Viral Video: ಹೀಗೇ ತಾನೆ ನೀರು ಕುಡಿಯೋದು?

| Updated By: ಶ್ರೀದೇವಿ ಕಳಸದ

Updated on: Aug 15, 2022 | 11:40 AM

Baby Elephant : ನೋಡ್ತಾ ನೋಡ್ತಾ ಎಲ್ಲ ತಾನಾಗೇ ಬರುತ್ತೆ. ಈ ಮರಿಯಾನೆಯ ವಿಡಿಯೋ ನೋಡಿ, 1.1 ಮಿಲಿಯನ್​ ನೆಟ್ಟಿಗರ ಮನಕದ್ದಿದೆ.

Viral Video: ಹೀಗೇ ತಾನೆ ನೀರು ಕುಡಿಯೋದು?
Source : Twitter
Follow us on

Viral Video : ತಾಯಿಆನೆಯೊಂದಿಗೆ ಮರಿಯಾನೆ ನೀರು ಕುಡಿಯಲು ಕೆರೆಗೆ ಬಂದಿದೆ. ತಾಯಿಆನೆ ತನ್ನ ಪಾಡಿಗೆ ತಾನು ನೀರು ಕುಡಿಯುತ್ತಿದೆ. ಮರಿಯಾನೆ ತಾನೂ ಸೊಂಡಿಲಿನಿಂದ ನೀರು ಕುಡಿಯಲು ಯತ್ನಿಸುತ್ತಿದೆ. ಮೈಯೆಲ್ಲ ನೀರು ಎರಚಾಡಿಕೊಳ್ಳುತ್ತ ಪುಟ್ಟ ಸೊಂಡಿಲಿನಲ್ಲಿ ಹಿಡಿಸಿದಷ್ಟು ನೀರು ಕುಡಿಯುತ್ತಿರುವ ಈ ವಿಡಿಯೋ ಬಹಳ ಮುದ್ದು ಬರುವಂತಿದೆ. ಇದು ಅಂತರ್ಜಾಲದಲ್ಲಿ ಸಾಕಷ್ಟು ನೆಟ್ಟಿಗರ ಮನಸ್ಸನ್ನು ಕದ್ದಿದೆ. ರಾಬರ್ಟ್​ ಇ ಫುಲ್ಲರ್ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. 1,400 ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ.

ವಿಡಿಯೋ ನೋಡಿ.

ಪ್ರಕೃತಿಯಲ್ಲಿ ಎಲ್ಲವೂ ಎಷ್ಟು ಸಹಜವಾಗಿ ವಿನ್ಯಾಸಗೊಂಡಿದೆಯಲ್ಲ? ಪ್ರತಿಯೊಂದು ಜೀವಿಗೂ ನಿಸರ್ಗದತ್ತವಾಗಿ ತಮ್ಮನ್ನು ತಾವು ನೋಡಿಕೊಳ್ಳುವುದು ಒಲಿದುಬಿಡುತ್ತದೆ. ಸೊಂಡಿಲಿಗೆ ತ್ರಾಣ ಒದಗುವ ತನಕ ಮರಿಯಾನೆ ಹೀಗೇ ಚೆಲ್ಲಾಟವಾಡಿಕೊಂಡೇ ನೀರು ಕುಡಿಯುತ್ತಿರುತ್ತದೆ. ನಿಮ್ಮ ಮನೆಯ ಮಗು ನೀರು ಕುಡಿಯಲು ಹಟ ಮಾಡಿದಾಗ ಈ ವಿಡಿಯೋ ತೋರಿಸಿ. ಮಗುವಿನ ಏನು ಪ್ರತಿಕ್ರಿಯಿಸಬಹುದು?

ಇಂಥ ಮತ್ತಷ್ಟು ವೈರಲ್ ನ್ಯೂಸ್ ಗಾಗಿ ಕ್ಲಿಕ್ ಮಾಡಿ 

Published On - 11:39 am, Mon, 15 August 22