Viral Video: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್

| Updated By: Rakesh Nayak Manchi

Updated on: Jun 30, 2022 | 10:25 AM

ಚಿನ್ನದ ಸರ ಸಾಗಾಣಿಕೆ ಮಾಡುತ್ತಿರುವ ಇರುವೆಗಳ ವಿಡಿಯೋ ವೈರಲ್ ಆಗುತ್ತಿದೆ. ಯಾವ ಐಪಿಸಿ ಅಡಿ ಅವುಗಳ ವಿರುದ್ಧ ಕೇಸ್ ಬುಕ್ ಮಾಡುವುದು ಎಂಬುದು ಪ್ರಶ್ನೆಯಾಗಿದೆ. ಮನರಂಜನೆಯ ವಿಡಿಯೋ ಇಲ್ಲಿದೆ ನೋಡಿ.

Viral Video: ಕ್ಯಾಮಾರಾ ಕಣ್ಣಿಗೆ ಬಿದ್ದ ಚಿನ್ನದ ಸರ ಸಾಗಾಣಿಕದಾರರು: ಇರುವೆಗಳ ಸಾಹಸದ ವಿಡಿಯೋ ವೈರಲ್
ಚಿನ್ನದ ಸರ ಒಯ್ಯುತ್ತಿರುವ ಇರುವೆಗಳು
Follow us on

ಇರುವೆಗಳು ಭಾರ ಎತ್ತುವುದು ಹೊಸದೇನಲ್ಲ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸುತ್ತಾ ಕೀಟ, ಕೊಳೆತ ಸಣ್ಣ ಜೀವಿಗಳ ಭಾಗಗಳನ್ನು ಎಳೆದೊಯ್ಯುವುದುನ್ನು ನೋಡುತ್ತಿರುತ್ತೇವೆ. ಆದರೆ ಆಶ್ಚರ್ಯದ ಸಂಗತಿ ಎಂದರೆ ಇರುವೆಗಳು ಚಿನ್ನದ ಸರವನ್ನೇ ಕೊಂಡೊಯ್ಯುವ (Ants Carry Gold Chain) ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿರುವ ವಿಡಿಯೋದಲ್ಲಿರುವಂತೆ, ಒಡೆದುಹೋಗಿರುವ ನೆಲದ ಪಕ್ಕದಿಂದಲೇ ಕಪ್ಪು ಬಣ್ಣದ ಇರುವೆಗಳು ಚಿನ್ನದ ಸರವನ್ನು ಕೊಂಡೊಯ್ಯುತ್ತಿರುವುದನ್ನು ಕಾಣಬಹುದು. ಭಾರವಾದ ವಸ್ತುವೊಂದನ್ನು ತಳ್ಳುವಾಗ ಮನುಷ್ಯರು ಯಾವ ರೀತಿ ನಿಂತು ತಳ್ಳುತ್ತಾರೋ ಅದೇ ರೀತಿ ಒಂದಷ್ಟು ಇರುವೆಗಳು ಮುಂಭಾಗದಿಂದ ಸರವನ್ನು ಎಳೆಯುತ್ತಿದ್ದರೆ ಮತ್ತೊಂದಷ್ಟು ಇರುವೆಗಳು ತಳ್ಳುವುದನ್ನು ವಿಡಿಯೋ(Video)ದಲ್ಲಿ ನೋಡಬಹುದು.

ಇದನ್ನೂ ಓದಿ: Viral Video: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇರುವೆಗಳು ಚಿನ್ನದ ಸರವನ್ನು ಎಳೆದೊಯ್ಯುವ ವಿಡಿಯೋವನ್ನು ಹಂಚಿಕೊಂಡಿದ್ದು, “ಸಣ್ಣ ಚಿನ್ನದ ಕಳ್ಳಸಾಗಣೆದಾರರು, ಪ್ರಶ್ನೆಯೆಂದರೆ, IPC ಯ ಯಾವ ಸೆಕ್ಷನ್ ಅಡಿಯಲ್ಲಿ ಅವರನ್ನು ಬುಕ್ ಮಾಡಬಹುದು?” ಎಂದು ಹಾಸ್ಯಾಸ್ಪವಾಗಿ ಶೀರ್ಷಿಕೆ ನೀಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇರುವೆಗಳ ಚಿನ್ನ ಸಾಗಾಣಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, 1.43 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು 4 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಳಕೆದಾರರೊಬ್ಬರು, “ಮೊದಲು ಅವುಗಳ ಲಿಂಗವನ್ನು ಗುರುತಿಸಬೇಕು. ಹೆಣ್ಣಾಗಿದ್ದರೆ ಅದನ್ನು ಕಾಪಾಡಿಕೊಳ್ಳುವುದು ಮತ್ತು ಸ್ಥಾನಮಾನದೊಂದಿಗೆ ಬದುಕುವುದು ಅವುಗಳ ಹಕ್ಕು. ಪುರುಷರಿಗಾದರೆ, ಪ್ರಕರಣ ದಾಖಲಿಸುವ ಅಗತ್ಯವಿಲ್ಲ, ಕೆಲವು ರಾಜ್ಯ ಪೊಲೀಸರನ್ನು ಸಂಪರ್ಕಿಸಿ ಮತ್ತು ಅವರು ಸ್ಥಳದಲ್ಲೇ ಎನ್ಕೌಂಟರ್ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಆನೆಯ ಆಟಕ್ಕೆ ಸುಸ್ತಾದ ರೂಪದರ್ಶಿ, ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ

Published On - 10:25 am, Thu, 30 June 22