಚ್ಚರಿಯ ಗೆಲುವು ಕಂಡಿದ್ದ ಯುವಕ ಇವರು. ಬಾರ್ಮೆರ್ ಕ್ಷೇತ್ರದ ಜನರು ಭಾಟಿಯನ್ನು ಹೊಸ ಮೋದಿಯಾಗಿ ರೂಪಿಸಲು ನೋಡುತ್ತಿದ್ದಾರೆ.

ಮೋದಿಗೆ ವಯಸ್ಸಾಯ್ತು, ನಾವು ಹೊಸ ‘ಮೋದಿ’ ಬೆಳೆಸ್ತೀವಿ: ಸಂಚಲನ ಮೂಡಿಸುತ್ತಿದ್ದಾರೆ ರವೀಂದ್ರ ಸಿಂಗ್ ಭಾಟಿ ಎಂಬ 26 ವರ್ಷದ ಎಂಪಿ ಅಭ್ಯರ್ಥಿ
ರವೀಂದ್ರ ಸಿಂಗ್ ಭಾಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 25, 2024 | 4:18 PM

ರವೀಂದ್ರ ಸಿಂಗ್ ಭಾಟಿ 26 ವರ್ಷದ ವ್ಯಕ್ತಿ ರಾಜಸ್ಥಾನದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಸಾಧಾರಣ ಶಾಲಾ ಮಾಸ್ತರರ ಮಗನಾದ ಇವರು ಭಾರತದ ಎರಡನೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎನಿಸಿರುವ ರಾಜಸ್ಥಾನದ ಬಾರ್ಮೇರ್​ನಲ್ಲಿ (Barmer, Rajasthan) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಕೈಲಾಶ್ ಚೌಧರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಹಳಷ್ಟು ಜನರು ಭಾಟಿಯೇ ಗೆದ್ದುಬಿಡುತ್ತಾರೆ ಎಂದು ಹೇಳುತ್ತಿದ್ದಾರೆ. ಈ 26 ವರ್ಷದ ಯುವಕ (Ravindra Singh Bhati) ಪಕ್ಷದ ಬಲ ಇಲ್ಲದೆ ಅದೇನು ಗೆದ್ದಿಯಾನು ಎಂದುಕೊಂಡರೆ ಲೆಕ್ಕ ತಪ್ಪೀತು. ರವೀಂದ್ರ ಸಿಂಗ್ ಭಾಟಿ ಈ ರೀತಿ ಅನೇಕ ಲೆಕ್ಕಾಚಾರಗಳ್ನು ತಲೆಕೆಳಗು ಮಾಡಿದ ಇತಿಹಾಸವೇ ಕಣ್ಮುಂದೆ ಇದೆ. ಬಾರ್ಮೆರ್ ಕ್ಷೇತ್ರದ ಜನರು ಈ ಯುವಕ ಕಣ್ಣಲ್ಲಿ ಹೊಸ ಮೋದಿಯನ್ನು ಕಂಡಿದ್ದಾರೆ. ಈತನನ್ನು ಗೆಲ್ಲಿಸಬೇಕೆಂದು ಕ್ಷೇತ್ರದ ಜನರು ಪಣತೊಟ್ಟು ಓಡಾಡುತ್ತಿದ್ದಾರಂತೆ. ಅಂಥದ್ದೇನಿದೆ ಈ ಭಾಟಿಯ ಬಳಿ?

ಎಬಿವಿಪಿಯಿಂದ ಬೆಳೆದು ಬಂದ ಭಾಟಿ

ರವೀಂದ್ರ ಸಿಂಗ್ ಭಾಟಿಗೆ ಚುನಾವಣೆ ಸವಾಲು ಹೊಸದೇನಲ್ಲ. ಇವರು ಶಿಯೋ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿಯೇ ಗೆದ್ದು ಶಾಸಕರಾದವರು. ಇವರು ಲೆಕ್ಕಾಚಾರ ತಲೆಕೆಳಗು ಮಾಡಿದ ಒಂದು ಸ್ಪರ್ಧೆ 2019ರದ್ದು. ಜೋಧಪುರ ಯೂನಿವರ್ಸಿಟಿಯ ವಿದ್ಯಯಾರ್ಥಿಯಾಗಿದ್ದಾಗ ರವೀಂದ್ರ ಸಿಂಗ್ ಭಾಟಿ ಎಬಿವಿಪಿಯ ಸದಸ್ಯರಾಗಿದ್ದರು.

ಈ ವಿಶ್ವವಿದ್ಯಾಲಯದ ಸ್ಟುಡೆಂಟ್ಸ್ ಯೂನಿಯನ್ ಚುನಾವಣೆಯಲ್ಲಿ ಅಂದಿನ ಸಿಎಂ ಅಶೋಕ್ ಗೆಹ್ಲೋಟ್ ಬೆಂಬಲಿತ ವಿದ್ಯಾರ್ಥಿ ಸ್ಪರ್ಧಿಸಿರುತ್ತಾನೆ. ಆತನಿಗೆ ಎದುರಾಗಿ ಎಬಿವಿಪಿಯಿಂದ ನಿಲ್ಲುವುದು ಭಾಟಿ ಬಯಕೆ ಆಗಿತ್ತು. ಆದರೆ, ಎಬಿವಿಪಿಯಿಂದ ಟಿಕೆಟ್ ಸಿಗಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಇವರು ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ. ಗೆಹಲೋತ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಗೆಲುವು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದವರಿಗೆ ಅಚ್ಚರಿ ಆಗುವಂತೆ ರವೀಂದ್ರ ಸಿಂಗ್ ಭಾಟಿ ಗೆದ್ದುಬಿಡುತ್ತಾರೆ.

ಇದನ್ನೂ ಓದಿ: ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ? ದೇವೇಗೌಡರು ಆಕ್ರೋಶ

ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾಟಿ ಅವರು ಶಿಯೋ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಯುವಕನ ಪ್ರಖರ ಭಾಷಣ, ಉತ್ಸಾಹ ಇವೆಲ್ಲವೂ ಶಿಯೋ ಕ್ಷೇತ್ರದ ಆಚೆಗೂ ಹರಡತೊಡಗಿತು. ಜನರಿಗೆ ಈತನ ಕಣ್ಣಲ್ಲಿ ಏನೋ ಹೊಸತು ಕಂಡಿರಬೇಕು.

ಭಾಟಿಯಲ್ಲಿ ಹೊಸ ಮೋದಿ ಹುಡುಕುತ್ತಿರುವ ಜನರು…

ನರೇಂದ್ರ ಮೋದಿ ಅವರಿಗೆ ವಯಸ್ಸಾಯಿತು. ಹೆಚ್ಚು ದಿನ ಆಡಳಿತ ನಡೆಸಲು ಆಗುವುದಿಲ್ಲ. ಅದಕ್ಕಾಗಿ ನಾವು ಹೊಸ ಮೋದಿಯನ್ನು ತಯಾರು ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ. ಈ ಹುಡುಗ ಯಾವ ಆಶ್ವಾಸನೆ ಕೊಡದಿದ್ದರೂ ಪರವಾಗಿಲ್ಲ ನಾವೆಲ್ಲಾ ಆತನಿಗೇ ವೋಟು ಹಾಕುವುದು ಎಂದು ಅಭಿಮಾನದಿಂದ ಹೇಳುವವರಿದ್ದಾರೆ.

ರವೀಂದ್ರ ಸಿಂಗ್ ಭಾಟಿ ಅವರ ಭಾಷಣ ಕೇಳಲು ಸುಡುಸುಡು ಬಿಸಿಲಿನಲ್ಲೂ ಜನರು ಗಂಟೆಗಟ್ಟಲೆ ಕಾಯುತ್ತಾರೆ. ಈತ ಹೋದಲೆಲ್ಲಾ ಜನರು ಪ್ರೀತಿಯಿಂದ, ಅಭಿಮಾನದಿಂದ ಮೈಕೈ ತಡವುತ್ತಾರೆ.

ಸ್ಕೂಲ್ ಟೀಚರ್ ಮಗನ ಜೊತೆ ಸಾಲು ಸಾಲು ಎಸ್​ಯುವಿಗಳು…!

ಬಾರ್ಮೆರ್ ಕ್ಷೇತ್ರದ ಜನರೇ ತನ್ನನ್ನು ಎಂಪಿ ಚನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದು ಎಂದು ಭಾಟಿ ಹೇಳುತ್ತಾರೆ. ಈ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸುಲಭವಲ್ಲ ಎನ್ನುವುದು ತನಗೆ ಗೊತ್ತು. ಆದರೆ, ಈ ಹೋರಾಟ ನಡೆಸುತ್ತಿರುವುದು ನಾನಲ್ಲ. ಜನರೇ ಖುದ್ದಾಗಿ ಹೋರಾಡುತ್ತಿದ್ದಾರೆ ಎಂಬುದು ಇವರ ವಾದ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಮಾದರಿ‌ ಆಡಳಿತ: ಪ್ರಲ್ಹಾದ್ ಜೋಶಿ ವಾಗ್ದಾಳಿ

ಶಾಲಾ ಟೀಚರ್ ಮಗನಾದ ಭಾಟಿ ಪ್ರಚಾರಕ್ಕೆ ಹೋಗುವಾ ಅವರ ಜೊತೆ ಸಾಲು ಸಾಲಾಗಿ ಎಸ್​ಯುವಿ ಕಾರುಗಳು ಹೋಗುತ್ತವೆ. ಇಷ್ಟೊಂದು ಹಣ ಹೇಗೆ ಸಂಪಾದಿಸಿದರು ಎಂಬುದು ಪ್ರಶ್ನೆ. ಆದರೆ, ಭಾಟಿ ಹೇಳುವ ಪ್ರಕಾರ ಈ ಕಾರುಗಳು ಅವರದ್ದಲ್ಲ. ಬದಲಾಗಿ ಕ್ಷೇತ್ರದ ಜನರೇ ತಮ್ಮ ಕಾರುಗಳನ್ನು ತಂದು ಪ್ರಚಾರಕ್ಕೆ ಸಹಾಯ ಮಾಡುತ್ತಿದ್ದಾರಂತೆ.

ಈಗ ಜಾತಿ ಯಾಕೆ ಬೇಕು ಎನ್ನುವ ಜಾತ್ಯಾತೀತ ನಾಯಕ

ರಾಜಸ್ಥಾನದ ಬಾರ್ಮೆರ್ ಕ್ಷೇತ್ರದಲ್ಲಿ ಜಾಟ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂದಹಾಗೆ ರವೀಂದ್ರ ಸಿಂಗ್ ಭಾಟಿ ಜಾಟ್ ಅಲ್ಲ, ಬದಲಾಗಿ ಅಲ್ಪಸಂಖ್ಯಾತ ರಾಜಪೂತ್ ಸಮುದಾಯದವರು. ಈ ಜಾತಿ ವಿಚಾರ ಅವರಿಗೆ ಹಿನ್ನಡೆ ಆಗಲ್ಲವಾ? ಪತ್ರಕರ್ತರು ಅವರ ಜಾತಿಯ ವಿಚಾರ ಎತ್ತಿದರೆ ಭಾಟಿ ಕೇಳುವುದು ಇದು: ‘ಈಗ ಜಾತಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವ ಸಮಯ ಅಲ್ಲವಾ ಇದು?’.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ