Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ

| Updated By: ಸುಷ್ಮಾ ಚಕ್ರೆ

Updated on: Dec 20, 2021 | 1:51 PM

Randeep Hooda: ರಣದೀಪ್ ಹೂಡಾ ಸಫಾರಿಗೆ ಹೋದಾಗ ತೆಗೆದ ಕಾಡೆಮ್ಮೆಯನ್ನು ಬೇಟೆಯಾಡುವ ಹುಲಿಯ ಈ ವೀಡಿಯೊವನ್ನು ಪೋಸ್ಟ್ ಮಾಡಿದ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ
ರಣದೀಪ್ ಹೂಡಾ
Follow us on

ನೀವು ಬಾಲಿವುಡ್ ನಟ ರಣದೀಪ್ ಹೂಡಾ ಅವರನ್ನು ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಫಾಲೋ ಮಾಡುತ್ತಿದ್ದೀರಾ? ಹಾಗಾದರೆ, ಅವರು ಆಗಾಗ ಹಂಚಿಕೊಳ್ಳುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ತಾವು ಹೋದ ಕಡೆಯೆಲ್ಲ ಕಾಣುವ ಅಚ್ಚರಿಯ ವಿಷಯಗಳನ್ನು ರಣದೀಪ್ ಹೂಡಾ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಅವರು ಹಾಕುತ್ತಿರುತ್ತಾರೆ. ಇಂದು ರಣದೀಪ್ ಹೂಡಾ ಹಾಕಿರುವ ಹುಲಿಯ ವಿಡಿಯೋದ ಪೋಸ್ಟ್​ ಭಾರೀ ವೈರಲ್ ಆಗಿದೆ.

ಇಂದು ಬೆಳಗ್ಗೆ ನಟ ರಣದೀಪ್ ಹೂಡಾ ಇನ್​ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ ಎಂದು ಅವರು ಹ್ಯಾಷ್​ಟ್ಯಾಗ್‌ನಲ್ಲಿ ಹಾಕಿದ್ದಾರೆ.

ಕಾಡಿನಲ್ಲಿ ಹುಲಿ ರಸ್ತೆಗೆ ಅಡ್ಡಲಾಗಿ ಓಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಆ ಹುಲಿಯ ಹಿಂದೆಯೇ ಕ್ಯಾಮೆರಾವನ್ನು ತಿರುಗಿಸಲಾಗಿದ್ದು, ಹುಲಿ ಓಡಿಹೋಗಿ ಕಾಡೆಮ್ಮೆಯ ಮೇಲೆ ದಾಳಿ ಮಾಡಿದೆ. ಸಫಾರಿಗೆ ಹೋಗಿದ್ದ ರಣದೀಪ್ ಹೂಡಾ ಅವರ ಕಣ್ಣಮುಂದೆ ಹುಲಿಯೊಂದು ಕಾಡಿನಲ್ಲಿ ವೇಗವಾಗಿ ಓಡಿಹೋಗಿದೆ. ಅಷ್ಟೇ ವೇಗವಾಗಿ ಓಡುತ್ತಿದ್ದ ಕಾಡೆಮ್ಮೆಯನ್ನು ಬೆನ್ನತ್ತುವ ಹುಲಿ ಆ ಕಾಡೆಮ್ಮೆಯನ್ನು ತಿನ್ನುವ ಆಸೆಯಿಂದ ಅದರ ಹಿಂದೆ ಓಡಿ ಕಾಡಿನಲ್ಲಿ ಕಣ್ಮರೆಯಾಗುತ್ತದೆ.

ಈ ವೀಡಿಯೊವನ್ನು ಪೋಸ್ಟ್ ಮಾಡಿದ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಈ ನೈಜ ವಿಡಿಯೋಗೆ ಅಭಿಮಾನಿಗಳು ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ನಟ ಮಾತ್ರವಲ್ಲದೆ ಪ್ರಾಣಿ ಪ್ರೇಮಿಯೂ ಆಗಿರುವ ರಣದೀಪ್ ಹೂಡಾ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಆಗಾಗ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ

Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!