Viral Video: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?

Columbia: ಎಷ್ಟೇ ವಯಸ್ಸಾದರೂ ಮನಸಿನ ಮೂಲೆಯಲ್ಲಿ ತನ್ನ ಹುಟ್ಟುಹಬ್ಬದ ಬಗ್ಗೆ ಯಾರಿಗೂ ಸಣ್ಣ ನಿರೀಕ್ಷೆ ಇದ್ದೇ ಇರುತ್ತದೆ. ಯಾರಾದರೂ ಶುಭಹಾರೈಸಿದಾಗ ಸಹಜವಾಗಿ ಅಚ್ಚರಿಯಾಗುತ್ತದೆ. ಅಂಥದ್ದರಲ್ಲಿ ಎಂಟರ ಎಳೆಯ ಪೋರನಿಗೆ ಅವನ ಸಹಪಾಠಿಗಳು ಸರ್​ಪ್ರೈಝ್​ ಪಾರ್ಟಿ ಏರ್ಪಡಿಸಿದಾಗ ಎಂಥ ಖುಷಿಯಾಗಬೇಡ? ನಿಮ್ಮ ಹೃದಯವನ್ನು ತಟ್ಟುವ ಕ್ಷಣಗಳು ಈ ವಿಡಿಯೋದಲ್ಲಿವೆ ನೋಡಿ.

Viral Video: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?
ಶುಭ ಹಾರೈಸಿ ಏಂಜೆಲ್ ನನ್ನು ಸರ್ಪೈಝ್​ ಗೊಳಿಸಿದ ಸಹಪಾಠಿಗಳು

Updated on: Nov 04, 2023 | 12:19 PM

Birthday: ಮಕ್ಕಳಿಗೆ ಹುಟ್ಟುಹಬ್ಬ ಎನ್ನುವುದು ಬದುಕಿನ ಅತ್ಯಂತ ಖುಷಿಯ ಕ್ಷಣ. ಇಡೀ ವರ್ಷ ಆ ಸಂಭ್ರಮವನ್ನೇ ಎದುರುಗೊಳ್ಳುತ್ತಿರುತ್ತಾರೆ. ತನ್ನ ಸ್ನೇಹಿತರೊಂದಿಗೆ, ಸಹಪಾಠಿಗಳೊಂದಿಗೆ ಆಚರಿಸಿಕೊಳ್ಳಲು ತವಕಿಸುತ್ತಿರುತ್ತಾರೆ. ಹುಟ್ಟುಹಬ್ಬದ ದಿನ ಅವರು ಸಂತೋಷ ಮತ್ತು ಉತ್ಸಾಹದ ಉತ್ತುಂಗದಲ್ಲಿ ತೇಲುತ್ತಿರುತ್ತಾರೆ. ಹೀಗಿರುವಾಗ  ಯಾರಾದರೂ ಕಣ್ಣೀರು ಹಾಕುತ್ತಾರೆಯೇ? ಆದರೆ ಈ 8 ವರ್ಷದ ಬಾಲಕ ಮಾತ್ರ ತನ್ನ ಹುಟ್ಟುಹಬ್ಬದ ದಿನ ಭಾವುಕನಾಗಿ (Emotional) ಕಣ್ಣೀರು ಹಾಕಿದ್ದಾನೆ. ವೈರಲ್ ಆಗಿರುವ ಈ ವಿಡಿಯೋವನ್ನು ನೋಡದ ನೆಟ್ಟಿಗರು ಈ ಭಾವಪೂರ್ಣ ಸನ್ನಿವೇಶದೊಂದಿಗೆ ತಮ್ಮ ಬಾಲ್ಯದ ನೆನಪಿಗೆ ಜಾರಿದ್ದಾರೆ.

ಇದನ್ನೂ ಓದಿ : Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊಲಂಬಿಯಾದ ಎಬೆಜಿಕೊದ 8 ವರ್ಷದ ಏಂಜೆಲ್ ಡೇವಿಡ್​ನ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಇದ್ದುದರಿಂದ ಅವನ ಹುಟ್ಟುಹಬ್ಬವನ್ನು ಆಚರಿಸುವುದು ಕಷ್ಟಕರವಾಗಿತ್ತು. ಇದನ್ನು ಅರಿತ ಅವನ ಶಿಕ್ಷಕರು  ಮತ್ತು ಸಹಪಾಠಿಗಳು ಸರ್​ಪ್ರೈಝ್ ಪಾರ್ಟಿ ಏರ್ಪಡಿಸಿದರು. ಹುಟ್ಟುಹಬ್ಬದ ದಿನ ಅವನು ಶಾಲೆಗೆ ಬರುತ್ತಿದ್ದಂತೆ ಅವನ ಸಹಪಾಠಿಗಳು ಅವನಿಗೆ ಶುಭಾಶಯ ಹಾರೈಸಿದ ರೀತಿಗೆ ಮತ್ತು ಆಪ್ತತೆಗೆ ಅಚ್ಚರಿ ಮತ್ತು ಖುಷಿಯಿಂದ ಅವನ ದುಃಖದ ಕಟ್ಟೆ ಒಡೆಯಿತು.

ಹುಟ್ಟುಹಬ್ಬದ ದಿನ ಭಾವುಕನಾದ ಬಾಲಕನ ವಿಡಿಯೋ

ಐದು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋವನ್ನು ಈತನಕ ಸುಮಾರು 25 ಮಿಲಿಯನ್​ ಜನರು ನೋಡಿದ್ದಾರೆ. 1.9 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಅನೇಕರು ಈ ಮಗುವಿಗೆ ಶುಭವನ್ನು ಹಾರೈಸಿದ್ದಾರೆ. ಕೆಲವರು ತಮ್ಮ ಬಾಲ್ಯವನ್ನು ನೆನೆದಿದ್ದಾರೆ. ಹುಟ್ಟುಹಬ್ಬ ಪ್ರತಿಯೊಬ್ಬರಿಗೂ ವಿಶೇಷ, ಎಷ್ಟೇ ವಯಸ್ಸಾದರೂ ಇನ್ನೊಬ್ಬರು ನಮಗೆ ಹಾರೈಸಲಿ ಎಂದು ಒಳಮನಸ್ಸು ಬಯಸುತ್ತಲೇ ಇರುತ್ತದೆ, ಅಂಥದ್ದರಲ್ಲಿ ಈ ಪುಟ್ಟ ಹುಡುಗನಿಗೆ ಅನ್ನಿಸದೇ ಇರದೇ? ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಕೋಕ್​ ಸ್ಟುಡಿಯೋದ ‘ಖಲಾಸಿ’ಗೆ ಬೆಡಗಿಯ ಬೆಲ್ಲಿ ಡ್ಯಾನ್ಸ್​; ವಾಹ್​ ಎಂದ ನೆಟ್ಟಿಗರು

ಈತನಕ ನನ್ನ ಹುಟ್ಟುಹಬ್ಬವನ್ನು ಯಾರೂ ಆಚರಿಸಲೇ ಇಲ್ಲ, ಇದನ್ನು ನೋಡಿ ನನಗೆ ನನ್ನ ಹುಟ್ಟುಹಬ್ಬವನ್ನೇ ಆಚರಿದಷ್ಟು ಖುಷಿ ಎನ್ನಿಸುತ್ತಿದೆ ಎಂದಿದ್ದಾರೆ ಕೆಲವರು. ಈ ಮಗುವಿಗೆ ಒಳ್ಳೆಯದಾಗಲಿ, ಶಾಲೆಯಲ್ಲಿ ಇಂಥ ವಾತಾವರಣ ಇದ್ದಾಗ ಎಂಥ ಮಗುವೂ ಆರೋಗ್ಯಕರವಾದ ಮನಸ್ಥಿತಿಯನ್ನು ಪಡೆಯುತ್ತದೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ