ನನ್ನಮ್ಮನೇ ಬೇಕು ನಂಗೆ; ಅವರು ಎತ್ತಿಕೊಳ್ಳಲು ಹೋದರಿದಕೆ ಅಳುವು ಬರುವುದು

Mother and Baby : ಬೇರೆಯವರು ಎತ್ತಿಕೊಂಡರೆ ಎಳೇಮಗು ಹೇಗೆ ರಚ್ಚೆ ಹಿಡಿಯುವುದೋ ಥೇಟ್​ ಹಾಗೇ ಈ ಮರಿಕೋತಿಯೂ. ನೋಡಿ ವೈರಲ್ ಆಗಿರುವ ಈ ವಿಡಿಯೋ.

ನನ್ನಮ್ಮನೇ ಬೇಕು ನಂಗೆ; ಅವರು ಎತ್ತಿಕೊಳ್ಳಲು ಹೋದರಿದಕೆ ಅಳುವು ಬರುವುದು
ನಮ್ಮಮ್ಮಾ ಬೇಕು ನಂಗೆ
Edited By:

Updated on: Jan 05, 2023 | 1:01 PM

Viral Video : ಲೋಕಕಾಣದ ಮಗುವಿಗೆ ಅಮ್ಮನೇ ಲೋಕ. ಅವಳ ಬೆಚ್ಚಗಿನ ಸ್ಪರ್ಶ, ಸಾಮೀಪ್ಯ ಅದಕ್ಕೆ ಭದ್ರಭಾವವನ್ನು ಕೊಡುತ್ತದೆ. ಹಾಗಾಗಿ ಅರೆಗಳಿಗೆಯೂ ಅದು ಅಮ್ಮನನ್ನು ಬಿಟ್ಟಿರಲಾರದು. ಅಮ್ಮ ತನ್ನ ಕೆಲಸಗಳನ್ನು ಮಾಡಿಕೊಳ್ಳಲೂ ಬಿಡದಷ್ಟು ಅಂಟಿಕೊಂಡಿರುತ್ತದೆ. ಆದರೆ ಇಲ್ಲಿರುವ ಈ ಅಮ್ಮ ಮಗುವಿನ ವಿಡಿಯೋ ನೋಡಿ. ಮರಿಕೋತಿಯೊಂದು ತನ್ನ ಸಾಕುತಾಯಿಯನ್ನು ಅರೆಕ್ಷಣವೂ ಬಿಟ್ಟಿರಲಾರೆನೆಂದು ಹಟ ಮಾಡುತ್ತಿದೆ.

ಈ ವಿಡಿಯೋ ಅನ್ನು ಈತನಕ ಸುಮಾರು 8,400 ಜನರು ನೋಡಿದ್ದಾರೆ. ಇದು ಮರಿಕೋತಿ ಎನ್ನಲು ಸಾಧ್ಯವೇ ಇಲ್ಲ. ಥೇಟ್ ಮಗುವಿನಂತೆಯೇ ವರ್ತಿಸುತ್ತಿದೆ. ಆಕೆಯೇ ತನ್ನ ನಿಜವಾದ ಅಮ್ಮನೆಂಬಂತೆ ಮಾಡುತ್ತಿದೆ ಎನ್ನುತ್ತಿದ್ದಾರೆ ಅನೇಕರು. ಹೌದು, ಪ್ರೀತಿಯಿಂದ ಅಮ್ಮನಂತೆ ನೋಡಿಕೊಂಡ ಯಾರ ಬಗ್ಗೆಯೂ ಹೀಗೆಯೇ ಭಾವ ಹೊಮ್ಮುವುದಲ್ಲವೆ? ಪ್ರಾಣಿಗಳಿಗೂ ಅಷ್ಟೇ, ಮನುಷ್ಯರಿಗೂ ಅಷ್ಟೇ.

ಇದನ್ನೂ ಓದಿ : ಬೇಕೇ ಮ್ಯಾಜಿಕ್ ಪ್ಯಾಂಟ್? ಕಳ್ಳತನದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆನ್ನುವವರಿಗೆ ಮಾತ್ರ!

ಈ ವಿಡಿಯೋದಲ್ಲಿ ಒಬ್ಬರು, ಈ ಮರಿಯನ್ನು ಎತ್ತಿಕೊಳ್ಳಲು ನೋಡುತ್ತಾರೆ. ಆದರೆ ಅಮ್ಮನನ್ನು ಬಿಡಲಾರೆ ಎಂಬಂತೆ ಆಕೆಯತ್ತಲೇ ಬಾಗುತ್ತದೆ ಮರಿಕೋತಿ. ಒತ್ತಾಯಿಸಿದಾಗ ಅಳಲು ಶುರು ಮಾಡುತ್ತದೆ. ಅಮ್ಮನೆದೆಗೆ ಮರಳುತ್ತಿದ್ದಂತೆ ಶಾಂತಭಾವವನ್ನು ಅನುಭವಿಸುತ್ತದೆ. ಅಮ್ಮನೆಂದರೆ ಆಯಸ್ಕಾಂತದಂತೆ. ಈ ಬಂಧ ಯಾವಾಗಲೂ ಅನನ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:34 pm, Thu, 5 January 23