ನಿಮಗೆ ತಿನ್ನುವಾಗ ಟಿವಿ, ಮೊಬೈಲ್ ನೋಡುವ ಅಭ್ಯಾಸವಿದೆಯಾ? ಈ ಅಭ್ಯಾಸ ಬಹುಪಾಲು ಜನರಿಗೆ ಇರುತ್ತದೆ. ಊಟ, ತಿಂಡಿ ಮಾಡುವಾಗ ಸಿನಿಮಾ ನೋಡುವುದು, ಹಾಡು ಕೇಳುವುದು, ಸೀರಿಯಲ್ ನೋಡುವುದು, ಟಿವಿ ನ್ಯೂಸ್ ನೋಡುವುದು ಇವೆಲ್ಲ ಮಾಮೂಲು. ಊಟ ಮತ್ತು ಟಿವಿ ಎರಡನ್ನೂ ಅವರು ಎಂಜಾಯ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯಾ? ಇದೇ ರೀತಿ ತಿಂಡಿ ತಿನ್ನುತ್ತಾ, ಸಿನಿಮಾ ನೋಡುತ್ತಾ ಇರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಹೀಗೆ ತಿನ್ನುವಾಗ ನಾವು ಎಷ್ಟು ಆಹಾರ ತಿನ್ನುತ್ತಿದ್ದೇವೆ, ನಮ್ಮ ಹೊಟ್ಟೆಗೆ ಎಷ್ಟು ಬೇಕು ಎಂಬುದೇ ಗೊತ್ತಾಗುವುದಿಲ್ಲ.
ಜನಪ್ರಿಯ ಹ್ಯಾಂಡಲ್ @chefkoudy ಮೂಲಕ ಈ ವೀಡಿಯೊವನ್ನು ಇನ್ಸ್ಟಾಗ್ರಾಂ ರೀಲ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಇದುವರೆಗೂ 2.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 2.50 ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ವೈರಲ್ ಆದ ಈ ವಿಡಿಯೋಗೆ ಸಾವಿರಾರು ಕಾಮೆಂಟ್‌ಗಳು ಕೂಡ ಬಂದಿವೆ. “ಸಿನಿಮಾ ಪ್ರಾರಂಭವಾಗುವ ಮೊದಲೇ ನೀವು ಆಹಾರವನ್ನು ಮುಗಿಸಿದಾಗ ಹೀಗಾಗುತ್ತದೆ” ಎಂದು ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.
ಸಿನಿಮಾ ನೋಡಲು ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಮುಂದೆ ಟೇಬಲ್ ತುಂಬ ತಿಂಡಿಗಳನ್ನು ಇಟ್ಟುಕೊಂಡಿದ್ದ. ಆದರೆ, ಸಿನಿಮಾ ಶುರುವಾಗುವ ಮೊದಲೇ ಆತ ಅದಷ್ಟೂ ತಿಂಡಿಗಳನ್ನು ಗಬಗಬನೆ ತಿಂದು ಮುಗಿಸಿದ್ದ. ಈ ವೈರಲ್ ವಿಡಿಯೋವನ್ನು ನೋಡಿದವರು ತಮ್ಮ ಕತೆಯೂ ಹೀಗೇ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಗೆ ಆರತಿ ಎತ್ತಿ ಸ್ವಾಗತ!; ನೀವೂ ಈ ವಿಡಿಯೋ ಕಣ್ತುಂಬಿಕೊಳ್ಳಿ
Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು
Published On - 5:56 pm, Fri, 25 February 22