ಹಳ್ಳಿಮದುವೆಯ ಕಾರಂಜಿಯಲ್ಲಿ ತಟ್ಟೆಗಳನ್ನು ತೊಳೆದುಕೊಂಡ ಅತಿಥಿಗಳು

| Updated By: ಶ್ರೀದೇವಿ ಕಳಸದ

Updated on: Oct 21, 2022 | 5:49 PM

Village Wedding : ಸದ್ಯ ಇಲ್ಲಿಯೇ ನಿಂತು ಗಾರ್ಗಲ್​ ಮಾಡಿಲ್ಲವಲ್ಲ ಎಂದು ತಮಾಷೆ ಮಾಡಿದ್ದಾರೆ. ತಾವು ಉಂಡ ತಟ್ಟೆಗಳನ್ನು ತಾವೇ ತೊಳೆದಿದ್ದಾರಲ್ಲ ಅದನ್ನು ಗಮನಿಸಿ ಎಂದು ಇನ್ನೂ ಕೆಲವರು ಸಮಜಾಯಿಷಿ ನೀಡಿದ್ದಾರೆ.

ಹಳ್ಳಿಮದುವೆಯ ಕಾರಂಜಿಯಲ್ಲಿ ತಟ್ಟೆಗಳನ್ನು ತೊಳೆದುಕೊಂಡ ಅತಿಥಿಗಳು
At Village Wedding Guests Wash Their Plates in Fountain
Follow us on

Viral Video : ಈ ವಿಡಿಯೋ ನೋಡಿದ ಯಾರಿಗೂ ನಗು ಬರಬಹುದು. ಆದರೆ ಹಳ್ಳಿಗರಿಗೆ ಏನು ಗೊತ್ತು ಮದುವೆ ಮನೆಯಲ್ಲಿದ್ದ ಕಾರಂಜಿ ಅಲಂಕಾರಕ್ಕೆ ಎಂದು? ಸ್ವಾವಲಂಬಿಯಾದ ಹಳ್ಳಿಗರು ಏನಿದ್ದರು ಸಾದಾ ಸೀದಾ ಸ್ವಚ್ಛ. ಉಂಡ ತಕ್ಷಣ ತಟ್ಟೆಗಳನ್ನು ತೊಳೆದಿಡಲು ನೀರು ಹುಡುಕಿದ್ದಾರೆ. ಎದುರಿಗೆ ಕಾರಂಜಿ ಕಂಡಿದೆ ಭರಭರನೆ ತಟ್ಟೆ ತೊಳೆದಿದ್ದಾರೆ. ಅದರ ಬದಲಾಗಿ ಎಲ್ಲೆಂದರಲ್ಲಿ ಎಂಜಲು ತಟ್ಟೆಗಳನ್ನು ಇಟ್ಟು ಹೋಗಿಲ್ಲವಲ್ಲ? ವೈರಲ್ ಆಗಿರುವ ಈ ವಿಡಿಯೋ ಅನ್ನು ಅಕ್ಟೋಬರ್ 18ರಂದು ಟ್ವೀಟ್​ ಮಾಡಲಾಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಮ್ಮ ತಟ್ಟೆಗಳನ್ನು ಸ್ವತಃ ತೊಳೆಯುತ್ತಿದ್ದಾರೆ ಎನ್ನುವ ಅಂಶವನ್ನು ಗಮನಿಸಿ ಪ್ರಶಂಸಿಸಿದ್ದಾರೆ. ಇನ್ನೂ ಕೆಲವರು, ಸದ್ಯ ಅಲ್ಲಿಯ ಗಾರ್ಗಲ್​ ಮಾಡಲಿಲ್ಲವಲ್ಲ ಎಂದು ತಮಾಷೆಯನ್ನೂ ಮಾಡಿದ್ದಾರೆ. @JaikyYadav16 ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ನಗರಪ್ರದೇಶಗಳಿಗೆ ಹೋಲಿಸಿದರೆ ಹಳ್ಳಿಗರಲ್ಲಿ ಸಂಸ್ಕೃತಿಯ ವಿಷಯವಾಗಿ ತಿಳಿವಳಿಕೆ ಮತ್ತು ಬುದ್ಧಿವಂತಿಕೆ ಹೆಚ್ಚು ಇದೆ ಎಂದು ಹೇಳಿದ್ದಾರೆ ಕೆಲವರು. ನಗರಪ್ರದೇಶದ ಮಂದಿ ನಯನಾಜೂಕು, ಅಲಂಕಾರ, ಆಡಂಬರದ ನೆಪದಲ್ಲಿ ಮನಸ್ಸನ್ನು ಬರಡಾಗಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ಇನ್ನೂ ಕೆಲವರು.

ಹೀಗೆ ತಟ್ಟೆ ತೊಳೆದಿದ್ದು ಖಂಡಿತ ಮಹಾಪರಾಧವಂತೂ ಅಲ್ಲವೇ ಅಲ್ಲ. ಹೀಗಲ್ಲ ಹೀಗೆ ಎಂದು ಆಧುನಿಕತೆಯ ಬಗ್ಗೆ ತಿಳಿ ಹೇಳಿದರೆ ಹೌದಾ, ನಮಗಿದೆಲ್ಲ ಗೊತ್ತಿರಲಿಲ್ಲ. ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದು ಮೆಲ್ಲ ನಗೆಬೀರುತ್ತಾರೆ ಇಲ್ಲವೆ, ಆಗಾಗ ಈ ಘಟನೆಯನ್ನು ಮೆಲುಕು ಹಾಕಿ ನಕ್ಕು ಹಗುರಾಗುತ್ತಾರೆ; ಮುಗ್ಧರು ಮತ್ತು ಪ್ರಬುದ್ಧರಾದ ಹಳ್ಳಿಗರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

Published On - 5:39 pm, Fri, 21 October 22