ಚೆನ್ನೈನ ಈ ಅಮ್ಮನಿಗೆ 90, ಮಗಳಿಗೆ 72; ಇವರೀಗ ಸ್ವಂತ ಉದ್ಯಮಿಗಳು

| Updated By: ಶ್ರೀದೇವಿ ಕಳಸದ

Updated on: Feb 08, 2023 | 11:24 AM

Chennai : ಈ ವಯಸ್ಸಿನಲ್ಲಿ ಈ ಅಜ್ಜಿ ಲಕ್ಷ್ಮೀಯ ಕನಸು ಸಾಕಾರಗೊಂಡಿದೆ. ಮಗಳು ಕಸ್ತೂರಿಗೆ ಈ ಉದ್ಯಮದಿಂದಾಗಿ ತಾನು ಸ್ವತಂತ್ರಳಾಗುತ್ತಿದ್ದೇನೆ ಎನ್ನುವ ಖುಷಿ ಆವರಿಸುತ್ತಿದೆ. ಒಮ್ಮೆ ನೋಡಿಕೊಂಡು ಬನ್ನಿ ಇವರ ಫಾರ್ಮ್​ ಸ್ಟೇ.

ಚೆನ್ನೈನ ಈ ಅಮ್ಮನಿಗೆ 90, ಮಗಳಿಗೆ 72; ಇವರೀಗ ಸ್ವಂತ ಉದ್ಯಮಿಗಳು
ತಾಯಿ ಮಗಳು ಲಕ್ಷ್ಮೀ ಮತ್ತು ಕಸ್ತೂರಿ
Follow us on

Viral News : ಕನಸಿಗೂ ವಯಸಿಗೂ ಸಂಬಂಧವೇ ಇಲ್ಲ. ಕನಸಿನೆಡೆ ಪ್ರಯತ್ನಿಸುತ್ತ ಹೋಗುವುದು ಮುಖ್ಯ. ಸಮಯ ಕೂಡುತ್ತಿದ್ದಂತೆ ಅದು ಸಾಕಾರಗೊಳ್ಳುತ್ತದೆ. ವಯಸ್ಸನ್ನು ಮರೆತು ಬದುಕಲು ಆ ಕನಸೇ ಆಧಾರವೂ ಆಗುತ್ತದೆ. ಇದಕ್ಕೆ ಸಾಕ್ಷಿ ಚೆನ್ನೈನ 90ರ ಅಮ್ಮ ಮತ್ತು 72ರ ಮಗಳು. ಈ ವಯಸ್ಸಿನಲ್ಲಿ ಇವರು ಉತ್ಸಾಹದಿಂದ ನಡೆಸುತ್ತಿರುವ ಫಾರ್ಮ್​ ಸ್ಟೇ ನೋಡಲು ಚೆನ್ನೈಗೆ ಹೋಗಬೇಕು.

ಸಾಂಪ್ರದಾಯಿಕ ಮನೆತನದಲ್ಲಿ ಬೆಳೆದ 90ರ ಲಕ್ಷ್ಮೀ ಅವರಿಗೆ ಮೊದಲಿನಿಂದಲೂ ಸ್ವಂತ ವ್ಯಾಪಾರ ಮಾಡುವ ತುಡಿತ ಇದ್ದೇ ಇತ್ತು. ಆ ಪ್ರಕಾರ ಗೃಹಕೈಗಾರಿಕೋದ್ಯಮದಲ್ಲಿ ತೊಡಗಿಕೊಂಡೇ ಬಂದರು. ಆದರೆ ಕೌಟುಂಬಿಕ ಜವಾಬ್ದಾರಿ ಮತ್ತು ಸಾಮಾಜಿಕ ನಿರ್ಬಂಧಗಳಿಂದಾಗಿ ಅವರು ತಮ್ಮ ಕನಸನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕ್ರಮೇಣ ಕೌಟುಂಬಿಕ ಜವಾಬ್ದಾರಿಗಳು ಕಳೆದಂತೆ ತಮ್ಮ ಕನಸಿಗೆ ಇಂಬು ದೊರೆಯಿತು. ಇವರು ಕಳೆದ ವರ್ಷ ಚೆನ್ನೈನ ತಿಂಡಿವನಂನ ರೆಟ್ಟನೈ ಗ್ರಾಮದಲ್ಲಿ ವಕ್ಸನಾ ಫಾರ್ಮ್ ಸ್ಟೇ ಶುರು ಮಾಡಿದರು.

ಇದನ್ನೂ ಓದಿ : ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

‘ನಾನು ಸ್ವಂತ ಉದ್ಯೋಗ ಮಾಡಿಕೊಂಡೇ ಬಂದವಳು. ಮಸಾಲೆಗಳು, ಕ್ಯಾಂಡಲ್ ತಯಾರಿಕೆ, ಪಟಾಕಿಗಳನ್ನು ತಯಾರಿಸಿ ಮನೆಮನೆಗೆ ಹೋಗಿ ಮಾರಾಟ ಮಾಡುತ್ತಿದ್ದೆ. ಉತ್ತಮ ಗುಣಮಟ್ಟದ ಪದಾರ್ಥಗಳನ್ನು ತಯಾರಿಸುತ್ತೆನಾದ್ದರಿಂದ ನಿಯಮಿತವಾದ ಗ್ರಾಹಕರನ್ನು ಹೊಂದಿದ್ದೆ. ಆದರೆ ಆಕಸ್ಮಿಕ ಅಪಘಾತಕ್ಕೆ ಒಳಗಾದ್ದರಿಂದ ಉದ್ಯೋಗ ಕುಂಟುತ್ತ ನಡೆಯಿತು’

ಇದನ್ನೂ ಓದಿ : ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್

‘ಕಳೆದ ವರ್ಷ ಫಾರ್ಮ್​ ಸ್ಟೇ ಶುರುಮಾಡಿದೆ. ಇತ್ತೀಚೆಗೆ ಮಗಳು ಕಸ್ತೂರಿ ಶಿವರಾಮನ್​ (72) ಜೊತೆಗೂಡಿದಳು. ನಾವಿಬ್ಬರೂ ಈ ಕ್ಷೇತ್ರದಲ್ಲಿ ಅನನುಭವಿಗಳು. ಕಸ್ತೂರಿಯ ಮಗ ಕಿರುಬಾ ಶಂಕರ್ ಮತ್ತು ಅವನ ಮಗಳು ಕಲ್ಪಿತಾ ಇಬ್ಬರೂ ಜೊತೆಗೂ ಈ ಈ ಉದ್ಯಮವು ಯಶಸ್ವಿಯಾಗಲು ಸಹಕರಿಸಿದರು. ಮಾರ್ಕೆಟಿಂಗ್​, ಸೋಶಿಯಲ್ ಮೀಡಿಯಾ, ಗೂಗಲ್​ ರಿವ್ಯೂ ಕುರಿತಾಗಿ ನನಗೆ ಮೊಮ್ಮಗ ಮತ್ತು ಮರಿಮೊಮ್ಮಗಳು ಮಾಹಿತಿ ನೀಡುತ್ತಾರೆ.’ ಎನ್ನುತ್ತಾರೆ ಲಕ್ಷ್ಮೀ.

ವಕ್ಸನಾ ಫಾರ್ಮ್ ತನ್ನ ಪ್ರಾಕೃತಿಕ ಪರಿಸರ,​ ಹಳ್ಳಿಯ ಮತ್ತು ಹಳೆಯ ಪಾಕವಿಧಾನದ ಮೂಲಕ ಅತಿಥಿಗಳ ಗಮನ ಸೆಳೆದಿದೆ. ‘ನನ್ನ ತಾಯಿಯ ಪಾಕಜ್ಞಾನ 90 ವರ್ಷ ಹಳೆಯದು. ಇಲ್ಲಿ ಬರುವ ಅತಿಥಿಗಳು ಅವರ ಕೈಯಡುಗೆಯನ್ನು ನಿಜಕ್ಕೂ ಇಷ್ಟಪಡುತ್ತಾರೆ. ಆದರೆ ವಯಸ್ಸು ಮತ್ತು ಆರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಅಡುಗೆ ಮತ್ತು ಅತಿಥಿಗಳನ್ನು ಸಂಭಾಳಿಸುವುದು ಕಷ್ಟ. ಹಾಗಾಗಿ ಅವರು ಈಗ ಮಾರ್ಗದರ್ಶನ ಮಾಡುತ್ತಾರೆ.’ ಎನ್ನುತ್ತಾರೆ ಕಸ್ತೂರಿ.

ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

ಲಕ್ಷ್ಮೀಯವರಿಗೆ ಮೂರು ಮಕ್ಕಳಿದ್ದರು. ಅವರಲ್ಲಿ ಇಬ್ಬರು ತೀರಿಕೊಂಡರು. ಈಗ ಇದ್ದೊಬ್ಬ ಮಗಳು ಕಸ್ತೂರಿಯೊಂದಿಗೆ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟು ವರ್ಷವೂ ಗೃಹಿಣಿ ಜೀವನ ಪೂರೈಸಿದ ಕಸ್ತೂರಿ ಅವರಿಗೆ ಈ ಫಾರ್ಮ್​ ಸ್ಟೇ ಹೆಚ್ಚು ಸ್ವತಂತ್ರ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಸ್ವಂತ ಹಣಗಳಿಕೆಯಿಂದ ಮಕ್ಕಳು, ಮೊಮ್ಮಕ್ಕಳಿಗೆ ಉಡುಗೊರೆ ಕೊಡಲು ಈಗವರು ಸಶಕ್ತರಾಗಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:13 am, Wed, 8 February 23