Viral Video: ಕೆಸರಲ್ಲಿ ತುಂಟಾಟವಾಡುತ್ತಿರುವ ಈ ಆನೆಮರಿಯನ್ನು ನೋಡಿದರೆ ಮುದ್ದಾಡಬೇಕೆನಿಸೋದು ಗ್ಯಾರಂಟಿ!

| Updated By: ಸುಷ್ಮಾ ಚಕ್ರೆ

Updated on: Jul 26, 2021 | 8:27 PM

ಮುದ್ದಾದ ಆನೆ ಮರಿಯೊಂದು ಕೆಸರಿನಲ್ಲಿ ಮಜಾ ಮಾಡುತ್ತಿರುವ ದೃಶ್ಯ ಎಲ್ಲರ ಮನ ಗೆದ್ದಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

Viral Video: ಕೆಸರಲ್ಲಿ ತುಂಟಾಟವಾಡುತ್ತಿರುವ ಈ ಆನೆಮರಿಯನ್ನು ನೋಡಿದರೆ ಮುದ್ದಾಡಬೇಕೆನಿಸೋದು ಗ್ಯಾರಂಟಿ!
ಕೆಸರಾಟವಾಡುತ್ತಿರುವ ಆನೆಮರಿ
Follow us on

ಮನುಷ್ಯರ ಮಕ್ಕಳೇ ಇರಲಿ, ಪ್ರಾಣಿಗಳ ಮರಿಗಳೇ ಇರಲಿ. ಅವುಗಳ ಆಟವನ್ನು, ತುಂಟಾಟವನ್ನು ನೋಡೋದೇ ಚೆಂದ. ನಾಯಿಮರಿಗಳು, ಬೆಕ್ಕಿನ ಮರಿ, ಆನೆ ಮರಿ, ಹಂದಿ ಮರಿ, ಕೋತಿ ಮರಿ ಹೀಗೆ ಮರಿಗಳು ಯಾವುದೇ ಇರಲಿ; ಅವುಗಳು ಆಟವಾಡುತ್ತಿದ್ದರೆ ಅದನ್ನು ನೋಡಲು ಎರಡು ಕಣ್ಣುಗಳು ಸಾಲದು. ಆನೆ ಮರಿಯೊಂದು ತನ್ನ ಅಮ್ಮನ ಜೊತೆ ಕೆಸರಾಟ ಆಡುತ್ತಿರುವ ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದರೆ ನೀವು ಖುಷಿಯಾಗುತ್ತೀರ. ಮುದ್ದಾದ ಆನೆ ಮರಿಯೊಂದು ಕೆಸರಿನಲ್ಲಿ ಮಜಾ ಮಾಡುತ್ತಿರುವ ದೃಶ್ಯ ಎಲ್ಲರ ಮನ ಗೆದ್ದಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಸರು ತುಂಬಿದ ನೀರಿನ ಹೊಂಡದಲ್ಲಿ ಬಿದ್ದು ಹೊರಳಾಡುತ್ತಿರುವ ಆನೆ ಮರಿ ಸೊಂಡಿಲಿನಿಂದ ಕೆಸರನ್ನು ಮೈಮೇಲೆ ಎರಚಿಕೊಳ್ಳುತ್ತಾ ಇರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.


ಶೆಲ್ಡ್ರಿಕ್ ವೈಲ್ಡ್​ಲೈಫ್ ಎಂಬ ಟ್ವಿಟ್ಟರ್​ ಪೇಜ್​ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದುವರೆಗೂ ಸುಮಾರು 20 ಸಾವಿರ ಜನರಿಂದ ವೀಕ್ಷಿಸಲ್ಪಟ್ಟಿದೆ. ಆನೆಗಳ ಕೆಸರಾಟದ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ…

ಇದನ್ನೂ ಓದಿ: Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Baby Elephants Enjoying Playing in Mud This Adorable Video Will Make You Smile Trending Video)

Published On - 8:25 pm, Mon, 26 July 21