ಬೆಂಗಳೂರು: 2021ರ ಪ್ರಸಿದ್ಧ ಹಾಡುಗಳಲ್ಲಿ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ (Pushpa) ಸಿನಿಮಾದ ಶ್ರೀವಲ್ಲಿ ಹಾಡು ಕೂಡ ಒಂದು. ಈ ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಅನ್ನು ಹಲವರು ರೀಲ್ಸ್ ಮಾಡಿದ್ದರು. ಇದೀಗ ಈ ಶ್ರೀವಲ್ಲಿ ಹಾಡು ಯಕ್ಷಗಾನಕ್ಕೂ ಕಾಲಿಟ್ಟಿದೆ. ಹಲವಾರು ಸೆಲೆಬ್ರಿಟಿಗಳು ಕೂಡ ಶ್ರೀವಲ್ಲಿ ಹಾಡಿಗೆ ನೃತ್ಯ ಮಾಡಿ, ರೀಲ್ಸ್ ಅಪ್ಲೋಡ್ ಮಾಡಿದ್ದರು. ದಕ್ಷಿಣ ಕನ್ನಡದ ಪ್ರಸಿದ್ಧ ಯಕ್ಷಗಾನ ಮೇಳವಾದ ಬಪ್ಪನಾಡು ಮೇಳದ ಯಕ್ಷಗಾನ ಕಲಾವಿದರು ರಂಗಸ್ಥಳದ ಮೇಲೆ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದಾರೆ.
ಮಂಗಳೂರಿನ ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟವೊಂದರಲ್ಲಿ ಭಾಗವತರು ಶ್ರೀವಲ್ಲಿ ಹಾಡಿನ ಕನ್ನಡ ಅವತರಣಿಕೆಯನ್ನು ಹಾಡುತ್ತಾರೆ. ಇದಕ್ಕೆ ಯಕ್ಷಗಾನ ಕಲಾವಿದ ಶ್ರೀವಲ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ರಂಗಸ್ಥಳದಲ್ಲಿ ಕುಣಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral video of a Yakshagana artist dancing to the popular ‘Srivalli’ song from Allu Arjun’s Pushpa movie. ??@PushpaMovie @alluarjun @iamRashmika #AlluArjun #PushpaTheRise #Pushpa pic.twitter.com/fqYwITnL0E
— Mangalore City (@MangaloreCity) February 21, 2022
ಬಪ್ಪನಾಡು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀವಲ್ಲಿ ಹಾಡಿನ ಸ್ಟೆಪ್ ಅನ್ನು ಯಕ್ಷಗಾನದ ನಡುವೆ ಪ್ರದರ್ಶನ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯಕ್ಷಗಾನ ಕಲಾವಿದರು ತಮ್ಮ ವೇಷಭೂಷಣಗಳನ್ನು ಧರಿಸಿ, ವೇದಿಕೆಯ ಮೇಲೆ ಯಕ್ಷಗಾನ ಪ್ರದರ್ಶಿಸಿದ್ದಾರೆ. ಈ ನೃತ್ಯವನ್ನು ನೋಡಿ ಪ್ರೇಕ್ಷಕರು ನಕ್ಕು ಸಂತಸಪಟ್ಟಿದ್ದಾರೆ.
ಇದನ್ನೂ ಓದಿ: Viral Video: ಬ್ಯಾಗ್ ಕದಿಯಲು ಬಂದ ಕಳ್ಳರಿಗೆ ಮಣ್ಣು ಮುಕ್ಕಿಸಿದ ಯುವತಿ; ಈ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ!
Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು