ಮಗಳೇ ಪೈಲಟ್​; ಅಪ್ಪ ಮಗಳು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಹೃದಯಸ್ಪರ್ಶಿ ಗಳಿಗೆಗಳು

Pilot : ‘ಎಷ್ಟೋ ಸಲ ಹೆತ್ತವರ ಮುಖ ನೋಡದೆ ಅವರ ಆಶೀರ್ವಾದ ಪಡೆಯದೆ ಮಧ್ಯರಾತ್ರಿ ಮೂರು ನಾಲ್ಕಕ್ಕೆಲ್ಲ ನಾವು  ಕರ್ತವ್ಯಕ್ಕಾಗಿ ತೆರಳುತ್ತೇವೆ. ಹೀಗೆ ಹೊರಡುವಾಗ ಅವರ ಪಾದಗಳನ್ನು ನಮಸ್ಕರಿಸದೇ ಇರುವುದು ಅಪೂರ್ಣವೆನ್ನಿಸುತ್ತದೆ’

ಮಗಳೇ ಪೈಲಟ್​; ಅಪ್ಪ ಮಗಳು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಹೃದಯಸ್ಪರ್ಶಿ ಗಳಿಗೆಗಳು
ಪೈಲಟ್​ ಮಗಳು ಮತ್ತು ಅಪ್ಪ ಒಂದೇ ವಿಮಾನದಲ್ಲಿ ಪ್ರಯಾಣಿಸಿದಾಗ
Updated By: ಶ್ರೀದೇವಿ ಕಳಸದ

Updated on: Jan 17, 2023 | 6:11 PM

Viral Video : ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಹೀಗೆ ಗುರಿ ತಲುಪಿದರೆ ತಂದೆತಾಯಿಗೆ ಇನ್ನೇನು ಬೇಕು ಬದುಕಿನಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೈಲಟ್​ ಆಗಿರುವ ಮಗಳು ತನ್ನ ವಿಮಾನದಲ್ಲಿಯೇ ಅಪ್ಪನನ್ನೂ ಕರೆದೊಯ್ದಿದ್ದಾಳೆ. ಈ ವಿಡಿಯೋ ಅನ್ನು ಈತನಕ ಸುಮಾರು 8 ಮಿಲಿಯನ್​ ಮಂದಿ ನೋಡಿದ್ದಾರೆ.  ಹೃದಯಸ್ಪರ್ಶಿಯಾದ ವಿಡಿಯೋ ನೋಡುತ್ತ ಅನೇಕರು ಮನದುಂಬಿ ಪ್ರತಿಕ್ರಿಯಿಸುತ್ತಿದ್ದಾರೆ.

ಕ್ಯಾಪ್ಟನ್​ ಕೃತಜ್ಞಾ ಇದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನದಲ್ಲಿ ಕುಳಿತಿದ್ದ ಅಪ್ಪನ ಕಾಲು ಮುಟ್ಟಿ ನಮಸ್ಕರಿಸಿದ ಮಗಳು ಮಮತೆಯಿಂದ ಅವರನ್ನು ಆಲಂಗಿಸಿಕೊಳ್ಳುತ್ತಾಳೆ. ಅಪ್ಪ ಹನಿಗಣ್ಣಾಗುತ್ತಾರೆ. ‘ಎಷ್ಟೋ ಸಲ ಹೆತ್ತವರ ಮುಖ ನೋಡದೆ ಅವರ ಆಶೀರ್ವಾದ ಪಡೆಯದೆ ಮಧ್ಯರಾತ್ರಿ ಮೂರು ನಾಲ್ಕಕ್ಕೆಲ್ಲ ನಾವು  ಕರ್ತವ್ಯಕ್ಕಾಗಿ ತೆರಳುತ್ತೇವೆ. ಹೀಗೆ ಹೊರಡುವಾಗ ಅವರ ಪಾದ ನಮಸ್ಕರಿಸದೇ ಇರುವುದು ಅಪೂರ್ಣವೆನ್ನಿಸುತ್ತದೆ’ ಎಂದು ನೋಟ್​ ಬರೆದಿದ್ದಾರೆ ಕೃತಜ್ಞಾ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಈ ವಿಡಿಯೋ ನೋಡಿದ ಅನೇಕರು ಕೃತಜ್ಞಾ ಅವರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ನೀವು ನಿಮ್ಮ ತಂದೆತಾಯಿಗೆ ಮಾತ್ರ ಮಗಳಲ್ಲ. ನೀವು ನಮ್ಮ ದೇಶಕ್ಕೇ ಹೆಮ್ಮೆ ತರುವಂಥ ಮಗಳು. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ನಿಮ್ಮ ಸಾಧನೆ ಆಕಾಶವನ್ನು ತಾಕಲಿ. ನಿಮ್ಮನ್ನು ನಿಮ್ಮ ಕುಟುಂಬವನ್ನು ಭೇಟಿ ಮಾಡಬೇಕು ಎಂದು ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ನಾನಿಲ್ಲಿ ಅಳುತ್ತಿದ್ದೇನೆ, ನಿಮ್ಮೊಂದಿಗೆ ಅಲ್ಲಿ ನಾನ್ಯಾಕೆ ಇಲ್ಲವೆಂದು. ನಿಮ್ಮ ಬಗ್ಗೆ ಅಭಿಮಾನ ಹೆಮ್ಮೆ ಗೌರವ ಎಲ್ಲವೂ ಇದೆ ಎಂದಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಅನ್ನು ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 6:11 pm, Tue, 17 January 23