Video Viral: ವಾಷಿಂಗ್ ಮೆಷಿನ್ ಒಳಗೆ ಹೆಡೆಯೆತ್ತಿ ನಿಂತ ನಾಗರಹಾವು
ವಾಷಿಂಗ್ ಮೆಷಿನ್ ಒಳಗೆ ಬಟ್ಟೆ ಹಾಕು ಮುಂದಾದ ಮಹಿಳೆಗೆ ಐದು ಅಡಿ ಎತ್ತರದ ನಾಗರಹಾವು ಹೆಡೆಯೆತ್ತಿ ನಿಂತಿರುವುದು ಕಂಡುಬಂದಿದೆ. ಬಳಿಕ ಮಹಿಳೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ರಾಜಸ್ಥಾನ: ವಾಷಿಂಗ್ ಮೆಷಿನ್ನಲ್ಲಿ ನಾಗರಹಾವು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಮಹಿಳೆ ವಾಷಿಂಗ್ ಮೆಷಿನ್ನಲ್ಲಿ ಒಳಗೆ ಬಟ್ಟೆ ಹಾಕಲು ಮುಂದಾದಾಗ ಐದು ಅಡಿ ಎತ್ತರದ ನಾಗರಹಾವು ಹೆಡೆಯೆತ್ತಿ ನಿಂತಿದೆ. ಗಾಬರಿಗೊಂಡ ಮಹಿಳೆ ಕಿರುಚಾಡಿದ್ದು, ಬಳಿಕ ಕುಟುಂಬದ ಸದಸ್ಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕೋಟಾದ ಸ್ವಾಮಿ ವಿವೇಕಾನಂದನಗರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. @IVibhorAggarwal ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
#Kota– स्वामी विवेकानंदनगर में कपड़े धोने के दौरान वाशिंग मशीन में कोबरा नज़र आने से हड़कंप मच गया.#Snake #Cobra #Washingmachine #viralvideo #Trending #trendingvideo pic.twitter.com/iI02bZXBGj
— विभोर अग्रवाल🇮🇳 (@IVibhorAggarwal) August 21, 2024
ಇದನ್ನೂ ಓದಿ: ಸೌಂದರ್ಯ ಹೆಚ್ಚಿಸಲು 6 ಲಕ್ಷ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮಳೆಗಾಲದಲ್ಲಿ ಜಾಗರೂಕರಾಗಿರಲು, ಬಟ್ಟೆಯನ್ನು ವಾಷಿಂಗ್ ಮೆಷಿನ್ಗೆ ಹಾಕುವ ಮೊದಲು ಪರಿಶೀಲಿಸಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Wed, 21 August 24