ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Jan 16, 2023 | 5:14 PM

Cats : ನೀನೇನೋ ಹೆಲ್ಮೆಟ್​ ಹಾಕ್ಕೊಂಡಿದೀಯಾ ಆ ಎರಡೂ ಬೆಕ್ಕುಗಳು ಏನು ಮಾಡಬೇಕು ಎಂದು ಕೆಲವರು. ಈ ವಿಡಿಯೋ ಆತಂಕ ಹುಟ್ಟಿಸುತ್ತಿದೆ ಎಂದು ಹಲವರು. ನನ್ನ ಬೆಕ್ಕೂ ನನ್ನನ್ನು ಹೀಗೇ ನಂಬಬಾರದಾ? ಎಂದು ಒಬ್ಬರು. ನೀವೇನಂತೀರಿ?

ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್
ತನ್ನ ಬೆಕ್ಕುಗಳೊಂದಿಗೆ ಬೈಕ್ ಸವಾರಿ ಮಾಡುತ್ತಿರುವ ಬೆಂಗಳೂರಿನ ವ್ಯಕ್ತಿ
Follow us on

Viral Video : ಸಾಕುಪ್ರಾಣಿಗಳೊಂದಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದೆಂದರೆ ದೊಡ್ಡ ಸಾಹಸ! ಸಾಕಷ್ಟು ಭದ್ರತೆಯೊಂದಿಗೆ ಮತ್ತು ಜೋಪಾನದಿಂದ ಅವುಗಳನ್ನು ಕರೆದುಕೊಂಡು ಬರಬೇಕಾಗುತ್ತದೆ. ಏಕೆಂದರೆ ಪರಿಸರ ಬದಲಾದಾಗ ಪ್ರಾಣಿಗಳು ಸಹಜವಾಗಿ ಭಯಕ್ಕೆ ಬೀಳುತ್ತವೆ. ಆಗ ಅವುಗಳ ವರ್ತನೆ ಇತರರಿಗೆ ಅಪಾಯ ತಂದೊಡ್ಡಬಹುದು ಅಥವಾ ತಾವೇ ಅಪಾಯಕ್ಕೂ ಸಿಲುಕಿಕೊಳ್ಳಬಹುದು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ಮೇಲೆ ಏನನ್ನಿಸಬಹುದು?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರೀತಿಸುವುದು, ಪೋಷಿಸುವುದು ಎಂದರೆ ಪೂರ್ತಿ ಗಮನ ಕೊಡುವುದು. ತನ್ನತನವನ್ನೂ ಬಿಟ್ಟು ಬದುಕುವುದು. ಹೀಗೆ ಬದುಕುವುದು ಪರಸ್ಪರವಾಗಿದ್ದಾಗ ಮಾತ್ರ ಇಂಥ ಬಂಧಗಳು ಸೃಷ್ಟಿಗೊಳ್ಳುತ್ತವೆ. ಅದೆಷ್ಟೋ ಬೆಕ್ಕು, ನಾಯಿಗಳ ವಿಡಿಯೋಗಳನ್ನು ಈತನಕ ನೋಡಿದ್ದೀರಿ. ಆದರೆ ಇಂಥ ವಿಡಿಯೋ?

ಇದನ್ನೂ ಓದಿ : ‘ಹಾಂ ಈಗ ವೈರ್​ ಎಳೀ ನೋಡೋಣ’ ಸಹಾಯಕ ಎಲೆಕ್ಟ್ರಿಷಿಯನ್​ ಮಿಸ್ಟರ್​ ಬೆಕ್ಕಣ್ಣ

ಬೆಂಗಳೂರಿನ ಹೊರವಲಯದಲ್ಲಿ ಈ ಬೈಕ್​ಸವಾರ ತನ್ನ ಎರಡೂ ಸಾಕುಬೆಕ್ಕುಗಳೊಂದಿಗೆ ಹೀಗೆ ಸವಾರಿ ಮಾಡುತ್ತಿದ್ದಾನೆ. ಇವುಗಳನ್ನು ಯಾವುದೇ ಬಾಸ್ಕೆಟ್​ನಲ್ಲಿ ಹಾಕದೆ ಬೆನ್ನಿಗೆ ನೇತುಹಾಕಿಕೊಂಡಿರುವ ಬ್ಯಾಗ್ ಮೇಲೆ ಒಂದನ್ನು, ಇನ್ನೊಂದನ್ನು ಟ್ಯಾಂಕ್​ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾನೆ. ಈ ಮೂವರಲ್ಲಿಯೂ ಪರಸ್ಪರ ಇರುವ ನಂಬಿಕೆ, ವಿಶ್ವಾಸ, ಧೈರ್ಯ, ಪ್ರೀತಿ, ಬಂಧ ದೊಡ್ಡದೇ! ಇದು ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡುವ ಪಾಠವಂತೂ ಅಲ್ಲ.

ಇದನ್ನೂ ಓದಿ : ಗಾಝಿಯಾಬಾದ್​ನ ಅಪಾರ್ಟ್​ಮೆಂಟ್​ನಲ್ಲಿ ಬೀದಿನಾಯಿಗಳಿಗಾಗಿ ಹೋರಾಟ

ಹೀಗೆ ಈ ಮೂವರೂ ಯಾವುದೋ ಕಾಡಿನಲ್ಲಿ, ಖಾಲೀ ರಸ್ತೆಯಲ್ಲಿ ಹೋಗುತ್ತಿದ್ದರೆ ಅಷ್ಟೊಂದು ಸಮಸ್ಯೆ ಇರುತ್ತಿರಲಿಲ್ಲ. ಆದರೆ ಹೀಗೆ ಹೆದ್ದಾರಿಯಲ್ಲಿ ಪ್ರಯಾಣಿಸುವುದೆಂದರೆ ಆಪತ್ತು ತಂದುಕೊಳ್ಳುವುದೇ ತಾನೆ? ಹಾಗಾಗಿ ಈ ಪ್ರಯಾಣ ಸುರಕ್ಷಿತವೇ? ಎನ್ನುವ ಪ್ರಶ್ನೆ ನೋಡಿದ ಯಾರಲ್ಲೂ ಉಂಟಾಗುತ್ತದೆ.

ಇದನ್ನೂ ಓದಿ : ತನ್ನ ತಲೆಯನ್ನು ತಾನೇ ಬೋಳಿಸಿಕೊಂಡ ಕ್ಷೌರಿಕ; ಕ್ಯಾನ್ಸರ್​ ಪೀಡಿತ ಮಹಿಳೆಗೆ ಭಾವನಾತ್ಮಕ ಸ್ಪಂದನೆ

ಈತನಕ 1.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸಾಕಷ್ಟು ಜನ ಬೇಸರ, ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ. ಸವಾರನೇನೋ ಹೆಲ್ಮೆಟ್ ಹಾಕಿಕೊಂಡಿದ್ದಾನೆ. ಬೆಕ್ಕುಗಳಿಗೆ ಯಾವುದೇ ರೀತಿಯ ಸುರಕ್ಷಾ ಸಾಧನವಿಲ್ಲವಲ್ಲ, ಏನಾದರೂ ಹೆಚ್ಚೂ ಕಡಿಮೆ ಆದರೆ ಏನು ಗತಿ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲ ಜನ ಮುದ್ದಿನಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ತಮಿಳುನಾಡಿನ ಸಮುದ್ರ ತೀರಕ್ಕೆ ಬಂದ ‘ಲಂಟಾನಾ ಆನೆಗಳು’! ನೋಡಿ ವೈರಲ್ ವಿಡಿಯೋ

ನೋಡಲು ಬಹಳ ಮುದ್ದಾಗಿದೆ ಈ ವಿಡಿಯೋ. ಆದರೆ ಈ ರೀತಿಯ ಪ್ರಯಾಣ ನಿಜಕ್ಕೂ ನನಗೆ ಆತಂಕ ಹುಟ್ಟಿಸುತ್ತಿದೆ ಎಂದಿದ್ದಾರೆ ಒಬ್ಬರು. ನೀನೊಬ್ಬನೇ ಬೇಕಿದ್ದರೆ ಸಾಹಸ ಮಾಡು. ಇಂಥ ಮುಗ್ಧ ಪ್ರಾಣಿಗಳನ್ನು ವಿನಾಕಾರಣ ಸಾಹಸಕ್ಕೆ ಎಳೆಯಬೇಡ, ಅವುಗಳನ್ನು ಆಪತ್ತಿಗೆ ತಳ್ಳಬೇಡ ಎಂದಿದ್ದಾರೆ ಅನೇಕರು. ಅದರಲ್ಲೂ ಇದು ಹೆದ್ದಾರಿ, ಅಪಾಯದ ಅರಿವಿಲ್ಲವೆ ಈ ವ್ಯಕ್ತಿಗೆ? ಎಂದು ಬೈದಿದೆ ನೆಟ್​​ಮಂದಿ.

ಇದನ್ನೂ ಓದಿ : ಇಲ್ಲಿ ಕಚೋರಿ ತಿನ್ನಬೇಕೆಂದರೆ ರಸಾಯನಶಾಸ್ತ್ರ ಅಧ್ಯಯನ ಮಾಡುವುದು ಕಡ್ಡಾಯ!

ನನ್ನ ಬೆಕ್ಕು ಕೂಡ ನನ್ನನ್ನು ಇಷ್ಟೇ ನಂಬಬೇಕು ಎಂದಿದ್ದಾರೆ ಒಬ್ಬರು. ಒಂದೇ ಗಾಡಿಯಲ್ಲಿ ಮೂರು ಜನರ ಪ್ರಯಾಣ! ದಂಡ ಬೀಳುವುದು ಗ್ಯಾರಂಟಿ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇಂಥ ಚಳಿಯಲ್ಲಿ ಇಷ್ಟು ವೇಗದಲ್ಲಿ ಹೀಗೆ ಬೆಕ್ಕುಗಳನ್ನು ಕೂರಿಸಿಕೊಂಡು ಪ್ರಯಾಣಿಸುವುದು! ಪಾಪ ಎಂದಿದ್ದಾರೆ ಮಗದೊಬ್ಬರು. ಈ ಮೂವರಿಗಷ್ಟೇ ಅಲ್ಲ ಅಕ್ಕಪಕ್ಕದಲ್ಲಿ ಚಲಿಸುವವರಿಗೂ ಇದು ಅಪಾಯಕಾರಿಯೇ ಎಂದಿದ್ದಾರೆ ಇನ್ನೂ ಒಬ್ಬರು.

ಆದರೆ ಪ್ರೀತಿ ಇದ್ದಲ್ಲಿ ಯಾವ ಭಯವೂ ಇರುವುದಿಲ್ಲವೆಂಬಂತೆ ಈ ಮೂವರು ಚಲಿಸುತ್ತಿದ್ದಾರೆ!

ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:19 pm, Mon, 16 January 23